ನವದೆಹಲಿ :ಬಂಗಾಳದಲ್ಲಿ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಅವರ ಟಿಎಂಸಿಯನ್ನು ವಿಜಯ ಪಥದಲ್ಲಿ ನಡೆಸಿದ ಖ್ಯಾತಿಯ ಚುನಾವಣಾ ತಂತ್ರಗಾರ ಪ್ರಶಾಂತ್​ ಕಿಶೋರ್,​ ಕಾಂಗ್ರೆಸ್ ಸೇರುವ ಸೂಚನೆಗಳು ಬಂದಿವೆ. ಮಂಗಳವಾರದಂದು ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಅವರ ನಿವಾಸದಲ್ಲಿ ಕಿಶೋರ್​ ನಡೆಸಿದ ‘ಮಹತ್ವದ ಮಾತುಕತೆ’ಯ ನಂತರ ಈ ಊಹೆಗಳು ಹರಿದಾಡುತ್ತಿವೆ.
ಜುಲೈ 13 ರಂದು ಸೋನಿಯಾ ಗಾಂಧಿ, ರಾಹಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮೂವರನ್ನೂ ಜೊತೆಯಾಗಿ ಪ್ರಶಾಂತ್ ಕಿಶೋರ್​ ಭೇಟಿ ಮಾಡಿದರು. ಇದು ಮಾಮೂಲಾಗಿ ನಡೆಯುವಂಥದ್ದಲ್ಲ. ಬರಲಿರುವ ಪಂಜಾಬ್​ ಮತ್ತು ಉತ್ತರಪ್ರದೇಶದ ವಿಧಾನಸಭಾ ಚುನಾವಣೆ ಬಗ್ಗೆ ಚರ್ಚೆ ನಡೆಯುವುದರೊಂದಿಗೆ, 2024ರ ಲೋಕಸಭಾ ಚುನಾವಣೆಗೂ ಕಾಂಗ್ರೆಸ್ಸನ್ನು ಸಜ್ಜುಗೊಳಿಸುವ ‘ದೊಡ್ಡ ವಿಚಾರಗಳು’ ನಿರ್ಧಾರವಾಗಿರಬಹುದು ಎನ್ನಲಾಗಿದೆ.
ಇದನ್ನೂ ಓದಿ:ಪಾಕ್ ಬಸ್ ಸ್ಫೋಟದಲ್ಲಿ 13 ಮಂದಿ ದುರ್ಮರಣ; ಮೃತರಲ್ಲಿ 9 ಜನ ಚೀನೀಯರು!
ಚುನಾವಣಾ ತಂತ್ರಗಾರರಾದ ಪ್ರಶಾಂತ್​ ಕಿಶೋರ್​ ಅವರನ್ನು ರಾಜಕೀಯ ಚಾಣಕ್ಯ ಎಂದೇ ಕರೆಯಲಾಗುತ್ತದೆ. ತಮ್ಮ ಸೇವೆಯನ್ನು ಪಡೆದ ಬಂಗಾಳದ ಟಿಎಂಸಿ ಮತ್ತು ತಮಿಳುನಾಡಿನ ಎಂ.ಕೆ.ಸ್ಟಾಲಿನ್ ಪಕ್ಷಕ್ಕೆ ಚುನಾವಣೆಯಲ್ಲಿ ಭಾರೀ ಗೆಲುವು ಲಭ್ಯವಾದ ಹಿನ್ನೆಲೆಯಲ್ಲಿ ಅವರ ಮೌಲ್ಯ ಹೆಚ್ಚಿದೆ. ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್​ನ ಮಾರ್ಗದರ್ಶಕರಾಗಿ ಕಿಶೋರ್​ ಪ್ರಮುಖ ಪಾತ್ರ ವಹಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕು.(ಏಜೆನ್ಸೀಸ್)
ರಾಜ್ಯಕ್ಕೂ ಜನಸಂಖ್ಯಾ ನೀತಿ : ಸಾರ್ವಜನಿಕ ಚರ್ಚೆಗೆ ಸಿ.ಟಿ.ರವಿ ಇಂಗಿತ

ಕನ್ವರ್ ಯಾತ್ರೆ : ಕೇಂದ್ರ ಮತ್ತು ಯುಪಿ ಸರ್ಕಾರಕ್ಕೆ ಸುಪ್ರೀಂ ನೋಟೀಸು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
