ನವದೆಹಲಿ:ಬಿಜೆಪಿಗೆ ಪಕ್ಷಾಂತರಗೊಂಡಿರುವ ತನ್ನ ಆಪ್ತ ಜ್ಯೋತಿರಾದಿತ್ಯ ಸಿಂಧಿಯಾ ಬಗ್ಗೆ ಮಾತನಾಡಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಸಿಂಧಿಯಾ ತನ್ನ ರಾಜಕೀಯ ಭವಿಷ್ಯದ ಚಿಂತೆಯಿಂದ ತನ್ನ ಆದರ್ಶಗಳನ್ನು ಬದಿಗೊತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್​, ಸಿಂಧಿಯಾ ಮನಸ್ಸಿನಲ್ಲಿರುವುದಕ್ಕೂ ಹಾಗೂ ಸದ್ಯ ಹೇಳುತ್ತಿರುವ ಮಾತಿಗೂ ತುಂಬಾನೇ ವ್ಯತ್ಯಾಸವಿದೆ. ಕಾಲೇಜು ದಿನಗಳಿಂದಲೂ ನಾವಿಬ್ಬರು ಒಬ್ಬರಿಗೊಬ್ಬರು ಚೆನ್ನಾಗಿ ಅರಿತಿದ್ದೇವೆ ಎಂದರು.
ಇದೊಂದು ಸಿದ್ಧಾಂತವಾದ ಹೋರಾಟ ಎಂಬುದು ಸ್ಪಷ್ಟವಾಗುತ್ತಿದೆ. ಕಾಂಗ್ರೆಸ್​ ಒಂದು ಬದಿಯಲ್ಲಿದ್ದರೆ, ಬಿಜೆಪಿ-ಆರ್​ಎಸ್​ ಇನ್ನೊಂದು ಬದಿಯಲ್ಲಿದೆ. ಸಿಂಧಿಯಾ ಕಾಲೇಜು ದಿನಗಳಲ್ಲಿ ನನ್ನೊಂದಿಗೆ ಇದ್ದಿದ್ದರಿಂದ ಅವರ ಸಿದ್ಧಾಂತ ಏನೆಂಬುದು ನನಗೆ ತಿಳಿದಿದೆ. ತನ್ನ ರಾಜಕೀಯ ಭವಿಷ್ಯದ ಬಗ್ಗೆ ಸಿಂಧಿಯಾ ಚಿಂತಿಸುತ್ತಿದ್ದರು. ಇದೀಗ ತನ್ನ ಸಿದ್ಧಾಂತವನ್ನು ಪಾಕೆಟ್​ನಲ್ಲಿಟ್ಟು ಆರ್​ಎಸ್​ಎಸ್​ನೊಂದಿಗೆ ಹೋಗಿದ್ದಾರೆ ಎಂದು ರಾಹುಲ್​ ಕಿಡಿಕಾರಿದರು.
ವಾಸ್ತವವೆಂದರೆ, ಸಿಂಧಿಯಾಗೆ ಬಿಜೆಪಿಯಲ್ಲಿ ಯಾವ ಗೌರವವೂ ಸಿಗುವುದಿಲ್ಲ. ಅವರ ಹೃದಯಕ್ಕೆ ಯಾವುದೇ ಸಮಾಧಾನವೂ ದೊರೆಯುವುದಿಲ್ಲ. ನಾವಿಬ್ಬರು ಹಳೆಯ ಸ್ನೇಹಿತರು ಎಂದು ತಿಳಿಸಿದರು.
ಮಧ್ಯಪ್ರದೇಶದ ಕಮಲ್​ನಾಥ್​ ಸರ್ಕಾರದ ವಿರುದ್ಧ ಸಿಡಿದೆದ್ದ ಸಿಂಧಿಯಾ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದಾರೆ. ಸಿಂಧಿಯಾರೊಂದಿಗೆ ಅವರ ಬೆಂಬಲಿತ ಶಾಸಕರು ಕೂಡ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದು, ಕಮಲ್​ನಾಥ್​ ಸರ್ಕಾರ ಪತನದ ಅಂಚಿನಲ್ಲಿದೆ.(ಏಜೆನ್ಸೀಸ್​)
ಜ್ಯೋತಿರಾದಿತ್ಯ ಸಿಂಧಿಯಾರ ಕೈ ಹಿಡಿದು ಸ್ವಾಗತ ಕೋರಿದ ಅಮಿತ್​ ಷಾ; ಪಕ್ಷದ ಬಲ ಹೆಚ್ಚಿತು ಎಂದ್ರು ರಾಜನಾಥ್​ ಸಿಂಗ್​

ತಮಿಳುನಾಡಿನ ಮುಖ್ಯಮಂತ್ರಿ ಹುದ್ದೆಗೆ ಏರಲಿದ್ದಾರಾ ತಲೈವಾ? ರಾಜಕೀಯಕ್ಕೆ ಇಳಿಯುವುದನ್ನು ದೃಢಪಡಿಸಿದ ನಟ ರಜನೀಕಾಂತ್ ನಿಲುವು ಹೀಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − twelve =
Remember me
