ನವದೆಹಲಿ:ಕರೋನಾ ವೈರಾಣುವಿನ ಉಗಮ ಸ್ಥಾನ ವುಹಾನ್​ ಎಂಬುದು ಇಡೀ ಜಗತ್ತಿಗೆ ತಿಳಿದಿರುವ ವಿಷಯ. ಇದನ್ನು ಚೀನಾ ನಿರಾಕರಿಸುತ್ತಿದೆಯಾದರೂ, ಈ ಕುರಿತು ಸಾಕ್ಷ್ಯ ಸಂಗ್ರಹಕ್ಕೆ ಅಮೆರಿಕ ಮುಂದಾಗಿದೆ.
ವುಹಾನ್​ನ ವೈರಾಣು ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಚೀನಾದ ವೈರಾಣು ತಜ್ಞರೇ ಈಗ ಅಲ್ಲಿಂದ ತಪ್ಪಿಸಿಕೊಂಡು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಹೀಗೆ ಅಮೆರಿಕ ತಲುಪಿರುವ ಕೆಲವು ತಜ್ಞರು ಜಾಗತಿಕವಾಗಿ ಕೋವಿಡ್​-19 ಪಿಡುಗನ್ನು ಹರಡುವಲ್ಲಿ ಚೀನಾದ ಪಾತ್ರ ಕುರಿತು ಇಂಚಿಂಚು ಮಾಹಿತಿಯನ್ನು ಅಮೆರಿಕದ ಬೇಹುಗಾರಿಕಾ ಸಂಸ್ಥೆಗಳಿಗೆ ಒದಗಿಸುತ್ತಿದ್ದಾರೆ.
ಈ ವಿಷಯವನ್ನು ತಿಳಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಮಾಜಿ ಮುಖ್ಯ ತಂತ್ರಗಾರಿಕಾ ಅಧಿಕಾರಿ ಸ್ಟೀವ್​ ಬನ್ನಾನ್​, ವುಹಾನ್​ ಎಂಬುದು ವಿಶ್ವದ ವೈರಾಣುಗಳ ಚೆರ್ನೋಬಿಲ್​ ಎಂದು ವರ್ಣಿಸಿದ್ದಾರೆ.
ಇದನ್ನೂ ಓದಿ:ಆಕ್ಸ್​ಫರ್ಡ್​ ವಿವಿ ತಜ್ಞರ ಕರೊನಾ ಲಸಿಕೆ ಅಭಿವೃದ್ಧಿಗೆ ಜೀವವನ್ನೇ ಪಣಕ್ಕಿಟ್ಟ ಭಾರತೀಯ…!
ಡೊನಾಲ್ಡ್​ ಟ್ರಂಪ್​ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾಗ ಚುನಾವಣಾ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದ ಬನ್ನಾನ್, ವೈರಾಣುವಿನ ಚೆರ್ನೋಬಿಲ್​ ಎನಿಸಿಕೊಂಡಿರುವ ವುಹಾನ್​ ಇನ್​ಸ್ಟಿಟ್ಯೂಟ್​ ಆಫ್​ ವೈರಾಲಜಿಯ ತಜ್ಞರು ವುಹಾನ್​ ಮತ್ತು ಹಾಂಕಾಂಗ್​ನಿಂದ ಫೆಬ್ರವರಿ ಮಧ್ಯಭಾಗದಿಂದ ತಪ್ಪಿಸಿಕೊಂಡು ಅಮೆರಿಕಕ್ಕೆ ಬರಲಾರಂಭಿಸಿದ್ದಾರೆ. ಅವರೆಲ್ಲರಿಂದಲೂ ಮಾಹಿತಿ ಸಂಗ್ರಹಿಸುವ ಮೂಲಕ ಚೀನಾದ ವಿರುದ್ಧ ಅಮೆರಿಕದ ಬೇಹುಗಾರಿಕಾ ಪಡೆ ಅಲ್ಲದೆ, ಎಂ15 ಮತ್ತು ಎಂ16 ಕೂಡ ಸಾಕ್ಷ್ಯ ಸಂಗ್ರಹಕ್ಕೆ ಮುಂದಾಗಿವೆ. ಅದನ್ನು ಆಧರಿಸಿ ಚೀನಾ ವಿರುದ್ಧ ಕಾನೂನು ಹೋರಾಟ ಸಾರಲಾಗುವುದು ಎಂದು ಹೇಳಿದ್ದಾರೆ.
ಹಾಂಕಾಂಗ್​ ಮೂಲದ ವೈರಾಣು ತಜ್ಞೆ ಲಿ ಮೆಂಗ್​ ಯಾನ್​ ಎಂಬುವರು ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕೋವಿಡ್​-19 ಪಿಡುಗು ಜಾಗತಿಕವಾಗಿ ವ್ಯಾಪಿಸುವ ಮೊದಲೇ ಚೀನಾಕ್ಕೆ ಆ ಮಾರಕ ವೈರಾಣುವಿನ ಬಗ್ಗೆ ಗೊತ್ತಿತ್ತು. ಈ ಸಂಗತಿಯನ್ನು ಮುಚ್ಚಿಹಾಕಲು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಹರಸಾಹಸ ಪಟ್ಟರು ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಬನ್ನಾನ್​ ಅವರ ಈ ಹೇಳಿಕೆ ಬಂದಿರುವುದು ವಿಶೇಷವಾಗಿದೆ.
ನೇಪಾಳ ರಾಜಕೀಯದಲ್ಲಿ ಭಾರತೀಯ ಸಂಜಾತರ ಪ್ರಾತಿನಿಧ್ಯಕ್ಕೆ ಮತ್ತಷ್ಟು ಬಲ; ಹೊಸ ಪಕ್ಷಕ್ಕೆ ಮಾನ್ಯತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 17 =
Remember me
