ಬೆಂಗಳೂರು:ಇಂದು ಯಾವುದೇ ಕ್ಷೇತ್ರದಲ್ಲಿಯಾಗಲೀ ಪೈಪೋಟಿ ಸಹಜ. ವಿಶೇಷವಾಗಿ ಫುಡ್ ಇಂಡಸ್ಟ್ರಿಯಲ್ಲಿ ಗ್ರಾಹಕರನ್ನು ಸೆಳೆಯಲು ಮಾಲೀಕರು ಪಡುವ ಕಸರತ್ತು ಅಷ್ಟಿಷ್ಟಲ್ಲ. ಇಲ್ಲೊಂದೆಡೆ ಹಾಗೆಯೇ ಆಗಿದೆ. ಓರ್ವ ವ್ಯಾಪಾರಿ ಗ್ರಾಹಕರನ್ನು ತನ್ನತ್ತ ಸೆಳೆಯಲು ಐಸ್ ಕ್ರೀಂ ಅನ್ನು ವಿಶೇಷವಾಗಿ ಅಕಂಕರಿಸಿದ್ದಾನೆ. ಆದರೆ ಈ ಐಸ್​​ ಕ್ರೀಂ ನೋಡಿದಾಗ ನಿಮ್ಮ ಮನಸ್ಸಿನಲ್ಲಿ ಥಟ್ ಅಂತ ಯಾವ ಯೋಚನೆ ಬರುತ್ತದೆ ಎಂಬುದನ್ನು ನೀವೇ ಹೇಳಬೇಕು.
ಹೌದು. ಈ ಐಸ್ ಕ್ರೀಂ ನೋಡಿದ ಕೂಡಲೇ ಯಾರಿಗಾದರೂ ಸವಿಯಬೇಕೆನಿಸುವುದಿರಲಿ, ಓಡಿ ಹೋದರೆ ಸಾಕು ಅನಿಸಬಹುದು. ಹೀಗೆಂದು ಹೇಳುತ್ತಿರುವುದು ನಾವಲ್ಲ ಸೋಶಿಯಲ್ ಮೀಡಿಯಾ ಬಳಕೆದಾರರು.
@creepycum ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಕೆಲವು ಐಸ್ ಕ್ರೀಮ್‌ಗಳು ಕಂಡುಬರುತ್ತವೆ. ಐಸ್ ಕ್ರೀಮ್‌ಗಳಲ್ಲಿ ಮಗುವಿನ ಮುಖ, ಕಣ್ಣಿನ ಆಕಾರ ಕೆತ್ತಲಾಗಿದೆ. ಇದು ‘ವುಡ್ಸ್ ಆಫ್ ಟೆರರ್’ ನ ದೃಶ್ಯ ಎಂದು ಹೇಳಲಾಗಿದೆ. ‘ವುಡ್ಸ್ ಆಫ್ ಟೆರರ್’ ಅಮೆರಿಕದ ಉತ್ತರ ಕೆರೊಲಿನಾದಲ್ಲಿರುವ ದೆವ್ವದ ಮನೆ.
ಆದರೂ ಐಸ್ ಕ್ರೀಮ್‌ ಮೇಲೆ ಈ ರೀತಿಯಾಗಿ ಮಕ್ಕಳ ಮುಖವನ್ನು ಬಳಸಿರುವುದು ಅಚ್ಚರಿ ಮೂಡಿಸುತ್ತದೆ. ಐಸ್ ಕ್ರೀಮ್ ಮೇಲೆ ಕೆಂಪು ಬಣ್ಣವೂ ಇದೆ, ಅದು ರಕ್ತದಂತೆ ಕಾಣುತ್ತದೆ. ತಲೆಯ ಮೇಲೆ ಕೆಂಪು ಬಣ್ಣ ಮತ್ತು ಚೆರ್ರಿ ಇದೆ. ಇದು ತಿನ್ನಬಹುದಾದ ಐಸ್ ಕ್ರೀಂ ಹೌದೋ, ಅಲ್ಲವೋ ಎಂಬುದು ವಿಡಿಯೋದಿಂದ ಸ್ಪಷ್ಟವಾಗಿಲ್ಲ, ಆದರೆ ಮಕ್ಕಳ ಕಣ್ಣುಗಳು ಮೇಲ್ಮುಖವಾಗಿ ನೋಡುತ್ತಿರುವುದನ್ನು ನೋಡಿದರೆ, ಇದನ್ನು ನೋಡಿದ ನಂತರ ಜನರಿಗೆ ಹಸಿವಾಗುವುದಿಲ್ಲ, ಭಯವಾಗುತ್ತದೆ.

A post shared by creepycum (@creepycum)

ವಿಡಿಯೋ ವೈರಲ್ಸದ್ಯ ಈ ವಿಡಿಯೋ 1.4 ಕೋಟಿ ವೀಕ್ಷಣೆ ಪಡೆದಿದ್ದು, ಹಲವರು ವಿಡಿಯೋಗೆ ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ಹೊರಹಾಕಿದ್ದಾರೆ. “ಇಂತಹ ಕ್ರೂರ ಹೃದಯವನ್ನು ಜನರು ಹೊಂದಲು ಹೇಗೆ ಸಾಧ್ಯ”, “ಇದು ತುಂಬಾ ಅಸಹ್ಯಕರವಾಗಿ ಕಾಣುತ್ತದೆ”, “ಇದನ್ನು ಜನರಿಗೆ ತೋರಿಸಬೇಕೋ ಅಥವಾ ಅವರನ್ನು ಹೆದರಿಸಬೇಕೋ”? ಎಂದರೆ, ಮತ್ತೆ ಕೆಲವರು ಅಂಗಡಿಯ ಹೆಸರು ಕೇಳುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − sixteen =
Remember me
