| ಆರ್.ತುಳಸಿಕುಮಾರ್ ಬೆಂಗಳೂರುಭಾರತದ ರಾಷ್ಟ್ರೀಯ ಲಾಂಛನದಲ್ಲಿ ಸ್ಥಾನ ಪಡೆದಿರುವ ಸಿಂಹ, ದೇಶದೆಲ್ಲೆಡೆ ತನ್ನ ನೆಲೆ ವಿಸ್ತರಣೆಗೆ ಸವಾಲು ಎದುರಿಸುತ್ತಿದೆ. ಗುಜರಾತ್​ನ ಗೀರ್ ಅರಣ್ಯ ಹೊರತುಪಡಿಸಿ ಇನ್ನುಳಿದೆಡೆ ಸಿಂಹಗಳ ಸಾಮ್ರಾಜ್ಯ ವಿಸ್ತರಣೆ ಸಾಧ್ಯವಾಗಿಲ್ಲ. ಸ್ವತಃ ಸುಪ್ರೀಂ ಕೋರ್ಟ್ ಸಿಂಹಗಳ ಸ್ಥಳಾಂತರಕ್ಕೆ ಆದೇಶ ನೀಡಿ ದಶಕ ಕಳೆದರೂ, ಅದಿನ್ನೂ ಜಾರಿಯಾಗದಿರುವುದು ಗುಜರಾತ್​ಯುೕತರ ರಾಜ್ಯಗಳಲ್ಲಿ ‘ಕಾಡಿನ ರಾಜ’ನ ಸದ್ದು ಕೇಳಿಸುತ್ತಿಲ್ಲ.
ಶತಮಾನದ ಹಿಂದೆ ವಿಶ್ವದೆಲ್ಲೆಡೆ ಒಂದು ಲಕ್ಷ ಸಂಖ್ಯೆಯಷ್ಟಿದ್ದ ಸಿಂಹಗಳ ಸಂಖ್ಯೆ ಈಗ 25 ಸಾವಿರಕ್ಕಿಂತ ಕೆಳಗಿಳಿದಿದೆ. ಹಿಂದೊಮ್ಮೆ ಯೂರೋಪ್, ಇರಾಕ್-ಇರಾನ್, ಟಿರ್ಕಿ ಸಹಿತ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಿಂದ ಮೊದಲ್ಗೊಂಡು ಬಿಹಾರ್​ವರೆಗೂ ಸಿಂಹ ಕಾರಿಡಾರ್ ಅಸ್ತಿತ್ವದಲ್ಲಿತ್ತು. ಆಫ್ರಿಕಾದ ಕೆಲವು ದೇಶಗಳಲ್ಲಿ ಹೆಚ್ಚು ಸಿಂಹಗಳು ಇದ್ದರೂ, ಇತ್ತೀಚಿಗೆ ಅವುಗಳ ಸಂಖ್ಯೆ ಕುಸಿಯಲಾರಂಭಿಸಿದೆ. ಬ್ರಿಟೀಷ್​ರಿಂದ ಬಂದೂಕು ಬಳಕೆ ಮುನ್ನಲೆಗೆ ಬರುತ್ತಿದ್ದಂತೆ ಸಿಂಹ ಗರ್ಜನೆಯ ದನಿ ಅಡಗಲು ಶುರುವಾಯಿತು. ಪ್ರಸ್ತುತ ಬೇಟೆ, ಕಳ್ಳಸಾಗಣೆ, ಅರಣ್ಯ ನಾಶ ಹಾಗೂ ಆವಾಸ ಸ್ಥಾನಗಳ ಕಣ್ಮರೆಯಿಂದಾಗಿ ಸಿಂಹ ಅಳಿವಿನಂಚಿನ ಪಟ್ಟಿಗೆ ಸೇರುವಂತಾಗಿದೆ.
