ನವದೆಹಲಿ:ಕೋವಿಡ್​-19 ರೀತಿಯ ಸೋಂಕುಗಳು ಜಗತ್ತಿನಾದ್ಯಂತ ಹಬ್ಬಿ, ಅದನ್ನು ತಡೆಗಟ್ಟಲು ಮತ್ತೊಮ್ಮೆ ಲಾಕ್​ಡೌನ್​ ಜಾರಿಗೊಂಡರೆ, ಅಂಥ ಸಮಸ್ಯೆಯಿಂದ ಪಾರಾಗಲು ಅತಿಶ್ರೀಮಂತ ವರ್ಗದವರು ಸುರಕ್ಷಿತ ಅಡಗುದಾಣಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಆಸ್ಟ್ರೇಲಿಯಾ, ನ್ಯೂಜಿಲೆಂಡ್​ ಮತ್ತು ಕೆರಿಬಿಯನ್​ ದ್ವೀಪಸಮೂಹಗಳು ತಮಗೆ ಸುರಕ್ಷಿತ ಎಂದು ಕಂಡುಕೊಂಡಿರುವ ಅತಿಶ್ರೀಮಂತ ವರ್ಗ, ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡುವ ಜತೆಗೆ ಆಯಾ ರಾಷ್ಟ್ರಗಳ ಪೌರತ್ವ ಪಡೆದುಕೊಳ್ಳುವುದು, ಸಮುದ್ರ ತಟದಲ್ಲಿರುವ ಮನೆ, ಬಂಗಲೆಗಳನ್ನು ಖರೀದಿಸಿ ವಾಸ್ತವ್ಯದ ಅನುಮತಿ ಪಡೆದು ಆರಾಮವಾಗಿ ಕಾಲಕಳೆಯಲು ಉದ್ದೇಶಿಸಿದ್ದಾರೆ. ಇದಕ್ಕಾಗಿ ಆಯಾ ರಾಷ್ಟ್ರಗಳ ಪೌರತ್ವ ಕೊಡಿಸುವ, ವಾಸ್ತವ್ಯದ ಅನುಮತಿ ಕೊಡಿಸುವ ಹಾಗೂ ಸ್ಥಿರಾಸ್ತಿ ಖರೀದಿಗೆ ನೆರವಾಗುವ ಜಾಗತಿಕ ಸಂಸ್ಥೆಗಳನ್ನು ಸಂಪರ್ಕಿಸಲು ಅತಿಶ್ರೀಮಂತರು ಮುಂದಾಗುತ್ತಿದ್ದಾರೆ.
ಉದಾಹರಣೆಗೆ ನ್ಯೂಜಿಲೆಂಡ್​ನಲ್ಲಿ ನೆಲೆಸಿ, ಉದ್ಯೋಗ ಮಾಡಲು ಅಥವಾ ಶೈಕ್ಷಣಿಕ ವೀಸಾ ಪಡೆಯಲು 15 ಕೋಟಿ ರೂ.ನಿಂದ 50 ಕೋಟಿ ರೂ.ವರೆಗೂ ಹೂಡಿಕೆ ಮಾಡಲು ಅತಿಶ್ರೀಮಂತರ ಸಜ್ಜಾಗಿದ್ದಾರೆ. ಬಂಗಲೆ ಖರೀದಿಯೂ ಸೇರಿ ಸೇರಿ 11 ಕೋಟಿ ರೂಪಾಯಿ ಇದ್ದರೆ ಸಾಕು ಮಾಲ್ಟಾ ದ್ವೀಪ ಸಮೂಹದಲ್ಲಿ ವಿವಾಹಿತ ಜೋಡಿಗೆ ಸುಲಭದಲ್ಲಿ ಪೌರತ್ವ ದೊರೆಯುತ್ತದೆ.
