ನವದೆಹಲಿ:ಮಾರಕ ವೈರಸ್​ ಕೊರೊನಾದ ಬಗ್ಗೆ 1981ರಲ್ಲಿ ಪ್ರಕಟವಾದ ಡೀನ್​ ಕೂಂಟ್ಸ್​ ಅವರು ಬರೆದ “ದಿ ಐಯ್ಸ್​ ಆಫ್​ ಡಾರ್ಕ್​ನೆಸ್” ಎಂಬ ಕಾದಂಬರಿಯಲ್ಲಿ ಪ್ರಸ್ತಾಪವಾಗಿತ್ತು.
ಈ ಕಾದಂಬರಿಯಲ್ಲಿ ಬರುವಂತೆ ಚೀನಾದ ಸೇನಾಪಡೆಯ ಸಂಶೋಧನಾ ವಿಭಾಗ ಒಂದು ವೈರಸ್​ನ್ನು ಸೃಷ್ಟಿಸುತ್ತದೆ. ಆ ವೈರಸ್​​ನ್ನು ಒಂದು ಜೈವಿಕ ಅಸ್ತ್ರವನ್ನಾಗಿ ಬಳಸಲಾಗುತ್ತದೆ ಎಂಬ ಅಂಶ ಪ್ರಕಟವಾಗಿತ್ತು. ಈ ವಿಷಯವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಕಾದಂಬರಿಯ ಪುಟ 39ರಲ್ಲಿ, ವುಹಾನ್​ನಲ್ಲಿರುವ ಸೇನಾಪಡೆಯ ಸಂಶೋಧನಾ ಕೇಂದ್ರ ವೈರಸ್​ನ್ನು ಸೃಷ್ಟಿಸುತ್ತದೆ. ಅದಕ್ಕೆ ವುಹಾನ್​ 400 ಎಂದು ಹೆಸರಿಸಲಾಗಿರುತ್ತದೆ ಎಂದು ಬರೆದಿದೆ.
ಇದನ್ನು ಟ್ವೀಟ್​ ಮಾಡಿರುವ ಕಾಂಗ್ರೆಸ್​ ಮುಖಂಡ ಮನೀಷ್​ ತಿವಾರಿ, ಕೊರೊನಾ ವೈರಸ್​ ಎಂಬ ಜೈವಿಕ ಶಸ್ತ್ರಾಸ್ತ್ರವನ್ನು ವುಹಾನ್​ 400 ಎಂಬ ಹೆಸರಿನಲ್ಲಿ ಚೀನಾ ತಯಾರಿಸಿದೆಯೇ? ಈ ಪುಸ್ತಕ ಪ್ರಕಟಗೊಂಡಿರುವುದು 1981ರಲ್ಲಿ! ಎಂದು ಬರೆದಿದ್ದಾರೆ.
ಅಲ್ಲದೆ ಟ್ವೀಟ್​ನಲ್ಲಿ ಆ ಪುಟದ ಒಂದು ಪ್ಯಾರಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ನೂರಾರು ಟ್ವೀಟಿಗರು ಬಗೆಬಗೆಯಾಗಿ ಪ್ರತಿಕ್ರಿಯಿಸಿದ್ದಾರೆ.(ಏಜೆನ್ಸೀಸ್​)
Is Coranavirus a biological Weapon developed by the Chinese called Wuhan -400? This book was published in 1981. Do read the excerpt.pic.twitter.com/Qdep1rczBe
— Manish Tewari (@ManishTewari)February 16, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
