ತ್ರಿಪುರಾ:ಫುಟ್ಬಾಲ್​ ಒಂದು ಸುಂದರವಾದ ಆಟವಾಗಿದ್ದು, ಈ ಕ್ರೀಡಾ ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯವಾಗಿದೆ. ಕೆಲವೊಮ್ಮೆ ಆಟವಾಡುವ ವೇಳೆ ಆಟಗಾರರ ನಡುವಿನ ವಾಗ್ವಾದ, ಅಂಪೈರ್​ಗಳ ಕೆಟ್ಟ ನಿರ್ಧಾರದಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮೈದಾನದಲ್ಲೇ ಹೊಡೆದಾಟವಾಗುವ ಸಂಭವವಿರುತ್ತದೆ.
ಇದೀಗ ಘಟನೆಯೊಂದರಲ್ಲಿ ರೆಫ್ರಿ ಹಾಗು ಆಟಗಾರರ ನಡುವೆ ಪಂದ್ಯದ ವೇಳೆ ಗಲಾಟೆಯಾಗಿರುವ ಘಟನೆ ತ್ರಿಪುರಾದ ಸ್ಟೇಟ್​ ಲೀಗ್​ನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪರ-ವಿರೋಧ ವ್ಯಕ್ತವಾಗುತ್ತಿದೆ.
Tripura State League.A fight broke out between the Referee and the players on the field.#IndianFootballpic.twitter.com/6F2de78tCM
ವೈರಲ್​ ಆಗಿರುವ ವಿಡಿಯೋದಲ್ಲಿ ರೆಫ್ರಿ ಒಬ್ಬರು ನೀಡಿದ ತೀರ್ಪಿಗೆ ಆಟಗಾರರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಈ ವೇಳೆ ಆಟಗಾರರು ಏಕಾಏಕಿ ರೆಫ್ರಿ ಮೇಲೆ ದಾಳಿ ಮಾಡಿದ್ದು, ಮೈದಾನದಲ್ಲಿದ್ದವರು ಜಗಳ ಬಿಡಿಸಿದ್ದಾರೆ. ಈ ವೇಳೆ ರೆಫ್ರಿ ಆಟಗಾರರ ಮೇಲೆ ತಿರುಗಿಸಿ ಹಲ್ಲೆ ಮಾಡಿದ್ದು, ವಾಗ್ವಾದ ನಡೆದಿದೆ. ಈ ಕುರಿತು ರೆಫ್ರಿ ಹಾಗೂ ಆಟಗಾರರ ಮೇಲೆ ಫುಟ್​ಬಾಲ್​ ಅಸೋಸಿಯೇಷನ್​​ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ.
ವಿಡಿಯೋ ವೈರಲ್​ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದ್ದು, ಕೆಲವರು ಅಂಪೈರ್​ ತೀರ್ಪನ್ನು ಗೌರವಿಸಬೇಕು ಯಾರು ಸಹ ಸುಮ್ಮನೆ ಇನ್ನೊಬ್ಬರ ತಪ್ಪನ್ನು ಎತ್ತಿ ತೋರಿಸುವುದಿಲ್ಲ ಎಂದು ಹೇಳಿದ್ದಾರೆ. ಕೆಲವರು ರೆಫ್ರಿ ನಡೆದುಕೊಂಡ ರೀತಿಯನ್ನು ಖಂಡಿಸಿದ್ದು, ಅವರು ಗೂಂಡಾ ರೀತಿ ವರ್ತಿಸಿರುವುದು ಖಂಡನೀಯ ಎಂದು ಕಿಡಿಕಾರಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 5 =
Remember me
