ಜಲಂಧರ್:70 ಅಡಿ ಆಳದ ಕಂದಕದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕನನ್ನು ಸುಮಾರು 45 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹೊರತೆಗೆದಿರುವ ಘಟನೆ ಪಂಜಾಬ್‌ನ ಜಲಂಧರ್ ಜಿಲ್ಲೆಯಲ್ಲಿ ನಡೆದಿದೆ.ಸುರೇಶ್ (55) ಎಂಬಾತನೇ ಕಂದಕದಲ್ಲಿ ಸಿಲುಕಿದ್ದ ಕಾರ್ಮಿಕನಾಗಿದ್ದು, ಈತ ಪವನ್​ ಎಂಬಾತನ ಸೇರಿ ಶನಿವಾರದಂದು ದೆಹಲಿ-ಕತ್ರಾ ಎಕ್ಸ್‌ಪ್ರೆಸ್‌ ರಸ್ತೆ ನಿರ್ಮಾಣ ನಿರ್ಮಾಣದ ಭಾಗವಾಗಿ ಯೋಜನೆಯ ಭಾಗವಾಗಿ ಪಿಲ್ಲರ್ ನಿರ್ಮಿಸಲು ಕಂದಕವನ್ನು ತೋಡಲಾಗಿತ್ತು. ಈ ವೇಳೆ ಕಂದಕದ ಕೆಳಗೆ ಸಿಲುಕಿಕೊಂಡಿದ್ದ ಬೋರಿಂಗ್ ಯಂತ್ರದ ಕೆಲವು ಭಾಗವನ್ನು ತೆಗೆಯಲು ಇದರಲ್ಲಿ ಇಳಿದಿದ್ದರು.ಇದನ್ನೂ ಓದಿ:ತಂದೆಯ ಮೃತದೇಹದ ಮೇಲೆ ಅಳುತ್ತಲೇ ಕೊನೆಯುಸಿರೆಳೆದ ಮಗಳುತಮ್ಮ ಕೆಲಸದ ಮುಗಿದ ನಂತರ ಪವನ್ ಹೊರಗೆ ಬರುವಾಗ ಸುರೇಶ್ ಮೇಲೆ ಮರಳು ಬಿದ್ದಿದ್ದು, ಆತ ಕಂದಕದಲ್ಲಿಯೇ ಸಿಕ್ಕಿಬಿದ್ದಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡವು ಶನಿವಾರ ಸಂಜೆ ತನ್ನ ಕಾರ್ಯಚಾರಣೆಯನ್ನು ಆರಂಭಿಸಿದ್ದು, ಕೆಲಸದಲ್ಲಿ ಅನುಭವ ಹೊಂದಿರುವ ಇಬ್ಬರೂ ಕಾರ್ಮಿಕರ ಸಹಾಯದಿಂದ ಆತನಿಗೆ ಸಿಲಿಂಡರ್‌ಳ ಸಹಾಯದಿಂದ ಆಮ್ಲಜನಕವನ್ನು ಪೂರೈಸಿಲಾಗಿತ್ತು.ಈ ಕಾರ್ಯಾಚರಣೆಯುಭಾನುವಾರ ಮತ್ತು ಸೋಮವಾರದಂದು ಸಹ ಮುಂದುವರೆದಿದ್ದು, ಕೊನೆಗೆ ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಸುರೇಶ್​ನನ್ನು ಹೊರತೆಗೆದು ಆಂಬ್ಯುಲೆನ್ಸ್‌ನಲ್ಲಿ ಜಲಂಧರ್ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಆತನ ಆರೋಗ್ಯದ ಸ್ಥಿತಿಯ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.(ಏಜೆನ್ಸೀಸ್​)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × 3 =
Remember me
