ಬೆಂಗಳೂರು:ವಸುಂಧರೆಯ ಒಡಲು ಅಸಂಖ್ಯ ಜೀವರಾಶಿಗಳ ಆಗರ. ಪಶು, ಪಕ್ಷಿ, ಕೀಟ ಸೇರಿದಂತೆ ಸಕಲ ಚರಾಚರಗಳಿಗೆ ಜನ್ಮ ನೀಡಿ ಸಲಹುವ ಭೂಮಿ ಪ್ರಾಕೃತಿಕ ಸಿರಿಸಂಪತ್ತಿನ ತವರು. ಕೋಟ್ಯಂತರ ವರ್ಷಗಳ ಹಿಂದೆ ಜನ್ಮತಾಳಿದ ಏಕಕೋಶದ ಜೀವಾಣುವಿನಿಂದ ಆರಂಭಿಸಿ ಈವರೆಗಿನ ಬೆಳವಣಿಗೆ ವಿಸ್ಮಯಕಾರಿಯಾಗಿದೆ. ಒಂದಕ್ಕಿಂದ ಒಂದು ಜೀವರಾಶಿಗಳು ವೈವಿಧ್ಯಮಯ ಲೋಕವನ್ನೇ ಸೃಷ್ಟಿಸಿವೆ.
ಪಂಚ ಭೂತಗಳಾದ ಭೂಮಿ, ನೀರು, ವಾಯು, ಅಗ್ನಿ ಹಾಗೂ ಆಕಾಶ ವ್ಯಾಪ್ತಿಯಲ್ಲೂ ಜೀವಿಗಳ ವಾಸ ಹರಿಡಿಕೊಂಡಿದೆ. ಆದರೆ, ಮನುಷ್ಯ ಮಾತ್ರ ತಾನು ಮೇಲು, ಉಳಿದೆಲ್ಲ ಪ್ರಭೇದಗಳು ತನ್ನ ಅಣತಿಯಂತೆ ನಡೆದುಕೊಳ್ಳಬೇಕು ಎಂಬ ಅಸಹಜ ನ್ಯಾಯಕ್ಕೆ ಜೋತುಬಿದ್ದಿದ್ದಾನೆ. ಇದರ ಪರಿಣಾಮ ನಿತ್ಯವೂ ಒಂದಿಲ್ಲೊಂದು ಪ್ರಭೇದಗಳು ಕಣ್ಮರೆಯಾಗುತ್ತಿವೆ. ಇನ್ನೂ ಕೆಲವು ಅಳಿವಿನಂಚಿಗೆ ಬಂದು ನಿಂತಿವೆ. ಇನ್ನೊಂದೆಡೆ ಅಭಿವೃದ್ಧಿ ನೆಪದಲ್ಲಿ ಪರಿಸರದ ಮೇಲಾಗುತ್ತಿರುವ ದೌರ್ಜನ್ಯದಿಂದ ಹಸಿರು ಕ್ಷೀಣಿಸುತ್ತಿದೆ. ಜಾಗತಿಕ ತಾಪಮಾನ, ವಾತಾವರಣದಲ್ಲಿ ಇಂಗಾಲ ಪ್ರಮಾಣ ಏರಿಕೆ ಇತ್ಯಾದಿ ಅಂಶಗಳು ಜೀವ ವೈವಿಧ್ಯತೆಗೆ ಧಕ್ಕೆ ತಂದಿವೆ. ಭವಿಷ್ಯದಲ್ಲಿ ಮಾನವ ಉಸಿರಾಡಲು ಎದುಸಿರುಬಿಡಬೇಕಾದೀತು ಎಂಬ ಪ್ರಜ್ಞೆ ಇಲ್ಲದೆ ನಡೆದುಕೊಳ್ಳುತ್ತಿರುವುದರಿಂದ ಜೀವ ವೈವಿಧ್ಯತೆ ಸರಪಳಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಇಂತಹ ವಿಪ್ಲವಗಳಿಗೆ ತಡೆ ಹಾಕಿ ಭೂಮಿಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲ ಜೀವಸಂಕುಲಗಳ ಸಂರಕ್ಷಣೆ ಮಾಡಬೇಕೆಂಬ ದನಿಗೆ ಕ್ರಮೇಣ ಮಾನ್ಯತೆ ಸಿಗುತ್ತಿದೆ. ಪರಿಸರವಾದಿಗಳ ಕೂಗಿಗೆ ಸಾರ್ವಜನಿಕರಿಂದಲೂ ಬೆಂಬಲ ವ್ಯಕ್ತವಾಗಬೇಕಿದೆ.
