ಬಿಜೆಪಿಯೊಂದಿಗೆ ಬಿಎಸ್​ಪಿ ಮೈತ್ರಿ ಎಂದಿಗೂ ಸಾಧ್ಯವೇ ಇಲ್ಲ ಎಂದು ಮುಖ್ಯಸ್ಥೆ ಮಾಯಾವತಿ ಖಡಾಖಂಡಿತವಾಗಿ ಹೇಳಿದ್ದಾರೆ.
ಬಿಜೆಪಿಯನ್ನು ಕೋಮುವಾದಿ ಮತ್ತು ಜಾತಿವಾದಿ ಎಂದಿರುವ ಮಾಯಾವತಿ, ಬಿಜೆಪಿಯೊಂದಿಗೆ ಕೈ ಜೋಡಿಸುವುದಕ್ಕಿಂತ ರಾಜಕೀಯದಿಂದಲೇ ನಿವೃತ್ತಿ ಪಡೆಯುವುದು ಉತ್ತಮ ಎಂಬುದು ನನ್ನ ಭಾವನೆ ಎಂದಿದ್ದಾರೆ.ಸಮಾಜವಾದಿ ಪಾರ್ಟಿಯನ್ನು ಸೋಲಿಸುವುದಕ್ಕೋಸ್ಕರ ಬಿಎಸ್​ಪಿ ಪಕ್ಷ, ಬಿಜೆಪಿ ಅಥವಾ ಇನ್ಯಾವುದೇ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಲು ಸಿದ್ಧವಿದೆ ಎಂದು ಕಳೆದವಾರ ಮಾಯಾವತಿ ಹೇಳಿದ್ದರು. ಆದರೆ ಅದಾದ ಬಳಿಕ ಬಿಎಸ್​ಪಿ-ಬಿಜೆಪಿ ಮೈತ್ರಿ ಮಾಡಿಕೊಳ್ಳಲಿವೆ ಎಂಬರ್ಥದ ಹೇಳಿಕೆಗಳನ್ನು ಕಾಂಗ್ರೆಸ್​, ಎಸ್​ಪಿ ಪಕ್ಷಗಳು ನೀಡಲು ಶುರುಮಾಡಿದ್ದವು.ಇದನ್ನೂ ಓದಿ:ಶಾರುಖ್​ ಹುಟ್ಟುಹಬ್ಬಕ್ಕೆ ಜೂಹಿ ಚಾವ್ಲಾ ಕಡೆಯಿಂದ ಮನಮೆಚ್ಚುವ ಕಾರ್ಯ
ಇದೀಗ ಸ್ಪಷ್ಟನೆ ನೀಡಿದ ಮಾಯಾವತಿ, ಈಗ ಅಥವಾ ಭವಿಷ್ಯದಲ್ಲಿ ಯಾವುದೇ ಚುನಾವಣೆಯಲ್ಲೂ ಬಿಎಸ್​ಪಿ-ಬಿಜೆಪಿ ಮೈತ್ರಿ ಸಾಧ್ಯವೇ ಇಲ್ಲ. ನಾವು ಕೋಮುವಾದಿ ಪಕ್ಷದೊಂದಿಗೆ ಹೊಂದಿಕೊಂಡು ಚುನಾವಣೆ ಎದುರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಎಲ್ಲ ಧರ್ಮ, ಜಾತಿಯ ಪ್ರತಿಯೊಬ್ಬರಿಗೂ ಅನುಕೂಲ ಕಲ್ಪಿಸಿಕೊಡುವುದು ನಮ್ಮ ಸಿದ್ಧಾಂತ. ಆದರೆ ಬಿಜೆಪಿಯದ್ದು ಕೋಮುವಾದ, ಜಾತಿವಾದ, ಬಂಡವಾಳಶಾಹಿ ಸಿದ್ಧಾಂತ. ನಮ್ಮ ನಡುವೆ ಮೈತ್ರಿ ಸಾಧ್ಯವೇ ಇಲ್ಲ ಎಂದಿದ್ದಾರೆ.
ಬಾಬರಿ ಕಟ್ಟಡ ಧ್ವಂಸ ಪ್ರಕರಣದ ತೀರ್ಪು ನೀಡಿದ ಮಾಜಿ ನ್ಯಾಯಾಧೀಶರಿಗೆ ಭದ್ರತೆ ವಿಸ್ತರಣೆ ಇಲ್ಲ: ಸುಪ್ರೀಂ ಕೋರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
