ನವದೆಹಲಿ :ಉತ್ತರ ದೆಹಲಿಯ ಛತ್ರಸಾಲ್ ಕ್ರೀಡಾಂಗಣದ ಆವರಣದಲ್ಲಿ ನಡೆದ ಎರಡು ಆಟಗಾರರ ಗುಂಪುಗಳ ಘರ್ಷಣೆಯಲ್ಲಿ ಯುವ ಕುಸ್ತಿ ಆಟಗಾರರೊಬ್ಬರು ದುರಂತ ಸಾವಿಗೀಡಾಗಿದ್ದಾರೆ. ಏಪ್ರಿಲ್​ 4 ರ ತಡರಾತ್ರಿ ನಡೆದ ಈ ದುರ್ಘಟನೆಯ ಬಗ್ಗೆ ಪೊಲೀಸರು ದಾಖಲಿಸಿರುವ ಎಫ್​.ಐ.ಆರ್​.ನಲ್ಲಿ ಎರಡು ಬಾರಿ ಒಲಂಪಿಕ್​ ಪದಕ ಗೆದ್ದಿರುವ ಕುಸ್ತಿಪಟು ಸುಶೀಲ್ ಕುಮಾರ್ ಅವರ ಹೆಸರಿದೆ ಎನ್ನಲಾಗಿದೆ.
ಕುಮಾರ್, ಅಜಯ್​, ಪ್ರಿನ್ಸ್​, ಸೋನು, ಸಾಗರ್, ಅಮಿತ್ ಮತ್ತಿತರ ಕುಸ್ತಿ ಆಟಗಾರರ ನಡುವೆ ಕ್ರೀಡಾಂಗಣದ ಪಾರ್ಕಿಂಗ್​ನಲ್ಲಿ ಘರ್ಷಣೆ ಆರಂಭವಾಯಿತು. ಈ ಹೊಡೆದಾಟದಲ್ಲಿ ಸಾಗರ್​ ಮತ್ತು ಅವರ ಮಿತ್ರರ ಮೇಲೆ ತೀವ್ರವಾಗಿ ಹಲ್ಲೆ ನಡೆಸಲಾಯಿತು ಎನ್ನಲಾಗಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಾಗ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ:ಕರೊನಾ ಪೀಡಿತ ತಂದೆಗೆ ನೀರು ಕುಡಿಸಲು ಸೆಣಸಾಡಿದ ಮಗಳು ! ಮನ ಕಲಕುವ ವಿಡಿಯೋ
“ಕೃತ್ಯ ನಡೆದ ಸ್ಥಳ ಮತ್ತು ಐದು ವಾಹನಗಳನ್ನು ಪರಿಶೀಲಿಸಲಾಯಿತು. ಒಂದು ಸ್ಕಾರ್ಪಿಯೋದಲ್ಲಿ ಐದು ಲೈವ್​ ಕಾರ್ಟ್​​ರಿಡ್ಜ್​​ಗಳಿರುವ ಒಂದು ಡಬಲ್ ಬ್ಯಾರೆಲ್ ಲೋಡೆಡ್​ ಗನ್ ಮತ್ತು ಎರಡು ಮರದ ದಂಡಗಳು ಸಿಕ್ಕಿವೆ. ಅವೆಲ್ಲವನ್ನು ಜಪ್ತಿ ಪಡಿಸಿಕೊಂಡಿದ್ದು, ಫೊರೆನ್ಸಿಕ್​ ತಜ್ನರು ಸಹ ಪರಿಶೀಲನೆ ನಡೆಸಿದ್ದಾರೆ” ಎಂದು ವಾಯುವ್ಯ ದೆಹಲಿ ಎಡಿಸಿಪಿ ಗುರೀಖ್​​ಬಲ್ ಸಿಂಗ್ ಸಿಧು ಹೇಳಿದ್ದಾರೆ.
ತನಿಖೆ ನಡೆಯುತ್ತಿರುವಂತೆಯೇ, ಗಾಯಗೊಂಡು ಸಿವಿಲ್​ ಲೈನ್ಸ್​​ ಟ್ರಾಮಾ ಸೆಂಟರ್​ ಸೇರಿದ್ದ ಸಾಗರ್​ ಎಂಬ 23 ವರ್ಷದ ಕುಸ್ತಿಪಟು ಸಾವಪ್ಪಿದ್ದು ತಿಳಿದುಬಂತು. ಅವರ ಮಿತ್ರ ಸೋನುಗೆ ಗಂಭೀರವಾಗಿ ಗಾಯಗಳಾಗಿದ್ದು, ಕೊಲೆ ಮತ್ತು ಇತರ ಆರೋಪಗಳನ್ನು ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದಿದ್ದಾರೆ.(ಏಜೆನ್ಸೀಸ್)
ಇನ್ನೂ ಬರಲಿದೆಯಂತೆ ಕರೊನಾ 3ನೇ ಅಲೆ ! ಸರ್ಕಾರದ ವೈಜ್ಞಾನಿಕ ಸಲಹೆಗಾರರ ಎಚ್ಚರಿಕೆ

ಕ್ರಿಕೆಟಿಗನನ್ನು ಅಪಹರಿಸಿದ ದುಷ್ಕರ್ಮಿಗಳು! ಥಳಿಸಿದರು, ಗನ್​ ಹಿಡಿದು ಬೆದರಿಸಿದರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