ಮೊದಲ ವಿಶ್ವ ಯುದ್ಧದ ವೇಳೆ ಭಾರತದಲ್ಲಿ ಡಜನ್ ಸಂಖ್ಯೆಗೆ ಕುಸಿದಾಗಲೇ ಸಿಂಹ ಸಂರಕ್ಷಣೆ ಕೂಗು ಕೇಳಿಬಂತು. 1936ರಲ್ಲಿ ಜುನಾಗಡ್ ನವಾಬ್​ನ ಮುತುವರ್ಜಿಯಿಂದಾಗಿ ದೇಶದಲ್ಲಿ ಮೊದಲ ಬಾರಿಗೆ ಸಿಂಹಗಳ ಸರ್ವೆ ನಡೆಯಿತು. 1965ರಿಂದ ಪ್ರತಿ ಐದು ವರ್ಷಕ್ಕೊಮ್ಮೆ ಅರಣ್ಯ ಸಚಿವಾಲಯ ಸರ್ವೆ ನಡೆಸುತ್ತಿದೆ. 2001ರ ಬಳಿಕವಷ್ಟೇ ಸಿಂಹಗಳ ಸಂಖ್ಯೆ 300ರ ಗಡಿ ದಾಟಿದ್ದು, ಈಗ 674ಕ್ಕೆ ಹೆಚ್ಚಿದೆ.
ಸಿಂಹ ಗರ್ಜನೆಗೆ ಕಿವಿಗೊಡದ ಮಾನವ:ಭೂಮಿ ಮೇಲಿರುವ ಜೀವಿಗಳಲ್ಲಿ ಅತ್ಯಂತ ಬಲಿಷ್ಠ ಹಾಗೂ ಧೈರ್ಯಶಾಲಿ ಎಂಬ ಹಿರಿಮೆ ಸಿಂಹಕ್ಕಿದೆ. ರಾಜಠೀವಿಯ ನಡಿಗೆ, ಗಾಂರ್ಭೀಯತೆ, ಸಿಂಹ ಗರ್ಜನೆ ಈ ವನ್ಯಜೀವಿಯ ವಿಶೇಷತೆ. ಅಚ್ಚರಿಯೆಂದರೆ ಸಿಂಹ ಗರ್ಜನೆ 8 ಕಿ.ಮೀ. ವರೆಗೂ ಕೇಳಿಸುವುದುಂಟು. ಈ ಸದ್ದಿಗೆ ಆನೆಯಿಂದ ಮೊದಲ್ಗೊಂಡು ಇತರ ಪ್ರಾಣಿಗಳು ಹೆದರುವುದರಿಂದರಿಂದಾಗಿಯೇ ಸಿಂಹಕ್ಕೆ ಕಾಡಿನ ರಾಜ ಎಂಬ ಅನ್ವರ್ಥ ಹೆಸರು ಬಳಕೆಯಲ್ಲಿದೆ. ಆದರೆ, ಮನುಷ್ಯ ಮಾತ್ರ ವನ್ಯಜೀವಿಗಳ ವಿಚಾರದಲ್ಲಿ ಸಿಂಹಾವಲೋಕನ ಮಾಡಿಕೊಳ್ಳುತ್ತಿಲ್ಲ. ಸಿಂಹಗಳ ಮೂಳೆ ಔಷಧ ಹಾಗೂ ಅಲಂಕಾರಕ್ಕೆ ಬಳಕೆಯಾಗುತ್ತಿರುವುದರಿಂದ ಈ ಪ್ರಾಣಿಯ ಬೇಟೆ, ಕಳ್ಳಸಾಗಣೆ ಅವ್ಯಾಹತವಾಗಿ ನಡೆದಿದೆ. ಜೀವವೈವಿಧ್ಯತೆಯಲ್ಲಿ ಸಿಂಹಗಳ ಪಾತ್ರದ ಪ್ರಾಮುಖ್ಯತೆ ಅರಿತು ಕೇಂದ್ರ ಸರ್ಕಾರ 2020ರಲ್ಲಿ ‘ಪ್ರಾಜೆಕ್ಟ್ ಲಯನ್’ ಕಾರ್ಯಕ್ರಮ ಘೋಷಿಸಿ ಸಂರಕ್ಷಣೆಗೆ ಮುಂದಾಗಿದೆ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:eleven + 12 =
Remember me