ಎಲ್ಲೂರು ಹುಣಸೆ ಮರಗಳ ಸಮೂಹ, ದೇವನಹಳ್ಳಿ; ಹೊಗ್ರಿಕಣ್, ಶೋಲಾ ಹುಲ್ಲುಗಾವಲು, ಕಡೂರು; ಬೆಂಗಳೂರು ಕೃಷಿ ವಿವಿ, 718 ಪ್ರಭೇದಗಳ ತವರು; ಅಂಬರಗುಡ್ಡ, ಶೋಲಾ ಹುಲ್ಲುಗಾವಲು ಶಿವಮೊಗ್ಗ; ಮುಂಡಿಗೆಕೆರೆ, ಪಕ್ಷಿಧಾಮ, ಶಿರಸಿ; ಜೂರಿಬೆಟ್ಟ, ಕೊಪ್ಪಳ; ಸಿದ್ಧರಬೆಟ್ಟ, ವೈದ್ಯಕೀಯ ಸಸ್ಯಗಳ ತವರು, ತುಮಕೂರು; ರಾಮನಗರ ಬೆಟ್ಟ, ರಾಮನಗರ; ಚಿಕ್ಕಮಗಳೂರು ಬೆಟ್ಟ, ಚಿಕ್ಕಮಗಳೂರು; ಅಂತರಗಂಗೆ ಬೆಟ್ಟ, ಕೋಲಾರ; ಆದಿನಾರಾಯಣಸ್ವಾಮಿ ಬೆಟ್ಟ, ಗುಡಿಗಂಡೆ; ಮಹಿಮ ರಂಗನಾಥಸ್ವಾಮಿ ಬೆಟ್ಟ, ಬೆಂ.-ನೆಲಮಂಗಲ ರಸ್ತೆ; ಉರುಂಬಿ, ಕುಮಾರಧಾರ ನದಿ ದಂಡೆ, ಕಡಬ (ದ.ಕ)
ಭಾರತದಲ್ಲಿರುವ ಜಾಗತಿಕ ಮಟ್ಟದ ಜೀವವೈವಿಧ್ಯ ತಾಣಗಳು: ಪಶ್ಚಿಮಘಟ್ಟ ಶ್ರೇಣಿ; ಹಿಮಾಲಯ ಪರ್ವತ ಶ್ರೇಣಿ; ಇಂಡೋ-ಬರ್ವ ಪ್ರದೇಶ; ಸುಂಡಾಲೆಂಡ್, ನಿಕೋಬಾರ್ ದ್ವೀಪ
ಭಾರತದುದ್ದಕ್ಕೂ ಕಾಣಸಿಗುವ ಜೀವ ವೈವಿಧ್ಯತೆಯ ಲೋಕ ಕರ್ನಾಟಕದಲ್ಲೂ ಪ್ರತಿಬಿಂಬಿತವಾಗಿದೆ. ಪ್ರತಿ ಜಿಲ್ಲೆಯಲ್ಲೂ ಸಸ್ಯ, ಪಶು, ಪಕ್ಷಿಗಳ ಜೀವ ಸಂಕುಲ ಹೇರಳವಾಗಿದೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
