ನವದೆಹಲಿ:ರಸ್ತೆ ಅಪಘಾತಗಳಿಂದ ಜಗತ್ತಿನಲ್ಲಿ ಸಾವಿಗೀಡಾದ ಪ್ರತಿ ನೂರು ಜನರಲ್ಲಿ 13 ಮಂದಿ ಭಾರತೀಯರಿರುತ್ತಾರೆ. ಅದರಲ್ಲೂ ಆಗ್ನೇಯ ಏಷ್ಯಾದಲ್ಲೇ ಭಾರತದಲ್ಲಿ ಈ ಥರದ ಸಾವು ಹೆಚ್ಚು ಸಂಭವಿಸುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ರಸ್ತೆ ಸುರಕ್ಷತೆ ಕುರಿತು ಪ್ರಕಟಿಸಿರುವ ಇತ್ತೀಚಿನ ವರದಿ ಹೇಳಿದೆ.
ಜಗತ್ತಿನಲ್ಲಿ 2021ರಲ್ಲಿ ರಸ್ತೆ ಅಪಘಾತದಲ್ಲಿ ಸತ್ತವರ ಪೈಕಿ ಶೇ. 13 ಮಂದಿ ಭಾರತೀಯರು. ಭಾರತದಲ್ಲಿ 2010ರಲ್ಲಿ 1.34 ಲಕ್ಷ ಇದ್ದ ಸಾವಿನ ಸಂಖ್ಯೆ, 2021ರಲ್ಲಿ 1.54 ಲಕ್ಷಕ್ಕೆ ಏರಿದ್ದು, ಕಳೆದ ವರ್ಷ 1.68 ಲಕ್ಷ ಮಂದಿ ಸಾವಿಗೀಡಾಗಿದ್ದರು. ಅಲ್ಲದೆ ರಸ್ತೆ ಅಪಘಾತದ ಸಾವಿನ ಪ್ರಮಾಣ ಹೆಚ್ಚಾಗಿರುವ 65 ರಾಷ್ಟ್ರಗಳಲ್ಲಿ ಭಾರತ ಒಂದಾಗಿದೆ. ಮಾತ್ರವಲ್ಲ, ಆಗ್ನೇಯ ಏಷ್ಯಾದಲ್ಲಿ ಸಂಭವಿಸಿದ ಇಂಥ ಸಾವುಗಳ ಪೈಕಿ ಶೇ. 46 ಭಾರತಕ್ಕೆ ಸೇರಿದ್ದಾಗಿದೆ.
ರಸ್ತೆ ಅಪಘಾತಗಳಿಂದಾಗುತ್ತಿರುವ ಸಾವು ಜಾಗತಿಕವಾಗಿ ಇಳಿಯುತ್ತಿದ್ದರೂ ಭಾರತದಲ್ಲಿ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ರಸ್ತೆ ಸುರಕ್ಷತೆಗಾಗಿನ ಎನ್​ಜಿಒಗಳ ಜಾಗತಿಕ ಒಕ್ಕೂಟದ ಸದಸ್ಯ ಪ್ರೇರಣ ಸಿಂಗ್​ ಅರೋರಾ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 20 =
Remember me
