ನವದೆಹಲಿ:ಡಬ್ಲ್ಯುಡಬ್ಲ್ಯುಇ ಮನರಂಜಾ ಕ್ರೀಡೆಯ ಕುಸ್ತಿಪಟು ಭಾರತದ ದಿ ಗ್ರೇಟ್​ ಖಲಿ ಅಲಿಯಾಸ್​ ದಲಿಪ್​ ಸಿಂಗ್​ ರಾಣಾ ಅವರ ತಾಯಿ ತಾಂದಿ ದೇವಿ (75) ಭಾನುವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ತಾಂದಿ ದೇವಿ ಅವರು ಪಂಜಾಬ್​ನ ಲೂಧಿಯಾನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕಳೆದ ವಾರವಷ್ಟೇ ಖಲಿ ಅವರ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಭಾನುವಾರ ರಾತ್ರಿ ಮೃತಪಟ್ಟಿರುವುದಾಗಿ ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ.
ರಾಣಾ ಅಲಿಯಾಸ್​ ಖಲಿ 2000ರಲ್ಲಿ ಡಬ್ಲ್ಯುಡಬ್ಲ್ಯುಇ ಅಖಾಡಕ್ಕೆ ಇಳಿದರು. ಡಬ್ಲ್ಯುಡಬ್ಲ್ಯುಇ ವೃತ್ತಿಜೀವನವನ್ನು ಆರಂಭಿಸುವ ಮೊದಲು ಖಲಿ, ಪಂಜಾಬ್​ ಪೊಲೀಸ್​ ಅಧಿಕಾರಿಯಾಗಿದ್ದರು. ಅವರ ಡಬ್ಲ್ಯುಡಬ್ಲ್ಯುಇ ವೃತ್ತಿಜೀವನದ ಅವಧಿಯಲ್ಲಿ ಖಲಿ ಡಬ್ಲ್ಯುಡಬ್ಲ್ಯುಇ ಚಾಂಪಿಯನ್ ಸಹ ಆಗಿದ್ದಾರೆ.
ಖಲಿ ಅವರು ನಾಲ್ಕು ಹಾಲಿವುಡ್ ಚಲನಚಿತ್ರಗಳು ಮತ್ತು ಎರಡು ಬಾಲಿವುಡ್ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.(ಏಜೆನ್ಸೀಸ್​)
ಆರೋಗ್ಯಕ್ಕಾಗಿ ಯೋಗ ಮೂಲಮಂತ್ರ ಆಗಬೇಕು: ಅಂತಾರಾಷ್ಟ್ರೀಯ ಯೋಗ ದಿನದಂದು ನಮೋ ಸಂದೇಶ

ಗ್ರಾಮೀಣ ಕರ್ನಾಟಕದಲ್ಲಿ ಮೂಡದ ಬೆಳಕು: 24*7 ವಿದ್ಯುತ್ ನೀಡುವ ಭರವಸೆ ಹುಸಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + two =
Remember me
