ಢಾಕಾ:ಕ್ರಿಕೆಟ್​ ಒಂದು ಜೆಂಟಲ್​ಮೆನ್​ ಗೇಮ್​, ಆದರೆ ಯಾವಾಗಲೂ ಅಲ್ಲ! ಕೆಲವೊಮ್ಮೆ ಕ್ರೀಡಾಸ್ಫೂರ್ತಿಗೆ ಸಾಕ್ಷಿಯಾಗುವ ಕ್ರೀಡಾಭಿಮಾನಿಗಳು ಇನ್ನು ಕೆಲವೊಮ್ಮೆ ಕ್ರೀಡಾಂಗಣದಲ್ಲಿ ನಡೆಯುವ ನಿರಾಶಾದಾಯಕ ಘಟನೆಗಳನ್ನೂ ನೋಡುತ್ತಾರೆ. ಇದೀಗ ಬಾಂಗ್ಲಾದೇಶದ ಸೆಲೆಬ್ರಿಟಿ ಕ್ರಿಕೆಟ್​ ಲೀಗ್​ನಲ್ಲೂ ಇದೇ ರೀತಿಯ ಪ್ರಸಂಗ ಜರುಗಿದೆ.
ನಿರ್ದೇಶಕರಾದ ಮೊಸ್ತಫಾ ಕಮಲ್​ ರಾಜ್​ ಮತ್ತು ದಿಪಾಂಕರ್​ ದಿಪೊನ್​ ಎರಡೂ ತಂಡಗಳ ಕ್ರಿಕೆಟ್​ ಸ್ಪರ್ಧೆಯು ಕೆಲ ಕಾಲ ವರ್ಲ್ಡ್​ ರೆಸ್ಟಲಿಂಗ್​ ಎಂಟರ್ಟೈನ್ಮೆಂಟ್​ (ಡಬ್ಲ್ಯುಡಬ್ಲ್ಯುಇ) ಪಂದ್ಯವಾಗಿ ಬದಲಾಯಿತು.
ಇದನ್ನೂ ಓದಿ:ವಿಷಯಾಧಾರಿತ ಬೋಧನೆ ರೂಢಿಸಿಕೊಳ್ಳಿ  -ಎಡಿಸಿ ಲೋಕೇಶ್ – ಸಮಾಜಶಾಸ್ತ್ರ ಉಪನ್ಯಾಸಕರ ಪುನಶ್ಚೇತನ ಕಾರ್ಯಾಗಾರ
ಅಂಪೈರ್​ ತಪ್ಪು ನಿರ್ಣಯದಿಂದಾಗಿ ಕ್ರೀಡಾಂಗಣದಲ್ಲೇ ಎರಡೂ ತಂಡಗಳ ನಡುವೆ ಜಗಳ ನಡೆಯಿತು. ಈ ವೇಳೆ 6 ಆಟಗಾರರು ಗಾಯಗೊಂಡಿದ್ದಾರೆ. ಅಲ್ಲದೆ, ಈ ಒಂದು ಘಟನೆಯಿಂದ ಸಮಿಫೈನಲ್​ಗೂ ಮುಂಚೆಯೇ ಇಡೀ ಟೂರ್ನಮೆಂಟ್​ ರದ್ದಾಯಿತು.
Celebrity Cricket League has turned into WWE Royal Rumble. 😂
– 6 people got injured– Tournament got cancelled before semis
30+ year old male & female adults fighting over boundary & out decision in a ‘friendly’ tournament. 🤣pic.twitter.com/FOAxEI00rz
— Saif Ahmed 🇧🇩 (@saifahmed75)September 30, 2023

ಬೌಂಡರಿ ಮತ್ತು ಔಟ್ ಕುರಿತಾದ ಅಂಪೈರ್​ ತೀರ್ಮಾನದಿಂದ ಅಸಮಧಾನಗೊಂಡು ಕಿತ್ತಾಡಿಕೊಂಡರು. ಸ್ನೇಹಮಯವಾಗಿದ್ದ ಕ್ರೀಡಾಕೂಟ ಒಂದು ಸಣ್ಣ ಎಡವಟ್ಟಿನಿಂದ ರಣಾಂಗಣವಾಗಿ ಕೊನೆಗೆ ಪಂದ್ಯವೇ ರದ್ದಾಯಿತು.
ಇದನ್ನೂ ಓದಿ:ಫೈನಲ್‌ಗೇರಿ ಹೊಸ ಇತಿಹಾಸ ಬರೆದ ಬ್ಯಾಡ್ಮಿಂಟನ್ ತಂಡ: ಸೆಮಿಫೈನಲ್‌ನಲ್ಲಿ ಕೊರಿಯಾ ಎದುರು ರೋಚಕ ಗೆಲುವು
ಈ ತಿಂಗಳ ಆರಂಭದಲ್ಲಿ ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿರುವ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ನಡೆದ ಏಷ್ಯಾಕಪ್​ ಟೂರ್ನಿಯ ಸೂಪರ್​ 4 ಪಂದ್ಯದ ನಂತರ ಉಭಯ ದೇಶಗಳ ಕ್ರೀಡಾಭಿಮಾನಿಗಳು ಪರಸ್ಪರ ಕಿತ್ತಾಡಿಕೊಂಡಿದ್ದರು. ಭಾರತ, ಲಂಕಾ ವಿರುದ್ಧ 41 ರನ್​ಗಳ ಅಂತರದಲ್ಲಿ ಪಂದ್ಯ ಗೆದ್ದಿದ್ದರಿಂದ ಹತಾಶೆಗೊಂಡ ಲಂಕಾ ಕ್ರೀಡಾಭಿಮಾನಿಗಳು ಭಾರತ ಕ್ರೀಡಾಭಿಮಾನಿಗಳ ಮೇಲೆ ದಾಳಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತದ ಕ್ರೀಡಾಭಿಮಾನಿಗಳು ಸಹ ಪ್ರತಿದಾಳಿ ಮಾಡಿದ್ದರು.(ಏಜೆನ್ಸೀಸ್​)
ಯುವಕರ ಸಂಖ್ಯೆ ಕುಸಿತ, ಭಾರತಕ್ಕೆ ಆವರಿಸುತ್ತಿದೆ ವೃದ್ಧಾಪ್ಯ!; 2036ರಲ್ಲಿನ ಚಿತ್ರಣ ಬಿಚ್ಚಿಟ್ಟ ವರದಿ; ಶೇ.51 ಯುವತಿಯರು ನಿರುದ್ಯೋಗಿಗಳು

ಸೆx ತಿರಸ್ಕಾರ ತಂದ ಜೈಲುವಾಸ; ಆ ಕ್ಷಣ ಅಂಕಣ..

ಭಾರತ-ಆಂಗ್ಲರ ಅಭ್ಯಾಸ ಪಂದ್ಯಕ್ಕೆ ಮಳೆ ಅಡ್ಡಿ; ಕೊನೇ ವಿಶ್ವಕಪ್ ಎಂದ ಅನುಭವಿ ಸ್ಪಿನ್ನರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
