ಮುಂಬೈ:ಕರೊನಾ ಬಿಕ್ಕಟ್ಟಿನಿಂದಾಗಿ ವಿಶ್ವದ ಅನೇಕ ಅಗ್ರಗಣ್ಯ ಶ್ರೀಮಂತರು ನಷ್ಟದ ಸುಳಿಗೆ ಸಿಲುಕಿರುವ ನಡುವೆಯೇ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಕಳೆದ ಎರಡು ತಿಂಗಳಿನಲ್ಲಿ ತಮ್ಮ ಸಂಪತ್ತನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ. ಇದರಿಂದಾಗಿ ವಿಶ್ವದ 10 ಅಗ್ರಗಣ್ಯ ಶ್ರೀಮಂತರ ಪಟ್ಟಿಗೆ ಅವರು ಸೇಪಡೆಯಾಗಿದ್ದಾರೆ ಎಂದು ಬ್ಲೂಮ್​ಗ್ ಬಿಲೇನಿಯರ್ ಸೂಚ್ಯಂಕ ತಿಳಿಸಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಷ್ಯಾದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನೂ ಮುಕೇಶ್ ತಮ್ಮದಾಗಿಸಿಕೊಂಡಿದ್ದಾರೆ.
ರಿಲಯನ್ಸ್ ಲಿಮಿಟೆಡ್ ಒಡೆತನದ ಟೆಲಿಕಾಂ ಸಂಸ್ಥೆ ಜಿಯೋದಲ್ಲಿ ವಿಶ್ವದ ಹಲವು ಕಂಪನಿಗಳು ಕಳೆದ ಎರಡು ತಿಂಗಳಿನಲ್ಲಿ 1.6 ಲಕ್ಷ ಕೋಟಿ ರೂ. ಹೂಡಿಕೆ ಮಾಡಿವೆ. ಇದರಿಂದಾಗಿ ಮುಕೇಶ್ ಅಂಬಾನಿ ಸಂಪತ್ತು 64.5 ಬಿಲಿಯನ್ ಡಾಲರ್​ಗೆ ಏರಿಕೆಯಾಗಿದೆ. ಒರಾಕಲ್ ಲ್ಯಾರಿ ಎಲಿಸನ್ ಮತ್ತು ವಿಶ್ವದ ಶ್ರೀಮಂತ ಮಹಿಳೆ ಫ್ರಾನ್ಸ್​ನ ಫ್ರಾಂಕೋಯಿಸ್ ಬೆಟೆನ್ಕೋರ್ಟ್ ಮೇಯರ್ಸ್ ಅವರನ್ನು ಹಿಂದಿಕ್ಕುವ ಮೂಲಕ ವಿಶ್ವದ ಅಗ್ರಗಣ್ಯ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ 9ನೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಇದರ ಜತೆಗೆ ಫೋರ್ಬ್ಸ್ ಅಗ್ರಗಣ್ಯ ಶ್ರೀಮಂತರ ಪಟ್ಟಿಯಲ್ಲೂ ಮುಕೇಶ್ ಅಂಬಾನಿ 9ನೇ ಸ್ಥಾನದಲ್ಲಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ ಷೇರುಗಳ ಮೌಲ್ಯ ಶುಕ್ರವಾರ ಈವರೆಗಿನ ದಾಖಲೆ ಪ್ರಮಾಣ 1,788 ರೂ. ತಲುಪಿದೆ.
ವಿಶ್ವದ ಟಾಪ್ 10 ಶ್ರೀಮಂತರು
* ಜೆಫ್ ಬಿಜೋಸ್ – 160 ಬಿಲಿಯನ್ ಡಾಲರ್
*ಬಿಲ್ ಗೇಟ್ಸ್ – 120 ಬಿಲಿಯನ್ ಡಾಲರ್
* ಮಾರ್ಕ್ ಜುಕರ್​ಬರ್ಗ್ – 90 ಬಿಲಿಯನ್ ಡಾಲರ್
* ವಾರನ್ ಬಫೆಟ್ – 71 ಬಿಲಿಯನ್ ಡಾಲರ್
* ಸ್ಟೀವ್ ಮರ್ – 70.5 ಬಿಲಿಯನ್ ಡಾಲರ್
* ಸೆರ್ಗೆ ಬಿನ್ – 66.0 ಬಿಲಿಯನ್ ಡಾಲರ್
* ಮುಕೇಶ್ ಅಂಬಾನಿ – 64.5 ಬಿಲಿಯನ್ ಡಾಲರ್
* ಫ್ರಾಂಕೋಯಿಸ್ ಬೆಟನ್​ಕೋರ್ಟ್ ಮೇಯರ್ಸ್ – 62 ಬಿಲಿಯನ್ ಡಾಲರ್
ರಿಲಯನ್ಸ್ ಸಾಲಮುಕ್ತ:ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಮೂಹ ಕಳೆದ 58 ದಿನಗಳಲ್ಲಿ 1,68,818 ಕೋಟಿ ರೂಪಾಯಿಗಿಂತ ಹೆಚ್ಚಿನ ಬಂಡವಾಳ ಸಂಗ್ರಹ ಮಾಡಿದ್ದು, ಇದರಿಂದ ಸಂಸ್ಥೆ ಸಾಲ ಮುಕ್ತವಾಗಿದೆ. ಅಬುಧಾಬಿ ಮೂಲದ ಮುಬಾದಲಾ ಇನ್ವೆಸ್ಟ್ ಮೆಂಟ್ ಕಂಪನಿ, ಫೇಸ್​ಬುಕ್, ಸಿಲ್ವರ್ ಲೇಕ್, ವಿಸ್ಟಾ ಈಕ್ವಿಟಿ ಪಾರ್ಟ್​ನರ್ಸ್, ಕೆಕೆಆರ್ ಕಂಪನಿ ಮತ್ತು ಜನರಲ್ ಅಟ್ಲಾಂಟಿಕ್ ಜಿಯೊದಲ್ಲಿ ಕಳೆದ 2 ತಿಂಗಳಲ್ಲಿ ಒಟ್ಟು 1.6 ಲಕ್ಷ ಕೋಟಿ ಹೂಡಿಕೆ ಮಾಡಿವೆ.
ಅಮೆರಿಕ ಪಾಲು ಅಧಿಕ:ಜಾಗತಿಕವಾಗಿ ಪ್ರಮುಖ 10 ಶ್ರೀಮಂತರ ಪಟ್ಟಿಯಲ್ಲಿ ಅಮೆರಿಕದ್ದೇ ಮಹತ್ತರ ಪಾಲು ಇದೆ. ಅಮೆರಿಕದ 7 ಉದ್ಯಮಿಗಳು ಪಟ್ಟಿಯಲ್ಲಿದ್ದು, ಫ್ರಾನ್ಸ್ ಮತ್ತು ಸ್ಪೇನ್​ನ ತಲಾ ಒಬ್ಬೊಬ್ಬರು ಹಾಗೂ ಏಷ್ಯಾದಿಂದ ಏಕೈಕ ವ್ಯಕ್ತಿ ಮುಕೇಶ್ ಅಂಬಾನಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ನಟ ಸುಶಾಂತ್​ ಸಿಂಗ್​ ರಜಪೂತ್​ ತಿಂಗಳಿಗೆಷ್ಟು ಖರ್ಚು ಮಾಡುತ್ತಿದ್ದರು? ಹಳೇ ಮ್ಯಾನೇಜರ್​ ನೀಡಿದ್ದಾರೆ ಪೊಲೀಸರಿಗೆ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
