ಕಂಕೇರ್:ಕಾಂಗ್ರೆಸ್ ಪಕ್ಷವು ಪರಿವಾರ ವಾದ, ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ವಾಗ್ದಾಳಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ಹಳೆಯ ಪಕ್ಷ ಮತ್ತು ಅಭಿವೃದ್ಧಿ ಜತೆಜತೆಗೆ ಸಾಗಲು ಸಾಧ್ಯವಿಲ್ಲ ಎಂದು ಕುಟುಕಿದ್ದಾರೆ.
ವಿಧಾನಸಭೆ ಚುನಾವಣೆ ನಡೆಯಲಿರುವ ಛತ್ತೀಸ್​ಗಢದ ಕಂಕೇರ್ ಪಟ್ಟಣದಲ್ಲಿ ಗುರುವಾರ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯವನ್ನು ಲೂಟಿ ಮಾಡಿದವರನ್ನು ಬಿಡುವುದಿಲ್ಲ ಎಂದು ಹೇಳುವ ಮೂಲಕ ಭೂಪೇಶ್ ಬಘೕಲ್ ನೇತೃತ್ವದ ಸರ್ಕಾರದ ವಿರುದ್ಧ ಹರಿಹಾಯ್ದರು.
ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯದಿಂದ ಬಂದಿರುವ ಕಾರಣ 2014ರ ಲೋಕಸಭೆ ಚುನಾವಣೆಗೂ ಮುನ್ನ ತಮ್ಮನ್ನು ಕಾಂಗ್ರೆಸ್ ನಿಂದಿಸಿತ್ತು ಎಂದು ಅವರು ಆರೋಪಿಸಿದರು.
ಛತ್ತೀಸ್​ಗಢದ ಯುವಕರಿಗೆ ಕಾಂಗ್ರೆಸ್ ಅತಿದೊಡ್ಡ ದ್ರೋಹ ಕಾಂಗ್ರೆಸ್ ಮಾಡಿದೆ. ಅವರು ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲಿಲ್ಲ. ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ಎಸಗಿದರು. ರಾಜ್ಯದ ಲೋಕಸೇವಾ ಆಯೋಗವನ್ನು ಕಾಂಗ್ರೆಸ್ ಸಮಿತಿಯ ಕಚೇರಿಯನ್ನಾಗಿ ಪರಿವರ್ತಿಸಿದರು. ತಮ್ಮ ಮಕ್ಕಳು ಮತ್ತು ಸಂಬಂಧಿಕರನ್ನು ಉದ್ಯೋಗಗಳಿಗೆ ನೇಮಕ ಮಾಡಿಕೊಂಡರು ಎಂದು ಟೀಕಿಸಿದರು. ಪರಿವಾರವಾದ, ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರ ಕಾಂಗ್ರೆಸ್​ನ ನೀತಿ ಮತ್ತು ಸಂಪ್ರದಾಯವಾಗಿದೆ ಎಂದು ಮೋದಿ ಆರೋಪಿಸಿದರು.
ಕಾಂಗ್ರೆಸ್​ನಿಂದ ವಿರೋಧ:ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಬುಡಕಟ್ಟು ಕುಟುಂಬದ ಮಗಳನ್ನು ರಾಷ್ಟ್ರಪತಿ ಮಾಡಲು ಬಿಜೆಪಿ ನಿರ್ಧರಿಸಿತು. ಆದರೆ, ಕಾಂಗ್ರೆಸ್ ಇದನ್ನೂ ವಿರೋಧಿಸಿತು ಎಂದು ಅವರು ರಾಷ್ಟ್ರಪತಿ ದ್ರೌಪದಿ ಮುಮು ಅವರನ್ನು ಉಲ್ಲೇಖಿಸಿ ಹೇಳಿದರು. ಕಾಂಗ್ರೆಸ್ ಪಕ್ಷದ ವಿರೋಧವು ಬಿಜೆಪಿ ವಿರುದ್ಧವಾಗಿರಲಿಲ್ಲ; ಬದಲಾಗಿ ಬುಡಕಟ್ಟು ಮಗಳ ವಿರುದ್ಧವಾಗಿತ್ತು. ಛತ್ತೀಸ್​ಗಢದ ಪ್ರತಿಯೊಬ್ಬ ಬುಡಕಟ್ಟು ವ್ಯಕ್ತಿಯು ಬುಡಕಟ್ಟು ಮಗಳ ಈ ಅವಮಾನ ವನ್ನು ಯಾವಾಗಲೂ ನೆನಪಿಸಿಕೊಳ್ಳಬೇಕು ಮತ್ತು ಕಾಂಗ್ರೆಸ್ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದ ಪ್ರಧಾನಿ ಹೇಳಿದರು.
