ನವದೆಹಲಿ:ಮುಂದಿನ ವಾರದಿಂದ ಭಾರತೀಯ ಮಾರುಕಟ್ಟೆಯಲ್ಲಿ ರಷ್ಯಾದ ಕರೊನಾ ಲಸಿಕೆ ಸ್ಪುಟ್ನಿಕ್​ ವಿ ಲಭ್ಯವಿರಲಿದೆ ಎಂಬ ಮಾಹಿತಿ ತಿಳಿದುಬಂದಿದೆ. ಸ್ಪುಟ್ನಿಕ್​ ಲಸಿಕೆಯನ್ನು ಗಾಮಲಯಾ ನ್ಯಾಷನಲ್​ ಸೆಂಟರ್​ ಆಫ್​ ರಷ್ಯಾ ಅಭಿವೃದ್ಧಿಪಡಿಸಿದ್ದು, ದೇಶದಲ್ಲಿ ಬಳಸಲ್ಪಡುವ ಮೂರನೇ ಕರೊನಾ ಲಸಿಕೆಯಾಗಲಿದೆ.
ದೇಶಾದ್ಯಂತ ಮಾರುಕಟ್ಟೆಗಳಲ್ಲಿ ಮುಂದಿನ ವಾರದಿಂದ ಸ್ಪುಟ್ನಿಕ್​ ಲಸಿಕೆ ಲಭ್ಯವಿರಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ಮಹತ್ವದ ಘೋಷಣೆ ಮಾಡಿದೆ. ರಷ್ಯಾದಿಂದ ಸುಮಾರು 150,000 ಡೋಸ್​ ಸ್ಪುಟ್ನಿಕ್​ ವಿ ಲಸಿಕೆ ಹೈದರಾಬಾದ್ ತಲುಪಿದ 12 ದಿನಗಳ ಬಳಿಕ ಕೇಂದ್ರ ಸರ್ಕಾರ ಈ ಘೋಷಣೆ ಮಾಡಿದೆ. ​
ಇಡೀ ದೇಶ ಕರೊನಾ ಕಪಿಮುಷ್ಠಿಯಲ್ಲಿ ಸಿಲುಕಿರುವಾಗ ಸ್ಪುಟ್ನಿಕ್​ ಲಸಿಕೆ ಬಳಕೆ ಕೊಂಚ ನಿರಾಳ ತರುವ ಭರವಸೆ ಇದೆ. ಭಾರತದಲ್ಲಿ ಬಳಲಾಗುವ ಮೂರನೇ ಲಸಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈಗಾಗಲೇ ದೇಶದಲ್ಲಿ ಕೋವಾಕ್ಸಿನ್​ ಮತ್ತು ಕೋವಿಶೀಲ್ಡ್​ ಎಂಬ ದೇಶೀಯ ಲಸಿಕೆಯನ್ನು ಬಳಸಲಾಗುತ್ತಿದೆ.
ಲಸಿಕೆಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲ ಸ್ಪುಟ್ನಿಕ್​ ಕರೊನಾ ಲಸಿಕೆ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಲಸಿಕೆಗೆ ದರ ನಿಗದಿ ಮಾಡಲಾಗಿದ್ದು, ಭಾರತೀಯ ಮಾರುಕಟ್ಟೆಗಳಲ್ಲಿ ಸ್ಪುಟ್ನಿಕ್​ ಲಸಿಕೆ 750 ರೂಪಾಯಿಗೆ ದೊರೆಯಲಿದೆ.
ಕಳೆದ ತಿಂಗಳು ಇಂಡಿಯನ್ ರೆಗ್ಯುಲೇಟರಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಸ್ಪುಟ್ನಿಕ್​ ವಿ ಲಸಿಕೆ ಬಳಕೆ ಅನುಮೋದನೆಯನ್ನು ನೀಡಿದೆ.
91.6 ಪ್ರತಿಶತದಷ್ಟು ಪರಿಣಾಮಕಾರಿತ್ವವನ್ನು ಹೊಂದಿರುವ ಕೋವಿಡ್ ವಿರುದ್ಧದ ವಿಶ್ವದ ಮೊದಲ ಲಸಿಕೆ ಸ್ಪುಟ್ನಿಕ್ ವಿ ಎಂದು ತಿಳಿದಿದೆ. ಲಾನ್ಸೆಟ್‌ನಲ್ಲಿ ಪ್ರಕಟವಾದ ಕ್ಲಿನಿಕಲ್ ಟ್ರಯಲ್​ನಲ್ಲಿ ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಕಂಡುಬಂದಿದೆ.(ಏಜೆನ್ಸೀಸ್​)
ಓಟಿಟಿಯಲ್ಲಿ ರಾಧೆ ಹೊಸ ದಾಖಲೆ; ಸಲ್ಮಾನ್ ಖಾನ್ ಹೊಸ ಸಿನಿಮಾ

ನರ್ಸ್​ನಿಂದ ರೇಪ್​ ಆದ 24 ಗಂಟೆಯೊಳಗೆ ಕರೊನಾ ಸೋಂಕಿತೆ ಸಾವು! ಸ್ಟಾಫ್​ ನರ್ಸ್ ​ಅನ್ನು ಬಿಟ್ಟಿಲ್ಲ ಕಾಮುಕ

ಬಿಗ್ ಸುಂದರಿಯರ ಬಗೆ ಬಗೆ ಮಾತು…: 72 ದಿನಗಳ ಕಿರು ಅನುಭವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
