ನವದೆಹಲಿ:ಕಳೆದ ಕೆಲವು ದಶಕಗಳಲ್ಲಿ ಭಾರತದಾದ್ಯಂತ ಸಾವಿರಾರು ಸಾವುಗಳಿಗೆ ಕಾರಣವಾದ ಹೀಟ್​ ವೇವ್​ ಆತಂಕಕಾರಿಯಾಗಿ ಹೆಚ್ಚಾಗುತ್ತಿದೆ. ಶೀಘ್ರದಲ್ಲೇ ದೇಶದಲ್ಲಿ ಮನುಷ್ಯನ ದೇಹ ಸಹಿಸಲಾಗದಷ್ಟು ಶಾಖ ಹೆಚ್ಚಾಗಲಿದೆ ಎಂದು ವಿಶ್ವ ಬ್ಯಾಂಕ್​ ಒಕ್ಕೂಟ ವರದಿ ಮಾಡಿದೆ. ಬ್ಯಾಂಕ್​ಗೂ ಹವಾಮಾನಕ್ಕೂ ಏನಪ್ಪಾ ಸಂಬಂಧ ಎಂಬ ಪ್ರಶ್ನೆ ಎದ್ದಿರಬಹುದು. ಅದಕ್ಕೆ ಉತ್ತರ ಇಲ್ಲಿದೆ .
“ಭಾರತದ ಏರ್​ ಕಂಡೀಷನಿಂಗ್​ ವಲಯದಲ್ಲಿನ ಹೂಡಿಕೆಯ ಅವಕಾಶಗಳು” ಎಂಬ ಶೀರ್ಷಿಕೆಯ ವಿಶ್ವ ಬ್ಯಾಂಕ್ ವರದಿ ಪ್ರಕಾರ ದೇಶದಲ್ಲಿ ತಾಪಮಾನ ಹೆಚ್ಚಾಗಿದೆ. ಈ ಪರಿಸ್ಥಿತಿ ಇನ್ನೂ ದೀರ್ಘಕಾಲದವರೆಗೆ ಇರಲಿದೆ ಎಂದು ವರದಿ ಹೇಳಿದೆ.
‘2022ರ ಏಪ್ರಿಲ್​ನಲ್ಲಿ ಭಾರತದಲ್ಲಿ ಸೆಖೆ ವಿಪರರೀತವಾಗಿ ಹೆಚ್ಚಾಗಿತ್ತು. ನವದೆಹಲಿಯಲ್ಲಿ ತಾಪಮಾನ 46 ಡಿಗ್ರಿ ಸೆಲ್ಸಿಯಸ್​ಗೆ ಏರಿತ್ತು. ಮಾರ್ಚ್‌ ತಿಂಗಳಿನಲ್ಲಿ ಅತೀ ಹೆಚ್ಚು ತಾಪಮಾನ ದಾಖಲಾಗಿತ್ತು” ಎಂದು ವರದಿ ಹೇಳಿದೆ.
ಕೇರಳ ಸರ್ಕಾರದ ಜೊತೆ ಸೇರಿ ವಿಶ್ವಬ್ಯಾಂಕ್ ಆಯೋಜಿಸಿರುವ ಎರಡು ದಿನಗಳ “ಭಾರತದ ಹವಾಮಾನ ಮತ್ತು ಅಭಿವೃದ್ಧಿ ಪಾಲುದಾರರ ಸಭೆ”ಯಲ್ಲಿ ಸಂಪೂರ್ಣ ವರದಿಯನ್ನು ಬಿಡುಗಡೆ ಮಾಡಲಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 2 =
Remember me
