ನವದೆಹಲಿ:ಚೀನಾದಿಂದ ಆರಂಭವಾಗಿ 200ಕ್ಕೂ ಹೆಚ್ಚು ದೇಶಗಳನ್ನು ಆಕ್ರಮಿಸಿಕೊಂಡಿರುವ ಕರೊನಾ ಸೋಂಕಿನ ಸಂಖ್ಯೆ 1 ಕೋಟಿ ದಾಟಿದೆ. ಪ್ರತಿದಿನ 1.5 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದು 4-6 ಸಾವಿರ ಜನರು ಮೃತರಾಗುತ್ತಿದ್ದಾರೆ. ಭಾರತದಲ್ಲಿ ಶನಿವಾರ 18,500 ಹೊಸ ಪ್ರಕರಣ ಬೆಳಕಿಗೆ ಬಂದಿದೆ.
ಡಿಸೆಂಬರ್​ನಲ್ಲಿ ಚೀನಾದ ವನ್ಯಜೀವಿ ಮಾರುಕಟ್ಟೆ ಯಲ್ಲಿ ಕಾಣಿಸಿಕೊಂಡ ಕರೊನಾ ಸೋಂಕು 10 ಲಕ್ಷ ಜನರಿಗೆ ತಗುಲುವುದಕ್ಕೆ ಏಪ್ರಿಲ್ 2ರವರೆಗೆ ಕಾಲಾವಕಾಶ ತೆಗೆದುಕೊಂಡಿತ್ತು. ನಂತರ 13 ದಿನಗಳಲ್ಲಿ 10 ಲಕ್ಷ ಪ್ರಕರಣ ಪತ್ತೆಯಾಗಿ ಸೋಂಕಿತರ ಸಂಖ್ಯೆ 20 ಲಕ್ಷಕ್ಕೆ ಏರಿಕೆಯಾಯಿತು. ಅದಾದ ನಂತರ ಸೋಂಕಿತರ ಸಂಖ್ಯೆ ಏಪ್ರಿಲ್ 27ಕ್ಕೆ 30 ಲಕ್ಷ, ಮೇ 9ಕ್ಕೆ 40 ಲಕ್ಷ, ಮೇ 20ಕ್ಕೆ 50 ಲಕ್ಷ, 30ಕ್ಕೆ 60 ಲಕ್ಷ, ಜೂನ್ 7ಕ್ಕೆ 70 ಲಕ್ಷ, 15ಕ್ಕೆ 80 ಲಕ್ಷ, 21ಕ್ಕೆ 90 ಲಕ್ಷ ಪ್ರಕರಣ ದಾಖಲಾಗಿತ್ತು.
ಸೋಂಕಿನಿಂದ ಮೃತರಾದವರ ಸಂಖ್ಯೆಯಲ್ಲೂ ಏರಿಕೆ ಕಂಡುಬರುತ್ತಿದೆ. ಇದೀಗ ವಿಶ್ವಾದ್ಯಂತ ಮೃತರ ಸಂಖ್ಯೆ 5 ಲಕ್ಷ ಸಮೀಪಕ್ಕೆ ತೆರಳಿದೆ. ಮೊದಲ ಒಂದು ಲಕ್ಷ ಸಾವಿಗೆ ಡಿಸೆಂಬರ್​ನಿಂದ ಏಪ್ರಿಲ್ 9ರವರೆಗೆ ಕಾಲಾವಕಾಶ ಬೇಕಾಗಿತ್ತು. ಆದರೆ ಈಗ 25 ದಿನಗಳ ಅಂತರದಲ್ಲಿ ಸಾವಿನ ಸಂಖ್ಯೆ ಒಂದು ಲಕ್ಷ ಹೆಚ್ಚಾಗುತ್ತಿದೆ.
ಭಾರತ, ಅಮೆರಿಕ ದಾಖಲೆ: ಕಳೆದ ಕೆಲ ತಿಂಗಳಿನಿಂದ ಸೋಂಕಿಗೆ ಭಾರೀ ಪ್ರಮಾಣದಲ್ಲಿ ನಲುಗಿರುವ ಅಮೆರಿಕದಲ್ಲಿ ಶುಕ್ರವಾರ ದಾಖಲೆಯ ಏರಿಕೆಯಾಗಿದೆ. 24 ಗಂಟೆಗಳಲ್ಲಿ 47,341 ಪ್ರಕರಣ ಪತ್ತೆಯಾಗಿದ್ದು ಅದು ಈವರೆಗಿನ ದಾಖಲೆಯಾಗಿದೆ. ಬ್ರೆಜಿಲ್​ನಲ್ಲಿ 46,900, ಭಾರತದಲ್ಲಿ 18,276 ಹೊಸ ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿಯೂ ಏಕದಿನ ಏರಿಕೆಯಲ್ಲಿ ಶುಕ್ರವಾರ ದಾಖಲೆಯಾಗಿದೆ. ವಿಶ್ವಾದ್ಯಂತ ಸೋಂಕಿತರ ಸಂಖ್ಯೆಯಲ್ಲಿ ಶುಕ್ರವಾರ 1.94 ಲಕ್ಷ ಸಂಖ್ಯೆ ಏರಿಕೆಯಾಗಿದೆ. ಬೇರೆ ದೇಶಗಳಿಗಿಂತ
ಬೇರೆ ದೇಶಗಳಿಗಿಂತ ನಾವು ಉತ್ತಮ:ಬೇರೆ ದೇಶಗಳಿಗೆ ಹೋಲಿಸಿದರೆ ಕರೊನಾ ನಿಯಂತ್ರಣದಲ್ಲಿ ಭಾರತ ಉತ್ತಮ ಸ್ಥಾನದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ 5 ಲಕ್ಷದ ಗಡಿ ದಾಟಿದ್ದು ದೇಶದ ಜನರು ಇದೀಗ ಇನ್ನಷ್ಟು ಎಚ್ಚರಿಕೆಯಿಂದಿರಬೇಕು ಎಂದು ಅವರು ತಿಳಿಸಿದ್ದಾರೆ. ಆರಂಭದಲ್ಲಿ ಕೆಲವರು ದೇಶದಲ್ಲಿ ಸೋಂಕು ಅತ್ಯಂತ ಅಪಾಯಕಾರಿ ಮಟ್ಟಕ್ಕೆ ತಲುಪುತ್ತದೆ ಎಂದು ಅಂದಾಜಿಸಿದ್ದರು. ಆದರೆ ಲಾಕ್​ಡೌನ್, ಕಠಿಣ ನಿಯಮಗಳು ಮತ್ತು ಜನರ ಸಹಕಾರದಿಂದ ಸೋಂಕು ನಿಯಂತ್ರಣದಲ್ಲಿದೆ ಎಂದಿದ್ದಾರೆ.
