ಮುಂಬೈ:ಇಂದಿನ ಜಗತ್ತಿನಲ್ಲಿ ಮುಸಲ್ಮಾನರಾಗಿದ್ದು, ಪ್ರವಾದಿಯವರು ತೋರಿಸಿದ ಮಾರ್ಗದಲ್ಲಿ ನಡೆಯುವುದು ಒಂಟಿತನದ ಸಂಗತಿಯಾಗಿದೆ ಎಂದು ಖ್ಯಾತ ಗಾಯಕ ಲಕ್ಕಿ ಅಲಿ ಹೇಳಿದ್ದಾರೆ.
ಬೆಂಗಳೂರು ಮೂಲದ ಬಾಲಿವುಡ್​ನ ಖ್ಯಾತ ಗಾಯಕ ಲಕ್ಕಿ ಅಲಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಮುಸ್ಲಿಮರನ್ನು ಉಗ್ರರು ಎಂಬಂತೆ ಬಿಂಬಿಸಲಾಗಿದೆ. ಇಂದಿನ ಪ್ರಪಂಚದಲ್ಲಿ ಮುಸ್ಲಿಮನಾಗಿ ಉಳಿಯುವುದು ಒಬ್ಬಂಟಿ ಭಾವ ಮೂಡಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್​ ಸಖತ್​ ವೈರಲ್​ ಆಗುತ್ತಿದೆ.
Its a lonely thing to be a Muslim in the World todayits a lonely thingto follow the sunnah of the Prophet , your friends will leave you , the world will call you a terrorist……..
ಇದನ್ನೂ ಓದಿ:ಅವರೇನು ತಪ್ಪು ಮಾಡಿದ್ದಾರೆಂದು ಈ ರೀತಿ ಮಾಡುತ್ತಿದ್ದೀರಾ; ಗಂಭೀರ್​ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ
ಇಂದಿನ ಜಗತ್ತಿನಲ್ಲಿ ಮುಸ್ಲಿಮನಾಗಿ ಉಳಿಯುವುದು ಒಬ್ಬಂಟಿ ಭಾವ ಮೂಡಿಸುತ್ತದೆ. ಪ್ರವಾದಿ ಅವರ ಮಾರ್ಗವನ್ನು ಅನುಸರಿಸುವುದು ಒಂಟಿತನ ಎದುರಾಗುತ್ತದೆ. ನಿಮ್ಮ ಸ್ನೇಹಿತರು ಬಿಟ್ಟು ಹೋಗುತ್ತಾರೆ. ಈ ಜಗತ್ತು ನಿಮ್ಮನ್ನು ಉಗ್ರ ಎಂದು ಕರೆಯುತ್ತದೆ ಎಂದು ಬರೆದುಕೊಂಡಿದ್ದಾರೆ. ಇವರ ಪೋಸ್ಟ್​ಗೆ ಹಲವರು ಪ್ರತಿಕ್ರಿಯಿಸಿ ಗಾಯಕನಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ದಿವಂಗತ ನಟ ಮೆಹಮೂದ್ ಅವರ ಮಗ, ಲಕ್ಕಿ ಅಲಿ ತಮ್ಮ ಹಾಡುಗಳ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದದ್ದು, ‘ಓ ಸನಮ್’, ‘ಎಕ್‌ ಪಲ್‌ಕಾ ಜೀನಾ’ ‘ಹೈರಾತ್‌’ ಸೇರಿದಂತೆ ಹಲವು ಹಾಡುಗಳನ್ನು ಹಾಡಿದ್ದಾರೆ. ಕೆಲ ದಿನಗಳ ಹಿಂದೆ ಐಎಎಸ್‌ ಅಧಿಕಾರಿಯೊಬ್ಬರ ವಿರುದ್ಧ ಇತ್ತೀಚೆಗೆ ಭೂ ಕಬಳಿಕ ಆರೋಪ ಮಾಡಿದ್ದ ಅವರು, ಈ ವಿಚಾರವಾಗಿ ಕರ್ನಾಟಕ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 + 2 =
Remember me
