ನವದೆಹಲಿ:ಪ್ರಪಂಚದಾದ್ಯಂತ ಜನಸಂಖ್ಯೆ ಹೆಚ್ಚುತ್ತಿದ್ದು, ಜನವರಿ 1, 2024ರ ಮಧ್ಯರಾತ್ರಿಯಲ್ಲಿ ವಿಶ್ವದ ಜನಸಂಖ್ಯೆ ಎಂಟು ಶತಕೋಟಿ ದಾಟಲಿದೆ ಎಂದು ಅಮೆರಿಕದ ಸೆನ್ಸಸ್​ ಬ್ಯೂರೋ ಬಿಡುಗಡೆ ಮಾಡಿದ ವರದಿ ಹೇಳಿದೆ.
ಕಳೆದ ಒಂದು ವರ್ಷದಲ್ಲಿ ವಿಶ್ವದ ಜನಸಂಖ್ಯೆಯು 75 ಮಿಲಿಯನ್​ ಹೆಚ್ಚಾಗಿದೆ. ಕಳೆದ ವರ್ಷ ವಿಶ್ವಾದ್ಯಂತ ಬೆಳವಣಿಗೆ ದರವು ಶೇಕಡ ಒಂದಕ್ಕಿಂತ ಕಡಿಮೆ ಇತ್ತು. 2024ರ ಹೊತ್ತಿಗೆ ಪ್ರಪಂಚದಾದ್ಯಂತ ಪ್ರತಿ ಸೆಕೆಂಡಿಗೆ 4.3 ಜನನ ಮತ್ತು ಎರಡು ಸಾವುಗಳು ಸಂಭವಿಸುವ ನಿರೀೆಯಿದೆ.
ಕೋವಿಡ್​-19 ವೈರಸ್​ ಜನಸಂಖ್ಯೆಯ ಬೆಳವಣಿಗೆಯ ಮೇಲೆ ಪರಿಣಾಮ ಬೀರಿದೆ. ಫಲವತ್ತತೆಯ ದರಗಳು ಕಡಿಮೆಯಾಗಬಹುದು ಎಂದು ಅಂದಾಜು ಮಾಡಲಾಗಿದೆ. ಈಗಾಗಿ ವಿಶ್ವದ ಜನಸಂಖ್ಯೆ 9 ಶತಕೋಟಿ ತಲುಪಲು 14 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಲಿದೆ. 10 ಶತಕೋಟಿಗೆ ತಲುಪಲು 16 ವರ್ಷ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ಅಂದಾಜು ನಿಧಾನಗತಿಯ ಬೆಳವಣಿಗೆಯ ದರವನ್ನು ಬಿಂಬಿಸುತ್ತದೆ ಎಂದು ವರದಿ ಹೇಳಿದೆ.
2030ರ ವೇಳೆಗೆ ಭೂಮಿಯ ಮೇಲೆ 850 ಕೋಟಿ, 2050 ರ ವೇಳೆಗೆ 970 ಕೋಟಿ ಮತ್ತು 2100 ರ ವೇಳೆಗೆ 1040 ಕೋಟಿ ಜನರು ಇರಬಹುದು. ಇಂದು ಮಾನವರ ಸರಾಸರಿ ವಯಸ್ಸು 72.8 ವರ್ಷಗಳು. 1990ಕ್ಕೆ ಹೋಲಿಸಿದರೆ ಒಂಬತ್ತು ವರ್ಷಗಳ ಹೆಚ್ಚಳವಾಗಿದೆ. ಸಾರ್ವಜನಿಕ ಆರೋಗ್ಯ, ಪೋಷಣೆ, ನೈರ್ಮಲ್ಯ ಮತ್ತು ಔಷಧದಲ್ಲಿನ ಸುಧಾರಣೆ ಇದಕ್ಕೆ ಕಾರಣ ಎಂದು ವರದಿ ಹೇಳಿದೆ. ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಲಿದೆ. 2050ರ ವೇಳೆಗೆ ವಿಶ್ವದ ಜನಸಂಖ್ಯೆಯ ಶೇ. 50 ಜನರು ಭಾರತ, ಪಾಕಿಸ್ತಾನ, ಕಾಂಗೋ, ಈಜಿಪ್ಟ್​, ಇಥಿಯೋಪಿಯಾ, ನೈಜೀರಿಯಾ, ಫಿಲಿಪ್ಪೀನ್ಸ್​ ಮತ್ತು ತಾಂಜಾನಿಯಾದಲ್ಲಿ ವಾಸಿಸುತ್ತಾರೆ.
2010ರಿಂದ 2021ರ ಅವಧಿಯಲ್ಲಿ 1.65 ಕೋಟಿ ಪಾಕಿಸ್ತಾನಿಗಳು ತಮ್ಮ ದೇಶವನ್ನು ತೊರೆದು ಬೇರೆ ದೇಶಗಳಿಗೆ ವಲಸೆ ಹೋಗಿದ್ದಾರೆ. ಭಾರತದಿಂದ 35 ಲಕ್ಷ, ಬಾಂಗ್ಲಾದೇಶದಿಂದ 29 ಲಕ್ಷ, ನೇಪಾಳದಿಂದ 16 ಲಕ್ಷ ಮತ್ತು ಶ್ರೀಲಂಕಾದಿಂದ 10 ಲಕ್ಷ ಜನರು ಬೇರೆ ದೇಶಗಳಿಗೆ ತೆರಳಿದ್ದಾರೆ ಎಂದು ವರದಿ ಹೇಳಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + thirteen =
Remember me