ಇದನ್ನೂ ಓದಿ:ಬಳ್ಳಾರಿ ಡಿಸಿ ಕಚೇರಿ 14 ಸಿಬ್ಬಂದಿಗೆ ಕರೊನಾ ದೃಢ, ಜಿಲ್ಲಾಧಿಕಾರಿ ಹೋಂ ಕ್ವಾರಂಟೈನ್
ಸುರಕ್ಷಿತ ಅಡಗುದಾಣಗಳನ್ನು ಹೊಂದುವ ಮಹತ್ವದ ಬಗ್ಗೆ ಅತಿಶ್ರೀಮಂತರಿಗೆ ಈಗೀಗ ಅರ್ಥವಾಗಲಾರಂಭಿಸಿದೆ. ಅದಕ್ಕಾಗಿ ಅವರೆಲ್ಲರೂ ಇಂಥ ಅಡಗುದಾಣಗಳನ್ನು ಹೊಂದಲು ಬಯಸಿ ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಅಷ್ಟೇ ಅಲ್ಲ, ಸೂಕ್ತ ಎನಿಸಿದ ಸ್ಥಳದಲ್ಲಿ ಆಸ್ತಿಗಳ ಖರೀದಿಗೆ ಮತ್ತು ಆಯಾ ರಾಷ್ಟ್ರದ ಪೌರತ್ವ ಇಲ್ಲವೇ ವೀಸಾ ಪಡೆಯಲು ಮುಂದಾಗುತ್ತಿರುವುದಾಗಿ ಹೆನ್ಲೆ ಎಂಬ ಸಂಸ್ಥೆಯ ಮಾರಾಟ ವಿಭಾಗದ ಮುಖ್ಯಸ್ಥ ಡಾಮ್ನಿಕ್​ ವೊಲೇಕ್​ ಹೇಳಿದ್ದಾರೆ.2019ರ ಇದೇ ಅವಧಿಗೆ ಹೋಲಿಸಿದರೆ ಕಳೆದ ನಾಲ್ಕು ತಿಂಗಳಲ್ಲಿ ಈ ರೀತಿಯ ಮನವಿಗಳಲ್ಲಿ ಶೇ.49 ಹೆಚ್ಚಳವಾಗಿದೆ. ವಾಸ್ತವ್ಯದ ಹಕ್ಕು ಅಥವಾ ಹೊಸ ಪೌರತ್ವವನ್ನು ಹೊಂದಲು ಬಯಸಿ ಅರ್ಜಿ ಸಲ್ಲಿಸುತ್ತಿರುವವರ ಪ್ರಮಾಣದಲ್ಲಿ ಶೇ.22 ಹೆಚ್ಚಳವಾಗಿದೆ.
ಕೋವಿಡ್​ನಂಥ ಮಾರಕ ಪಿಡುಗನ್ನು ಸಮರ್ಥವಾಗಿ ನಿಯಂತ್ರಿಸುವಲ್ಲಿ ಆಯಾ ರಾಷ್ಟ್ರಗಳ ಸರ್ಕಾರಗಳು ಕೈಗೊಂಡ ಕ್ರಮಗಳು, ಇದರಿಂದಾಗಿ ಅಲ್ಲಿ ನಿರ್ಮಾಣವಾಗಿರುವ ಸುರಕ್ಷಿತ ವಾತಾವರಣವನ್ನು ಗಮನಿಸಿ, ಅಂಥ ರಾಷ್ಟ್ರಗಳ ಪೌರತ್ವ ಅಥವಾ ವಾಸ್ತವ್ಯದ ಹಕ್ಕು ಪಡೆಯಲು ಅತಿಶ್ರೀಮಂತರು ಮುಂದಾಗುತ್ತಿದ್ದಾರೆ ಎಂದು ಫ್ರ್ಯಾಗೋಮೆನ್​ ಎಂಬ ಕಾನೂನು ಸಂಸ್ಥೆಯ ವ್ಯವಸ್ಥಾಪಕ ಪಾಲುದಾರಿಣಿ ನ್ಯಾಡೀನ್​ ಗೋಲ್ಡ್​ಫುಟ್​ ತಿಳಿಸಿದ್ದಾರೆ.
