ವುಹಾನ್​:ಕೊರೊನಾ ವೈರಸ್ ಕಾಡು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತಿದೆ. ಸಾವಿರಾರು ಮಾರಣಾಂತಿಕ ಕಾಯಿಲೆಗೆ ತುತ್ತಾದ ನಂತರ ವುಹಾನ್‌ನ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಭೋಜನಕ್ಕೆ ಆಮೆ ಮಾಂಸ ನೀಡಲಾಗುತ್ತಿದೆ.
“ಇವತ್ತಿನ ಊಟದಲ್ಲಿ ಆಮೆ ಮಾಂಸ ಇದೆ” ಎಂದು ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಯೊಬ್ಬ ವಿಡಿಯೋಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾನೆ.
ಮಾರಕ ವೈರಸ್​ ಸೋಂಕಿನಿಂದ 638 ಮಂದಿ ಮೃತಪಟ್ಟಿರುವುದು ಕಾಡು ಪ್ರಾಣಿಗಳಿಂದ. ಅದರಲ್ಲೂ ವಿಶೇಷವಾಗಿ ಬಾವಲಿ ಮತ್ತು ಹಾವುಗಳ ಸೇವನೆಯಿಂದ ಎಂಬುದು ತಜ್ಙರ ಅಭಿಮತ.
ಇಲ್ಲಿನ ವೈದ್ಯರ ಪ್ರಕಾರ ಪೆಂಗೋಲಿನ್​ಗಳ ಸೇವನೆಯಿಂದ ಕೊರೊನಾ ವೈರಸ್​ ಬೇಗ ಹರಡುತ್ತದೆ. ಆದ್ದರಿಂದ ಮೃದುವಾದ ಆಮೆ ಮಾಂಸ ಸೇವನೆ ಅಥವಾ ಜಿಯ ಯು ಎನ್ನುವ ಆಹಾರ ಸೇವನೆ ಸಾಂಪ್ರಾದಾಯಿಕವಾಗಿ ಒಳ್ಳೆಯದು. ಆಮೆ ಮಾಂಸದೊಳಗಿನ ಪ್ರೋಟೀನ್​ನಿಂದ ತುಂಬಿರುತ್ತದೆ, ಇದರಿಂದ ವೈರಸ್​ ಪೀಡಿತರ ಶೀಘ್ರ ಗುಣಮುಖರಾಗಬಹುದು ಎನ್ನುವುದು ಅವರ ಅಭಿಪ್ರಾಯ.
ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಮಹಿಳಾ ರೋಗಿಯೊಬ್ಬಳು ಸಹೋದರರೇ, ನೋಡಿ ನೀವು ಮುಂದಿನ ಸಾಲಿನಲ್ಲಿ ಹೋರಾಡುತ್ತಿದ್ದೀರಿ, ಮತ್ತು ನಾವು ನಿಮ್ಮೊಂದಿಗೆ ಮುಂದಿನ ಸಾಲಿನಲ್ಲೇ ಹೋರಾಟ ನಡೆಸಿದ್ದೇವೆ ಎನ್ನುತ್ತಾಳೆ.
ಇನ್ನು ಎರಡನೇ ರೋಗಿ, ಚಪ್ಪಲಿ, ಟವೆಲ್, ಟೂತ್‌ಪೇಸ್ಟ್ ಮತ್ತು ಟಾಯ್ಲೆಟ್ ಪೇಪರ್ ಸೇರಿ ವೈದ್ಯಕೀಯ ಕೇಂದ್ರವು ಅವನಿಗೆ ನೀಡಿದ ಜೀವನ ಅವಶ್ಯಕತೆಗಳನ್ನು ತೋರಿಸುತ್ತಾನೆ. ಮೂರನೆಯ ರೋಗಿ ಆಸ್ಪತ್ರೆಯ ಊಟವನ್ನು ಪರಿಚಯಿಸುತ್ತ ಇಂದಿನ ಊಟದಲ್ಲಿ ಮೃದುವಾದ ಆಮೆ ​​ಮಾಂಸವಿದೆ ಎನ್ನುತ್ತಾನೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + nine =
Remember me