ದೆಹಲಿಯಲ್ಲಿ ಕರೊನಾ ಹೋರಾಟಕ್ಕೆ 5 ಅಸ್ತ್ರ:ದೆಹಲಿಯಲ್ಲಿ ಐದು ಅಸ್ತ್ರಗಳನ್ನು ಬಳಸಿಕೊಂಡು ಕರೊನಾ ಸೋಂಕಿನ ನಿಯಂತ್ರಣ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಕರೊನಾ ಪರೀಕ್ಷೆ ಮತ್ತು ಅತಿ ಹೆಚ್ಚು ಹಾಸಿಗೆ ಸೌಲಭ್ಯವನ್ನು ದೆಹಲಿ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಅನ್​ಲಾಕ್ 1 ಆರಂಭಿಸಿದ ನಂತರ ಸೋಂಕಿತರ ಸಂಖ್ಯೆ ಹೆಚ್ಚಳವಾಯಿತು. ಎಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ಶೇ. 40 ಹಾಸಿಗೆಗಳನ್ನು ಸೋಂಕಿತರಿಗೆ ಮೀಸಲು ಮಾಡಿದೆವು. ಇದೀಗ ಸಭಾಭವನಗಳು, ಹೋಟೆಲ್​ಗಳನ್ನೂ ಸಹ ಕ್ವಾರಂಟೈನ್ ಕೇಂದ್ರ ಮಾಡಿದ್ದೇವೆ. ಪ್ರಸ್ತುತ ನಮ್ಮಲ್ಲಿ 13,500 ಹಾಸಿಗೆ ವ್ಯವಸ್ಥೆ ಇದೆ ಎಂದು ಅವರು ಹೇಳಿದ್ದಾರೆ. ರಾಜ್ಯದ ಎಲ್ಲ ಬೀದಿಯಲ್ಲೂ ಪರೀಕ್ಷೆ ಆರಂಭಿಸಲಾಗಿದೆ. ಶನಿವಾರದಿಂದ ಸೆರಾಲಜಿಕಲ್ ಸರ್ವೆ (ರೋಗನಿರೋಧಕ ಪರೀಕ್ಷೆ) ಆರಂಭವಾಗಿದ್ದು, ಸೋಂಕಿತರೆಲ್ಲರನ್ನೂ ಪತ್ತೆ ಹಚ್ಚಲಾಗುವುದು ಎಂದು ಅವರು ತಿಳಿಸಿದ್ದಾರೆ.
ಡೆಕ್ಸಾಮೆಥಾಸೊನ್ ಬಳಕೆಗೆ ಅನುಮತಿ:ಭಾರತದಲ್ಲಿ ಕರೊನಾ ಸೋಂಕಿತರಿಗೆ ಡೆಕ್ಸಾಮೆಥಾಸೊನ್ ಔಷಧ ಬಳಸಲು ಅನುಮತಿ ನೀಡಲಾಗಿದೆ. ಇದರಿಂದ ಮರಣ ಪ್ರಮಾಣ ಮೂರನೇ ಒಂದರಷ್ಟು ಕಡಿಮೆಯಾಗಿದೆ ಎಂದು ಬ್ರಿಟನ್ ದೇಶದ ತಜ್ಞರು ತಿಳಿಸಿರುವ ಹಿನ್ನೆಲೆಯಲ್ಲಿ ಇದರ ಬಳಕೆಗೆ ಅವಕಾಶ ನೀಡಲಾಗಿದೆ. ಆಸ್ಪತ್ರೆಗಳಲ್ಲಿ ಕಡಿಮೆ ಗುಣಲಕ್ಷಣ ಹೊಂದಿರುವ ಸೋಂಕಿತರಿಗೆ ಮಿಥೈಲ್​ಪ್ರೆಡ್ನಿಸೊಲೊನ್ ಬದಲಾಗಿ ಡೆಕ್ಸಾಮೆಥಾಸೊನ್ ಬಳಸಲಾಗುವುದು. ಕಡಿಮೆ ಬೆಲೆಯ ಈ ಔಷಧವನ್ನು ಹೆಚ್ಚಿನ ಪ್ರಮಾಣದಲ್ಲಿ ತಯಾರಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ.
ಲಸಿಕೆ ಇಲ್ಲದೆಯೂ ಕೊನೆಗಾಣಲಿದೆ ಕರೊನಾ ಸಂಕಷ್ಟ; ಇಟಲಿ ವೈದ್ಯರಿಂದ ಅಧ್ಯಯನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
