ಬೀಜಿಂಗ್:ಕರೊನಾ ವೈರಸ್ ಕೇಂದ್ರ ಬಿಂದು ಚೀನಾದ ವುಹಾನ್ ಈಗ ಕರೊನಾದಿಂದ ಮುಕ್ತವಾಗಿದೆ. ನ್ಯೂಕ್ಲಿಯಿಕ್ ಆಮ್ಲ ಪರೀಕ್ಷೆಯಲ್ಲಿ ಕರೊನಾ ಇಲ್ಲವೆಂದು ದೃಢಪಟ್ಟ ನಂತರ ಕೊನೆಯ ಮೂರು ಲಕ್ಷಣರಹಿತ ರೋಗಿಗಳನ್ನು ವೈದ್ಯಕೀಯ ನಿಗಾದಿಂದ ಬಿಡುಗಡೆ ಮಾಡಿದೆ.ಸೋಮವಾರದ ವೇಳೆಗೆ ನಗರದಲ್ಲಿ ಯಾವುದೇ ಲಕ್ಷಣರಹಿತ ಪ್ರಕರಣಗಳಿಲ್ಲ ಮತ್ತು ವೈದ್ಯಕೀಯ ನಿಗಾದಲ್ಲಿ ಹೆಚ್ಚಿನ ನಿಕಟ ಸಂಪರ್ಕಗಳು ಕಂಡುಬಂದಿಲ್ಲ ಎಂದು ವುಹಾನ್ ಆರೋಗ್ಯ ಆಯೋಗ ಮಂಗಳವಾರ ತಿಳಿಸಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಇದನ್ನೂ ಓದಿ:ಕೊವಿಡ್​-19ಗೆ ಯಾರೂ ಭಯಪಡಬೇಡಿ…ಭಾರತ ಸಮರ್ಥವಾಗಿ ಹೋರಾಡುತ್ತಿದೆ: ಪ್ರಧಾನಿ ಮೋದಿ
ಮೂವರು ಲಕ್ಷಣರಹಿತ ವ್ಯಕ್ತಿಗಳನ್ನು ಸತತ ಎರಡು ನ್ಯೂಕ್ಲಿಯಿಕ್ ಆಮ್ಲ ಪರೀಕ್ಷೆಗೊಳಪಡಿಸಿದಾಗ ಕರೊನಾ ಇಲ್ಲವೆಂದು ದೃಢಪಟ್ಟಿತು. ಆನಂತರ ಅವರನ್ನು ವೈದ್ಯಕೀಯ ನಿಗಾದಿಂದ ಬಿಡುಗಡೆ ಮಾಡಲಾಯಿತು ಎಂದು ಆಯೋಗವು ತಿಳಿಸಿದೆ.ವುಹಾನ್ ನಗರದಾದ್ಯಂತ ಮೇ 14 ಮತ್ತು ಜೂನ್ 1 ರ ನಡುವೆ ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷೆ ಪ್ರಕ್ರಿಯೆಯನ್ನು ಆರಂಭಿಸಲಾಗಿತ್ತು, ಈ ವೇಳೆ 300 ಲಕ್ಷಣರಹಿತ ಸೋಂಕುಗಳು ಮತ್ತು 1,174 ನಿಕಟ ಸಂಪರ್ಕಗಳನ್ನು ಪತ್ತೆಹಚ್ಚಿ ಕ್ವಾರಂಟೈನ್​​ನಲ್ಲಿಡಲಾಗಿತ್ತು.ಸೋಮವಾರದ ಹೊತ್ತಿಗೆ, ನಗರದಲ್ಲಿ ಯಾವುದೇ ದೃಢಪಟ್ಟ ಅಥವಾ ಶಂಕಿತ ಕೋವಿಡ್-19 ಪ್ರಕರಣಗಳು ಇರಲಿಲ್ಲ. ಮಂಗಳವಾರದ ವೇಳೆಗೆ, ಚೀನಾದಲ್ಲಿ ಒಟ್ಟು 83,221 ಪ್ರಕರಣಗಳು ವರದಿಯಾಗಿದ್ದು, 4,634 ಜನ ಮೃತಪಟ್ಟಿದ್ದಾರೆ.
ಕೋವಿಡ್ ವಿರುದ್ಧದ ಹೋರಾಟದಲ್ಲಿ ವೈದ್ಯಕೀಯ ಪದವೀಧರ ನಾಗರಿಕ ಸೇವಾ ಅಧಿಕಾರಿಗಳ ನಿಯೋಜನೆಗೆ ಮುಂದಾದ ಕೇಂದ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + six =
Remember me
