ನವದೆಹಲಿ: ಕರೊನಾ ಲಾಕ್​ಡೌನ್​ ಘೋಷಣೆ ಆಗುವ ತನಕವೂ ವರ್ಕ್​ ಫ್ರಂ ಹೋಮ್​ ಸಂಸ್ಕೃತಿ ಕೇವಲ ಕಾರ್ಪೊರೇಟ್​ ಕ್ಷೇತ್ರದಲ್ಲಷ್ಟೇ ಇತ್ತು. ಆದರೆ, ಇದೀಗ ಸರ್ಕಾರವೂ ಅದನ್ನು ಸಹಜವಾಗಿ ಸ್ವೀಕರಿಸಿದ್ದು, ಈ ಸಂಬಂಧ ಕರಡು ಮಾರ್ಗಸೂಚಿಯನ್ನೂ ಪ್ರಕಟಿಸಿ ಗಮನಸೆಳೆದಿದೆ. ಲಾಕ್​ಡೌನ್ ಅವಧಿಯಲ್ಲಿ ಅಧಿಕಾರಿಗಳಿಗೂ ಮನೆಯಿಂದಲೇ ಕೆಲಸ ಮಾಡುವುದಕ್ಕೆ ಅನುವೂ ಮಾಡಿಕೊಟ್ಟಿತ್ತು. ಈಗ ಅದನ್ನು ಲಾಕ್​ಡೌನ್ ಮುಗಿದ ನಂತರವೂ ಅಗತ್ಯ ಇದ್ದಾಗ ಬಳಸುವಂತೆ ನಿಯಮ ಪರಿಷ್ಕರಣೆ ಮಾಡುವ ಕೆಲಸವನ್ನು ಸರ್ಕಾರ ಮಾಡಿದೆ.
ಇದನ್ನೂ ಓದಿ:ಸ್ಥಳೀಯ ಉತ್ಪನ್ನಗಳ ಮಹತ್ವ ತಿಳಿಸಿದೆ ಕೊವಿಡ್​-19, ಸ್ವಾವಲಂಬಿಯಾಗುವುದೇ ಗುರಿ: ಪ್ರಧಾನಿ ಮೋದಿ
ಕರಡು ನಿಯಮ ಪ್ರಕಾರ, ಡಿಪಾರ್ಟ್​ಮೆಂಟ್ ಆಫ್ ಪರ್ಸೋನೆಲ್​ ಆ್ಯಂಡ್ ಟ್ರೇನಿಂಗ್ (ಡಿಒಪಿಟಿ) ಅರ್ಹ ಅಧಿಕಾರಿ/ಸಿಬ್ಬಂದಿಗೆ ವರ್ಷ ಒಂದರ ಅವಧಿಯಲ್ಲಿ 15 ದಿನ ವರ್ಕ್​ ಫ್ರಂ ಹೋಮ್ ನೀಡುವ ಆಯ್ಕೆಯನ್ನು ಒದಗಿಸುವ ಸಾಧ್ಯತೆಗಳು ದಟ್ಟವಾಗಿದೆ. ದೇಶದಲ್ಲಿ ಒಟ್ಟು 48.34 ಲಕ್ಷ ಕೇಂದ್ರ ಸರ್ಕಾರಿ ನೌಕರರಿದ್ದಾರೆ.
ಇದನ್ನೂ ಓದಿ:ಸ್ಥಳೀಯ ಉತ್ಪನ್ನಗಳ ಮಹತ್ವ ತಿಳಿಸಿದೆ ಕೊವಿಡ್​-19, ಸ್ವಾವಲಂಬಿಯಾಗುವುದೇ ಗುರಿ: ಪ್ರಧಾನಿ ಮೋದಿ
ಎಲ್ಲ ಇಲಾಖೆಗಳಿಗೂ ಕಳುಹಿಸಿರುವ ಸುತ್ತೋಲೆಯಲ್ಲಿ ಸಿಬ್ಬಂದಿ ಸಚಿವಾಲಯ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಅನೇಕ ಕಚೇರಿಗಳಲ್ಲಿ ವರ್ಕ್ ಫ್ರಂ ಹೋಮ್ ಸೌಲಭ್ಯ ಒದಗಿಸುವ ಸನ್ನಿವೇಶವನ್ನು ಕೋವಿಡ್ 19 ಸೃಷ್ಟಿ ಮಾಡಿತು.ಲಾಕ್​ಡೌನ್ ಅವಧಿಯಲ್ಲಿ ಇ-ಆಫೀಸ್​, ವಿಡಿಯೋ ಕಾನ್ಫರೆನ್ಸ್ ಸೌಲಭ್ಯಗಳನ್ನೂ ಬಳಸಿಕೊಳ್ಳಲಾಗಿದೆ. ಭಾರತ ಸರ್ಕಾರದ ಮಟ್ಟದಲ್ಲಿ ಇಂತಹ ಅನುಭವ ಇದೇ ಮೊದಲನೆಯದು.ಸದ್ಯೋಭವಿಷ್ಯದಲ್ಲಿ ಇದು ಇನ್ನಷ್ಟು ಅಗತ್ಯವಾಗಿರಲಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಲಿದೆ. ಈ ಸಂಬಂಧ ವಿಸ್ತೃತ ನಿಯಮದ ಅವಶ್ಯಕತೆ ಇದ್ದು, ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ಅರ್ಹರಿಗೆ ಒದಗಿಸುವ ಕುರಿತು ಚಿಂತನೆ ನಡೆದಿದೆ ಎಂದು ಹೇಳಿದೆ.
