ನವದೆಹಲಿ:ಚೊಚ್ಚಲ ಮಹಿಳಾ ಪ್ರೀಮಿಯರ್​ ಲೀಗ್​ (ಡಬ್ಲ್ಯುಪಿಎಲ್​)ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡವನ್ನು ಸ್ಮೃತಿ ಮಂದನಾ ಅವರು ಮುನ್ನಡೆಸಲಿದ್ದಾರೆ. ಆರ್​ಸಿಬಿಯ ಮಾಜಿ ನಾಯಕ ವಿರಾಟ್​ ಕೊಹ್ಲಿ ಮತ್ತು ಹಾಲಿ ನಾಯಕ ಫಾಫ್​ ಡುಪ್ಲಿಸಿಸ್ ಅವರು ಆರ್​ಸಿಬಿ ಮಹಿಳಾ ತಂಡದ ಮೊದಲ ನಾಯಕಿಯನ್ನಾಗಿ ಸ್ಮೃತಿ ಮಂದನಾರನ್ನು ಹೆಸರಿಸಿದ್ದಾರೆ.
ಫೆ.13ರಂದು ನಡೆದ ಚೊಚ್ಚಲ ಮಹಿಳಾ ಪ್ರೀಮಿಯರ್​ ಲೀಗ್​ (ಡಬ್ಲ್ಯುಪಿಎಲ್​)ನ ಚೊಚ್ಚಲ ಹರಾಜು ಪ್ರಕ್ರಿಯೆಯಲ್ಲಿ 3.4 ಕೋಟಿ ರೂ.ಗಳ ದಾಖಲೆಯ ಮೊತ್ತಕ್ಕೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ಪಾಲಾಗುವ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್​ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದನಾ ಅವರು ದುಬಾರಿ ಕ್ರಿಕೆಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದೀಗ ಆರ್​ಸಿಬಿ ನಾಯಕತ್ವ ವಹಿಸಿಕೊಳ್ಳುವ ಮೂಲಕ ಮೊದಲ ಆವೃತ್ತಿಯಲ್ಲಿ ತಂಡವನ್ನು ಗೆಲುವಿನತ್ತ ಮುನ್ನೆಡೆಸುವ ಭರವಸೆಯನ್ನು ಹೊಂದಿದ್ದಾರೆ. ಇಂದು ಆರ್​ಸಿಬಿ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ವಿಡಿಯೋ ಸಂದೇಶದಲ್ಲಿ ವಿರಾಟ್ ಮತ್ತು ಡುಪ್ಲೆಸಿಸ್​ ಸ್ಮೃತಿ ಹೆಸರನ್ನು ಘೋಷಣೆ ಮಾಡುವ ಮೂಲಕ ಶುಭಕೋರಿದ್ದಾರೆ.
ಹೊಸ ಜವಬ್ದಾರಿಯನ್ನು ನೀಡಿದ್ದಕ್ಕೆ ಆರ್​ಸಿಬಿಗೆ ಸ್ಮೃತಿ ಮಂದನಾ ಅವರು ಧನ್ಯವಾದಗಳನ್ನು ತಿಳಿಸಿದ್ದು, ಸಾಧ್ಯವಾದಷ್ಟು ತಂಡದ ಗೆಲುವಿದಾಗಿ ಪ್ರಯತ್ನಿಸುವುದಾಗಿ ಹೇಳಿದ್ದಾರೆ. ಹಾಗೆಯೇ ಆರ್​ಸಿಬಿ ಅಭಿಮಾನಿಗಳಿಗೆ ಕರೆ ನೀಡಿರುವ ಸ್ಮೃತಿ, ನಿಮ್ಮ ಬೆಂಬಲ ಸದಾ ಇರಲಿ ಎಂದಿದ್ದಾರೆ. ಮೊದಲ ಆವೃತ್ತಿಯನ್ನು ಕಾತರದಿಂದ ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್​)
From one No. 18 to another, from one skipper to another, Virat Kohli and Faf du Plessis announce RCB’s captain for the Women’s Premier League – Smriti Mandhana.#PlayBold#WPL2023#CaptainSmriti@mandhana_smritipic.twitter.com/sqmKnJePPu
— Royal Challengers Bangalore (@RCBTweets)February 18, 2023

ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ 12 ಚೀತಾಗಳು: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕ್ವಾರಂಟೈನ್​

ದೂರು ನೀಡಲು ಹೋದರೆ ಠಾಣೆ ಖಾಲಿ ಖಾಲಿ! ಮಹಾಲಕ್ಷ್ಮಿ ಲೇಔಟ್​ ಪೊಲೀಸರ ವಿರುದ್ಧ ಗಂಭೀರ ಆರೋಪ…

ಶಾರುಖ್​ ಮ್ಯಾನೇಜರ್​ ಪೂಜಾರ ಒಟ್ಟು ಆಸ್ತಿ ಮೌಲ್ಯ, ವಾರ್ಷಿಕ ಸಂಬಳ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಂಡಿತ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − 13 =
Remember me