ಇದರ ಜತೆಗೆ ಅತಿಶ್ರೀಮಂತರು ಆಯಾ ರಾಷ್ಟ್ರದಲ್ಲಿರುವ ತಮ್ಮ ಸಂಪತ್ತು ನಿರ್ವಹಣಾ ಸೌಲಭ್ಯಗಳನ್ನು ಕೂಡ ಗಮನಿಸುತ್ತಿದ್ದಾರೆ. ಅಂದರೆ ಪ್ರವಾಸಿ ವೀಸಾ ಮುಕ್ತವಾಗಿರುವ ರಾಷ್ಟ್ರಗಳಿಗಾಗಿ ಹುಡುಕಾಡುತ್ತಿದ್ದಾರೆ. ಈ ವರ್ಗಕ್ಕೆ ಸೇರುವ ಪೋರ್ಚುಗಲ್​ನಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಬಯಸಿ ಈ ಕುರಿತು ವಿಚಾರಣೆ ಆರಂಭಿಸಿದ್ದಾರೆ ಎಂದು ಹೆನ್ಲೆ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ:ಲ್ಯಾಂಬೋರ್ಗಿನಿಯಲ್ಲಿ ಸೂಪರ್​ಸ್ಟಾರ್​ ರಜನಿ ಸವಾರಿ; ಅಭಿಮಾನಿಗಳಿಗೆ ನೀಡಿದ ಸಂದೇಶವೇನು?
ಪೋರ್ಚುಗಲ್​ನಲ್ಲಿ ಕೋವಿಡ್​-19 ಪ್ರಕರಣಗಳು ತುಂಬಾ ಕಡಿಮೆ ಇವೆ. ಅಲ್ಲಿನ ರಿಯಲ್​ ಎಸ್ಟೇಟ್​ ಮಾರುಕಟ್ಟೆ ಕೂಡ ಸ್ಥಿರವಾಗಿದೆ. ಈ ಎಲ್ಲದರ ಲಾಭ ಪಡೆಯಲು ಅತಿಶ್ರೀಮಂತರು ಮುಂದಾಗುತ್ತಿರುವುದಾಗಿ ವಿವರಿಸಿದೆ.
ಭಾರತದಿಂದಲೂ ಪರಾರಿಯಾಗಲು ಸಿದ್ಧತೆ:ಭಾರತದಲ್ಲಿ ಕರೊನಾ ವೈರಾಣು ಸೋಂಕು ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿದೆ. ಸಾಲದ್ದಕ್ಕೆ ಚೀನಾ ಗಡಿ ಕ್ಯಾತೆ ತೆಗೆದು ಯುದ್ಧೋನ್ಮಾದ ತೋರುತ್ತಿದೆ. ಈ ಎಲ್ಲ ಸಮಸ್ಯೆಗಳಿಂದ ಪಾರಾಗಲು ಭಾರತದಲ್ಲಿರುವ ಅತಿಶ್ರೀಮಂತರು ಕೂಡ ಸುರಕ್ಷಿತ ಅಡಗುದಾಣಗಳಿಗಾಗಿ ಶೋಧ ಆರಂಭಿಸಿದ್ದಾರೆ. ವಿಚಾರಣೆಗಳು ಹೆಚ್ಚಾಗುತ್ತಿರುವ ಕಾರಣ, ಭಾರತದಲ್ಲಿ ಕೂಡ ತನ್ನ ಶಾಖೆಯನ್ನು ಆರಂಭಿಸಲು ಹೆನ್ಲೆ ಸಂಸ್ಥೆ ಅವಸರಿಸುತ್ತಿದೆ ಎನ್ನಲಾಗಿದೆ.
‘ನಮ್ಮ ಮನೆಯ ದುಷ್ಟ ಬೆಕ್ಕಿನಿಂದ ನನ್ನ ಪತ್ನಿ ಗರ್ಭಿಣಿಯಾಗಿದ್ದಾಳೆ…’-ಬೇಸ್ತು ಬಿದ್ದ ಪತಿ ಮಹಾಶಯನ ಅಳಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − eleven =
Remember me
