ಹೈದರಾಬಾದ್:ಮನುಷ್ಯನ ಅಗತ್ಯತೆಯಿಲ್ಲದ ಎಐ(ಆರ್ಟಿಫಿಷಿಯಲ್​ ಇಂಟಲಿಜೆನ್ಸ್​) ಜತೆ ಕಾರ್ಯನಿರ್ವಹಿಸುವ ಚಹಾ, ಕಾಫಿ ಮತ್ತು ನೀರು ಪಡೆಯುವ ವಿಶ್ವದ ಮೊದಲ ಸ್ವಯಂಚಾಲಿತ ಮಾರಾಟ ಯಂತ್ರ ಗುರುವಾರ ನಗರದಲ್ಲಿ ಲೋಕಾರ್ಪಣೆಗೊಂಡಿದೆ.
ಯಂತ್ರವು ಸಂಪೂರ್ಣ ಸ್ವಯಂಚಾಲಿತವಾಗಿದ್ದು, ಬಿಸ್ಕತ್ತುಗಳನ್ನು ಸಹ ವಿತರಿಸುತ್ತದೆ. ಇದನ್ನು ಎಲ್ಟೀನಗರ ಎಲ್​ಪಿಟಿ ಮಾರ್ಕೆಟ್​ ಸಹಕಾರದೊಂದಿಗೆ ಪ್ರಾರಂಭಿಸಲಾಗಿದೆ. ಟಿಎಸ್​ ವೇರ್​ ಹೌಸಿಂಗ್​ ಕಾರ್ಪೋರೇಷನ್​ ಮುಖ್ಯಸ್ಥೆ ವೇದಾ ರಜನಿ ಶನಿವಾರ ಯಂತ್ರಕ್ಕೆ ಚಾಲನೆ ನೀಡಿದರು.
ಇದನ್ನೂ ಓದಿ:ಈಕೆಗೆ “ಜೀವಜಲವೇ” ಕಂಟಕ: ನೀರು ಕುಡಿಯಂಗಿಲ್ಲ ಯಾಕೆ?
ಯಂತ್ರದ ಸಂಶೋಧಕ ಪಿ ವಿನೋದ್ ಕುಮಾರ್ ಮಾತನಾಡಿ, ಅಂತರ್ಗತ ಧ್ವನಿ ಸಹಾಯದಿಂದ ಬಳಕೆದಾರರು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು. ಜತೆಗೆ ಅವರ ಅಪೇಕ್ಷಿತ ಉತ್ಪನ್ನವನ್ನು ಆಯ್ಕೆ ಮಾಡಬೇಕು. ಈ ಯಂತ್ರದ ಬೆಲೆ 1ಲಕ್ಷ 67ಸಾವಿರ ರೂ.ಇದ್ದು, ಯಾರು ಬೇಕಾದರೂ ಖರೀದಿಸಬಹುದು ಎಂದರು.
“ಡಿಜಿಟಲ್​ ಚಾಯ್” ಅಥವಾ “ಚಾ ಎಟಿಎಂ” ಎಂದು ಕರೆಯುವ ಈ ಯಂತ್ರವನ್ನು ಹೈದರಾಬಾದ್​ನ ನಾಲ್ಕೂ ದಿಕ್ಕುಗಳಲ್ಲಿ ಸ್ಥಾಪಿಸುವ ಉದ್ದೇಶವಿದೆ. ಮಾಲ್ ಮತ್ತು ಮೆಟ್ರೋಗಳಲ್ಲಿ ಸ್ವಯಂಚಾಲಿತ ಈ ವಿತರಣಾ ಯಂತ್ರಗಳನ್ನು ಸದ್ಯಕ್ಕೆ ಸ್ಥಾಪಿಸಬಹುದಾಗಿದೆ ಎಂದು ಹೇಳಿದರು.ಬ್ಯಾಂಕ್ ಸಾಲ ಮತ್ತು ವಿಮೆ ಸೌಲಭ್ಯದೊಂದಿಗೆ ರೆಫ್ರಿಜರೇಟರ್‌ಗಿಂತ ಕಡಿಮೆ ಬೆಲೆಯಲ್ಲಿ ಈ ಯಂತ್ರವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.
ಮನ್‌ಮುಲ್‌ ತುಪ್ಪ ಹಾಗೂ ಖೋವಾ ತಯಾರಿಕಾ ಘಟಕಕ್ಕೆ ಬೆಂಕಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
