ಮುಂಬೈ:ಕಳೆದ ವರ್ಷ ಸಾಕಷ್ಟು ಸುದ್ದಿಯಾಗಿದ್ದ ಪ್ರಸಿದ್ಧ ಸಂಗೀತ ನಿರ್ದೇಶಕ ಮತ್ತು ಗಾಯಕ ರೆಹಮಾನ್​ ಅವರ ಮಗಳ ಬುರ್ಖಾ ಇದೀಗ ಮತ್ತೆ ಸುದ್ದಿಗೆ ಬಂದಿದೆ. ಲೇಖಕಿ ತಸ್ಲಿಮಾ ನಸ್ರೀನ್​, ರೆಹಮಾನ್​ ಮಗಳು ಖತೀಜಾ ಅವರ ಬುರ್ಖಾ ಬಗ್ಗೆ ಟ್ವಿಟ್ಟರ್​ನಲ್ಲಿ ಮಾತನಾಡಿದ್ದಾರೆ. ತಮ್ಮ ಬಗ್ಗೆ ಮಾತನಾಡಿರುವ ಲೇಖಕಿಗೆ ಇನ್ಸ್ಟಾಗ್ರಾಂನಲ್ಲಿ ಮುಖಕ್ಕೆ ಹೊಡೆಯುವಂತೆ ಖತೀಜಾ ಉತ್ತರ ನೀಡಿದ್ದಾರೆ.
ಲೇಖಕಿ ತಸ್ಲಿಮಾ ನಸ್ರೀನ್​, ಖತೀಜಾ ಅವರ ಬುರ್ಖಾ ಫೋಟೋವನ್ನು ಟ್ವಿಟ್ಟರ್​ನಲ್ಲಿ ಹಾಕಿದ್ದು, “ನಾನು ಎ.ಆರ್​.ರೆಹಮಾನ್​ ಅವರ ಸಂಗೀತವನ್ನು ಇಷ್ಟಪಡುತ್ತೇನೆ. ಆದರೆ ಅವರ ಪ್ರಿತಿಯ ಮಗಳನ್ನು ನೋಡಿದಾಗಲೆಲ್ಲಾ ಉಸಿರು ಕಟ್ಟಿದಂತಾಗುತ್ತದೆ. ಸಂಸ್ಕೃತಿ ಬದ್ಧ ಕುಟುಂಬದಲ್ಲಿ ವಿದ್ಯಾವಂತ ಮಹಿಳೆಯರ ಬ್ರೈನ್​ ವಾಶ್​ ಎಷ್ಟು ಸುಲಭವಾಗಿ ಮಾಡಬಹುದು ಎಂದು ಯೋಚಿಸಿದರೆ ಚಿಂತೆ ಕಾಡುತ್ತದೆ” ಎಂದು ಟ್ವೀಟ್​ ಮಾಡಿದ್ದಾರೆ.
ಈ ವಿಚಾರಕ್ಕೆ ಸಿಟ್ಟಿಗೆದ್ದಿರುವ ಖತೀಜಾ, ಲೇಖಕಿಯ ಟ್ವೀಟ್​ನ ಫೋಟೊವನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಾಕಿದ್ದು ಅವರ ಪೋಸ್ಟ್​ಗೆ ತಕ್ಕ ತಿರುಗೇಟನ್ನು ನೀಡಿದ್ದಾರೆ. “ಒಂದು ವರ್ಷದ ಹಿಂದೆ ಈ ವಿಷಯ ಸುದ್ದಿಯಾಗಿತ್ತು ಇದೀಗ ಮತ್ತೆ ಅದೇ ಸುತ್ತುವರೆದಿದೆ. ನಮ್ಮ ದೇಶದಲ್ಲಿ ಮಹಿಳೆಯ ಉಡುಪಿನ ಬಗ್ಗೆ ಎಲ್ಲರೂ ಕಾಳಜಿ ವಹಿಸುತ್ತಾರೆ. ಈ ವಿಚಾರ ನನ್ನಲ್ಲಿ ರೋಷವನ್ನು ಹೆಚ್ಚಿಸುತ್ತದೆ. ನಾನು ನನ್ನ ಜೀವನದಲ್ಲಿ ಹಲವು ಆವೃತಿಗಳನ್ನು ಕಂಡಿದ್ದೇನೆ. ಅದ್ಯಾವುದರ ಕುರಿತಾಗಿಯೂ ನನಗೆ ಬೇಸರವಿಲ್ಲ. ನಾನು ಆ ವಿಚಾರವಾಗಿ ಖುಷಿಯಾಗಿದ್ದೇನೆ ಮತ್ತು ನನ್ನನ್ನು ನನ್ನಂತೆ ಒಪ್ಪಿಕೊಂಡ ಜನರಿಗೆ ಧನ್ಯವಾದ ತಿಳಿಸುತ್ತೇನೆ. ನನ್ನ ಕೆಲಸ ಮಾತಾಡುತ್ತದೆ. ಅದರ ಮುಂದೆ ನಾನೇನು ಮಾತನಾಡಲು ಬಯಸುವುದಿಲ್ಲ. ಪ್ರೀತಿಯ ತಸ್ಲಿಮಾ ನಸ್ರೀನ್​ ಅವರೇ, ನನ್ನ ಉಡುಪಿನಿಂದ ನಿಮಗೆ ಉಸಿರುಕಟ್ಟುತ್ತಿದ್ದರೆ ಕ್ಷಮಿಸಿ. ಒಳ್ಳೆ ಗಾಳಿಯನ್ನು ತೆಗೆದುಕೊಳ್ಳಿ. ನನ್ನ ಉಡುಪು ನನಗೆ ಯಾವತ್ತೂ ಉಸಿರು ಕಟ್ಟಿಸಿಲ್ಲ ಬದಲಾಗಿ ಸಬಲೆಯಾಗಿ ನಿಲ್ಲುವಲ್ಲಿ ಸಹಕರಿಸಿದೆ. ಫೆಮಿನಿಸಂ ಬಗ್ಗೆ ನೀವು ಗೂಗಲ್​ ಮಾಡಿ ತಿಳಿದುಕೊಳ್ಳಿ. ಏಕೆಂದರೆ ಫೆಮಿನಿಸಂ ಯಾವತ್ತೂ ಬೇರೆ ಮಹಿಳೆಯನ್ನು ಕೀಳಾಗಿ ಕಾಣುವುದಕ್ಕಾಗಲೀ ಅಥವಾ ಆಕೆಯ ತಂದೆಗೆ ಸಮಸ್ಯೆ ತಂದಿಡುವುದಾಗಲಿ ಸೂಚಿಸುವುದಿಲ್ಲ. ನಿಮ್ಮ ಪರಿಶೀಲನೆಗಳಿಗೆ ನನ್ನ ಫೋಟೋ ಕಳಿಸಿದ್ದೆ ಎನ್ನುವುದನ್ನು ನಾನು ನೆನಪಿಸಿಕೊಳ್ಳುವುದಿಲ್ಲ” ಎಂದು ಹೇಳಿದ್ದಾರೆ.
ಕಳೆದ ವರ್ಷ ಖತೀಜಾ ಅವರು ಬುರ್ಖಾ ತೊಟ್ಟಿರುವ ಫೋಟೋ ವೈರಲ್​ ಆಗಿತ್ತು. ಪ್ರಸಿದ್ಧ ಸಂಗೀತ ನಿರ್ದೇಶಕನ ಮನೆಯಲ್ಲೇ ಹೆಣ್ಣಿಗೆ ಸ್ವಾತಂತ್ರ್ಯ ಇಲ್ಲ ಎಂದು ಟೀಕಿಸಲಾಗಿತ್ತು. ಆದರೆ ರೆಹಮಾನ್​ ನಮ್ಮ ಮನೆಯಲ್ಲಿ ಅವರವರ ಇಷ್ಟದ ಉಡುಗೆ ತೊಡಲು ಅವಕಾಶವಿದೆ ಎಂದು ಹೇಳಿದ್ದರು. ಖತಿಜಾ ಕೂಡ ತನ್ನ ಇಚ್ಛೆಯ ಮೇರೆಗೆ ಬುರ್ಖಾ ತೊಟ್ಟಿದ್ದಾಗಿ ಹೇಳಿಕೊಂಡಿದ್ದರು.(ಏಜೆನ್ಸೀಸ್​)
I absolutely love A R Rahman's music. But whenever i see his dear daughter, i feel suffocated. It is really depressing to learn that even educated women in a cultural family can get brainwashed very easily!pic.twitter.com/73WoX0Q0n9
— taslima nasreen (@taslimanasreen)February 11, 2020

https://www.instagram.com/p/B8jzyv4lKTT/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − eight =
Remember me
