ಮುಂಬೈ:ಲೇಖಕಿಯೊಬ್ಬರು ತಮ್ಮ ಕಥೆಗಳನ್ನು ಸಿನಿಮಾ ಮಾಡುವ ಭರವಸೆಯನ್ನು ಈಡೇರಿಸಲಿಲ್ಲ ಎಂದು ಬಾಲಿವುಡ್​ ನಟ ರಣದೀಪ್​ ಹೂಡ ಮತ್ತಿತರರಿಗೆ ಲೀಗಲ್​ ನೋಟೀಸ್​ ನೀಡಿದ್ದಾರೆ. ಸೂರತ್​​ನಲ್ಲಿ ಚಲನಚಿತ್ರ ಕಥೆಗಾರ್ತಿ ಮತ್ತು ಕವಿ ಎನ್ನಲಾದ ಪ್ರಿಯಾಂಕಾ ಶರ್ಮ ಎಂಬುವರು ಈ ನೋಟೀಸ್​ ನೀಡಿದ್ದು, ಹೂಡ ಅವರಿಂದ 10 ಕೋಟಿ ರೂ. ಪರಿಹಾರದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ತಮ್ಮ 1200 ಹಾಡುಗಳನ್ನು ಮತ್ತು 40 ಕಥೆಗಳನ್ನು ರಣದೀಪ್​ ಹೂಡ ಮತ್ತು ಅವರ ಕುಟುಂಬದ ಸದಸ್ಯರಿಗೆ, ರಣದೀಪ್​ರ ಮ್ಯಾನೇಜರ್​ ಪಾಂಚಾಲಿ ಚೌಧರಿಗೆ ಮತ್ತು ಮೇಕಪ್​ ಕಲಾವಿದೆ ರೇಣುಕಾ ಪಿಳ್ಳೈಗೆ ಈಮೇಲ್ ಮತ್ತು ವಾಟ್ಸಾಪ್​ ಮೂಲಕ ಕಳುಹಿಸಿರುವುದಾಗಿ ಆಕೆಯ ವಕೀಲರಾದ ರಜತ್​ ಕಲ್ಸನ್​ ನೋಟೀಸಿನಲ್ಲಿ ಹೇಳಿದ್ದಾರೆ. ಹೂಡ ತಮ್ಮ ಕಥೆಗಳನ್ನು ಸಿನಿಮಾ ಮಾಡಲು ಬಳಸುವುದಾಗಿ ಭರವಸೆ ನೀಡಿ ಈಡೇರಿಸಿಲ್ಲ. ನಂತರ ತಮ್ಮ ಬರಹಗಳನ್ನು ವಾಪಸ್​ ಕೇಳಿದರೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಲೇಖಕಿ ಪ್ರಿಯಾಂಕಾ ಆರೋಪಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ನಿಮ್ಮ ಕನ್ನಡ ಪ್ರೀತಿಗೆ ಚಿರಋಣಿ: ಮಗಳ ವಿಡಿಯೋಗೆ ಕನ್ನಡ ಹಾಡು ಹಾಕಿದ ವಾರ್ನರ್​ಗೆ ಕನ್ನಡಿಗರ ಸಲಾಂ
ಈ ಬಗ್ಗೆ ಪ್ರಿಯಾಂಕಾ ಶರ್ಮ ಅವರು ಹರಿಯಾಣ ಡೈರೆಕ್ಟರ್​ ಜನರಲ್ ಆಫ್​ ಪೊಲೀಸ್​ನ ರೇಂಜ್ ಕಮಿಷನರ್​ಗೆ ದೂರು ನೀಡಿದ್ದಾರೆ ಎನ್ನಲಾಗಿದ್ದು, ಕಳೆದ 8 ವರ್ಷಗಳಿಂದ ತಮ್ಮನ್ನು ಈ ನಿಟ್ಟಿನಲ್ಲಿ ಶೋಷಿಸಿದ್ದಕ್ಕೆ ಪರಿಹಾರವಾಗಿ 10 ಕೋಟಿ ರೂಪಾಯಿ ನೀಡಬೇಕೆಂದು ನೋಟೀಸಿನಲ್ಲಿ ಹೇಳಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)
ಕರೊನಾ ಲಸಿಕೆಯ 2ನೇ ಡೋಸ್​ ಮಿಸ್​ ಮಾಡಿಕೊಂಡವರು ಎಷ್ಟು ಜನ ಗೊತ್ತಾ?!

ಪೆಲ್ವಿಕ್​ ಅಂಗಗಳನ್ನು ಬಲಪಡಿಸಲು ಸರಳವಾದ ‘ಶಲಭಾಸನ’ ಮಾಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + twenty =
Remember me