ಇದನ್ನೂ ಓದಿ:54 ವರ್ಷದ ಮಹಿಳೆಗೆ ಅವಳಿ ಮಕ್ಕಳು, ಪತಿಗೆ 64 ವರ್ಷ- ದಂಪತಿಯ ಬದುಕೇ ಒಂದು ಕರುಣಾಜನಕ ಕಥೆ
ಇದಕ್ಕೆ ಪೂರಕವಾಗಿ, ಸರ್ಕಾರದ ಕೆಲಸ ಯಾವುದೇ ಅಡಚಣೆ ಇಲ್ಲದೆ ಮುಂದುವರಿಯುವುದಕ್ಕೆ ಬೇಕಾದ ಹೊಸ ಸಾಮಾನ್ಯ ಕಾರ್ಯಾಚರಣೆ ಪ್ರಕ್ರಿಯೆಗಳು ಅಂತಿಮಗೊಳ್ಳುತ್ತಿದ್ದು,ಶೀಘ್ರವೇ ಅವುಗಳು ಚಾಲ್ತಿಗೆ ಬರಲಿವೆ. ಆಯಾ ಸಚಿವಾಲಯಗಳು ತಮ್ಮ ಉದ್ಯೋಗಿಗಳಿಗೆ ಇದಕ್ಕೆ ಸಂಬಂಧಿಸಿದ ಮೂಲಸೌಕರ್ಯವನ್ನು ಒದಗಿಸಲಿವೆ. ಇಂಟರ್​ನೆಟ್ ಸೇವೆಗೆ ವ್ಯಯಿಸಿದ ಹಣವನ್ನೂ ಉದ್ಯೋಗಿಗಳಿಗೆ ಮರುಪಾವತಿಸುವ ಚಿಂತನೆಯೂ ಇದೆ. ಪ್ರಸ್ತುತ 75 ಸಚಿವಾಲಯಗಳು/ಇಲಾಖೆಗಳು ಇ-ಆಫೀಸ್ ವೇದಿಕೆಯನ್ನು ಸಕ್ರಿಯವಾಗಿ ಬಳಸಿಕೊಳ್ಳುತ್ತಿವೆ.ಈ ಪೈಕಿ ಶೇಕಡ 80 ರಷ್ಟು ಕಚೇರಿ ಕೆಲಸ ಕಂಪ್ಯೂಟರ್​ಗಳ ಮೂಲಕವೇ ಆಗುತ್ತಿದೆ.ಕೆಲವೊಂದು ರಹಸ್ಯ ಕಡತಗಳ ವಿಲೇವಾರಿಯನ್ನು ಮನೆಯಲ್ಲಿ ಕುಳಿತು ಮಾಡಲಾಗದು. ಹೀಗಾಗಿ ಕಚೇರಿಗೆ ಬರುವುದು ಅನಿವಾರ್ಯ ಎಂದು ಕರಡು ನಿಯಮ ಹೇಳಿದೆ. (ಏಜೆನ್ಸೀಸ್)
ಅಪ್ಪನ ಬೆನ್ನಿಗೆ ಚೂರಿ ಇಟ್ಟ ಆ ಹುಡುಗ, “ಬೈಕ್ ಓಡಿಸು” ಅಂದ; ಮುಂದೇನಾಯಿತು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 1 =
Remember me
