ನವದೆಹಲಿ:ಕರೊನಾ ಹಿನ್ನೆಲೆಯಲ್ಲಿ ವರ್ಕ್​ ಫ್ರಮ್ ಹೋಮ್​ ಅವಕಾಶ ನೀಡಿರುವುದರಿಂದ ಬಹಳಷ್ಟು ಉದ್ಯೋಗಿಗಳಿಗೆ ಆರಾಮ್ ಎನಿಸಿದ್ದರೆ, ಹಲವಾರು ಕಂಪನಿಗಳಿಗೆ ಇದು ನಡುಕ ಉಂಟುಮಾಡಿದೆ. ಸಿಸ್ಕೋ ವರದಿ ಈ ವಿಷಯವನ್ನು ಹೊರಗೆಡಹಿದೆ. ವರ್ಕ್​ ಫ್ರಮ್​ ಹೋಮ್​ ಅವಕಾಶ ನೀಡುವುದರಿಂದ ಕಂಪನಿಗಳು ಆತಂಕ ಎದುರಿಸಿವೆ ಎಂಬುದನ್ನು ಈ ವರದಿ ಹೇಳಿದೆ.
ವರ್ಕ್​ ಫ್ರಮ್​ ಹೋಮ್​ ಕಾರಣಕ್ಕೆ ಭಾರತದ ಕಾಲು ಭಾಗಕ್ಕೂ ಅಧಿಕ ಕಂಪನಿಗಳಲ್ಲಿ ಸೈಬರ್​ ಥ್ರೆಟ್​ ಪ್ರಮಾಣ ಶೇ. 25 ಅಧಿಕಗೊಂಡಿದೆ. ಮಾತ್ರವಲ್ಲ ಈ ಕಂಪನಿಗಳಿಗೆ ಸೈಬರ್​ ಸೆಕ್ಯುರಿಟಿ ಸವಾಲಾಗಿ ಪರಿಣಮಿಸಿದ್ದು, ಕಂಪನಿಗಳು ಸೈಬರ್ ಸೆಕ್ಯುರಿಟಿ ಹೆಚ್ಚಿಸಿಕೊಳ್ಳುವಲ್ಲಿ ಹೆಚ್ಚಿನ ಆದ್ಯತೆ ನೀಡುವಂತಾಗಿದೆ ಎಂಬುದು ವರದಿಯಲ್ಲಿ ಉಲ್ಲೇಖಗೊಂಡಿದೆ.
ಕರೊನಾ ಬಳಿಕವೂ ಭಾರತದ ಶೇ. 53 ಕಂಪನಿಗಳು ಅರ್ಧಕ್ಕೂ ಹೆಚ್ಚು ಸಿಬ್ಬಂದಿಗೆ ವರ್ಕ್​ ಫ್ರಮ್​ ಹೋಮ್​ನಲ್ಲೇ ಕೆಲಸ ಮಾಡಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿವೆ. ಆದರೆ ಈ ಸಂದರ್ಭ ರಿಮೋಟ್ ಆ್ಯಕ್ಸೆಸ್​ ಕೊಡಬೇಕಾದ್ದರಿಂದ ಸೈಬರ್​ ಥ್ರೆಟ್​ ಹೆಚ್ಚಿರಲಿದ್ದು, ಆ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಿದೆ. ಶೇ. 77 ಕಂಪನಿಗಳು ಭವಿಷ್ಯದಲ್ಲಿ ತಮ್ಮ ಸೈಬರ್ ಸೆಕ್ಯುರಿಟಿ ಮೇಲೆ ಹೆಚ್ಚಿನ ಬಂಡವಾಳ ಹೂಡಲು ನಿರ್ಧರಿಸಿವೆ ಎಂಬ ಎಂಬುದನ್ನು ವರದಿಯಲ್ಲಿ ಹೇಳಲಾಗಿದೆ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − 2 =
Remember me