ನಿಮ್ಮ ಮಕ್ಕಳ ಕಾಳಜಿ ಇದೆ ನಮಗೆ:‘ಮೋದಿ ಮತ್ತು ಬಿಜೆಪಿಗೆ ನಿಮ್ಮ ಮಕ್ಕಳ ಬಗ್ಗೆ ಕಾಳಜಿ ಇದೆ. ಅದಕ್ಕೇ ನಾನು ಛತ್ತೀಸ್​ಗಢದ ಯುವಕರಿಗೆ ಹೇಳುತ್ತೇನೆ, ಛತ್ತೀಸ್​ಗಢವನ್ನು ಲೂಟಿ ಮಾಡಿದವನು ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಎಲ್ಲವನ್ನೂ ಹಿಂದಿರುಗಿಸಬೇಕಾಗುತ್ತದೆ. ಇದು ಮೋದಿ ಗ್ಯಾರಂಟಿ. ರಾಜ್ಯವನ್ನು ಲೂಟಿ ಮಾಡಿದ ಯಾರನ್ನೂ ಬಿಡುವುದಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕೆಲಸವನ್ನು ನೀವು ನನಗೆ ನೀಡಿದ್ದೀರಿ. ಮೋಜಿಗಾಗಿ ನೀವು ನನ್ನನ್ನು ಇಲ್ಲಿ ಕುಳಿತುಕೊಳ್ಳುವಂತೆ ಮಾಡಿಲ್ಲ’ ಎಂದು ಪ್ರಧಾನಿ ಹೇಳಿದರು.
ಬಂಗಲೆ, ಕಾರು ಹೆಚ್ಚಳ:ಛತ್ತೀಸ್​ಗಢದಲ್ಲಿ 5 ವರ್ಷಗಳ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಆ ಪಕ್ಷದ ನಾಯಕರ ಬಂಗಲೆಗಳು ಮತ್ತು ಕಾರುಗಳ ಸಂಖ್ಯೆ ಹೆಚ್ಚಾಯಿತು. ಅವರ ಮಕ್ಕಳು ಮತ್ತು ಸಂಬಂಧಿಕರು ಮಾತ್ರ ಪ್ರಯೋಜನ ಪಡೆದರು. ಬಡವರಿಗೆ ಲಾಭವಾಗಲಿಲ್ಲ ಎಂದು ಪ್ರಧಾನಿ ಆಪಾದಿಸಿದರು. ಕಾಂಗ್ರೆಸ್ ಇರುವಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ ಎಂದ ಮೋದಿ, ಛತ್ತೀಸ್​ಗಢವನ್ನು ದೇಶದ ಅಗ್ರ ರಾಜ್ಯಗಳ ಪಟ್ಟಿಯಲ್ಲಿ ಸೇರಿಸುವುದು ಹಾಗೂ ಬಡವರು, ಹಿಂದುಳಿದವರ ಹಿತಾಸಕ್ತಿಗಳನ್ನು ಕಾಪಾಡುವುದು ಬಿಜೆಪಿಯ ಆದ್ಯತೆಯಾಗಿದೆ, ಛತ್ತೀಸ್​ಗಢದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕೆಲಸಗಳನ್ನು ತ್ವರಿತಗೊಳಿಸಲಾಗುವುದು ಎಂದು ಪ್ರಧಾನಿ ಭರವಸೆ ನೀಡಿದರು.
3ಸಿ ಪಾರ್ಟಿ ಅಮಿತ್ ಷಾ ಲೇವಡಿ:ಕಾಂಗ್ರೆಸ್ ಪಕ್ಷವು ಕಟ್, ಕಮಿಷನ್ ಮತ್ತು ಕರಪ್ಷನ್ (ಭ್ರಷ್ಟಾಚಾರ) ಪಕ್ಷವಾಗಿದೆ ಎಂದು ಲೇವಡಿ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು, ಸ್ವಂತ ಹಿತಾಸಕ್ತಿಗಾಗಿ 27 ಪಕ್ಷಗಳು ಕೈಜೋಡಿಸಿವೆ ಎಂದು ಇಂಡಿಯಾ ಮೈತ್ರಿಕೂಟದ ವಿರುದ್ಧ ಟೀಕಿಸಿದರು. ಬಿಜೆಪಿಯು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ ಎಂದು ಅವರು ಪ್ರತಿಪಾದಿಸಿದರು. ಇಲ್ಲಿ ಆಯೋಜಿಸಿದ್ದ ಅಂತ್ಯೋದಯ ಸಮ್ಮೇಳನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಹರಿಯಾಣದ ಬಿಜೆಪಿ ಸರ್ಕಾರ ಕಳೆದ ಒಂಬತ್ತು ವರ್ಷಗಳಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಕೊನೆಗೊಳಿಸಿದೆ. ಕಾನೂನು-ಸುವ್ಯವಸ್ಥೆ ಪರಿಸ್ಥಿತಿಯನ್ನು ಸುಧಾರಿಸಿದೆ ಎಂದು ಶ್ಲಾಘಿಸಿದರು.
ಇಬ್ಬರ ಮಧ್ಯೆ ಮನಸ್ತಾಪ ಬಂದ ಮಾತ್ರಕ್ಕೆ ಅತ್ಯಾಚಾರ ಪ್ರಕರಣ ದಾಖಲಿಸುವುದು ಸರಿಯಲ್ಲ: ಹೈಕೋರ್ಟ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
