ನವದೆಹಲಿ:ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಿನ್ನೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯ ಬಹುತೇಕ ಇಡೀ ದೇಶವನ್ನೇ ಕುತೂಹಲದಲ್ಲಿ ಇರಿಸಿತ್ತು. ಅದರಲ್ಲೂ ಈ ಫೈನಲ್ ಪಂದ್ಯ ದಾಖಲೆಮಟ್ಟದಲ್ಲಿ ವೀಕ್ಷಣೆ ಆಗಿರುವುದು ಕೂಡ ಕಂಡುಬಂದಿದೆ.
ವಿಶೇಷವೆಂದರೆ ಡಿಸ್ನಿ-ಹಾಟ್​ಸ್ಟಾರ್​ನಲ್ಲಿ ಬಿತ್ತರಗೊಂಡ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯದ ಅಂತಿಮ ಹಣಾಹಣಿಯ ಆಟಕ್ಕೆ ಪೀಕ್ ವೀವರ್​ಶಿಪ್ 5.9 ಕೋಟಿ ಆಗಿದ್ದು, ಈ ಮೂಲಕ ಇದು ಹಳೆಯ ದಾಖಲೆಗಳನ್ನು ಮುರಿದಿದೆ ಎನ್ನಲಾಗಿದೆ. ಫೈನಲ್ ಮಾತ್ರವಲ್ಲದೆ ಈ ಪಂದ್ಯಾವಳಿಯ ಇತರ ಪಂದ್ಯಗಳೂ ಅತ್ಯಧಿಕ ವೀಕ್ಷಣೆ ಕಂಡಿವೆ ಎಂದು ಈ ಸಂಸ್ಥೆ ಹೇಳಿಕೊಂಡಿದೆ.
ಇದನ್ನೂ ಓದಿ:ವಿಶ್ವಕಪ್ ಸೋಲು: ಬದಲಾಗಲಿದ್ಯಾ ಭಾರತ ಕ್ರಿಕೆಟ್ ತಂಡದ ನಾಯಕತ್ವ?; ಮುಂದೆ ಮಹತ್ವ ಯಾರಿಗೆ?
ಮತ್ತೊಂದೆಡೆ ಅಹಮದಾಬಾದ್​ನ ಕ್ರೀಡಾಂಗಣದಲ್ಲೇ 1.3 ಲಕ್ಷ ಮಂದಿ ನೇರವಾಗಿ ಪಂದ್ಯ ವೀಕ್ಷಿಸಿದ್ದಾರೆ. ಇದಕ್ಕೆ ಹೊರತಾಗಿ ದೇಶದ ವಿವಿಧ ನಗರಗಳ ಪಿವಿಆರ್​ ಇನಾಕ್ಸ್​ನ 150 ಸಿನಿಮಾ ಮಂದಿರಗಳಲ್ಲಿ 70 ಸಾವಿರಕ್ಕೂ ಅಧಿಕ ಟಿಕೆಟ್​ಗಳು ಮಾರಾಟವಾಗಿವೆ. ಮಾತ್ರವಲ್ಲದೆ, ಕರ್ನಾಟಕ ಸರ್ಕಾರದಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ದೊಡ್ಡ ಪರದೆಯಲ್ಲಿ ಕ್ರಿಕೆಟ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.
ಭಾರತ ಮತ್ತು ನ್ಯೂಜಿಲೆಂಡ್​ನ ಸೆಮಿಫೈನಲ್​ನಲ್ಲೂ ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಪೀಕ್ ಕನ್​ಕರೆನ್ಸಿ 5.3 ಕೋಟಿ ವೀವರ್​ಶಿಪ್ ದಾಖಲೆ ಮಾಡಿತ್ತು. ಲೈವ್​ ಸ್ಟ್ರೀಮ್ ಆಗುವಾಗಿನ ಗರಿಷ್ಠ ಸಂಖ್ಯೆಯ ವೀಕ್ಷಕರನ್ನು ಹೊಂದಿರುವುದನ್ನು ಪೀಕ್​ ಕನ್​ಕರೆನ್ಸಿ ಎನ್ನಲಾಗುತ್ತದೆ.

ಖ್ಯಾತ ಬೌಲರ್​ಗೆ ಮೋದಿಯ ಸಾಂತ್ವನದ ಅಪ್ಪುಗೆ: ನಾವು ಮತ್ತೆ ಪುಟಿದೇಳುತ್ತೇವೆ ಎಂದ ಶಮಿ; ವೈರಲ್ ಆಗುತ್ತಿದೆ ಫೋಟೋ!

ಪೋಕ್ಸೋ ಪ್ರಕರಣ: ಮುರುಘಾಶ್ರೀ ಬಂಧನಕ್ಕೆ ಹೈಕೋರ್ಟ್ ತಡೆ; ಕಾರಣ ಏನು?

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:three × 2 =
Remember me
