ನವದೆಹಲಿ:ಭಾರತವನ್ನು ಎಲ್ಲ ರೀತಿಯಲ್ಲೂ ಟೀಕಿಸುತ್ತಲೇ ವಿದೇಶಗಳನ್ನು ಹೊಗಳುವ ರಾಜಕಾರಣಿಗಳಿಗೆ ನಮ್ಮಲ್ಲೇನೂ ಕಡಿಮೆಯಿಲ್ಲ. ಆದರೆ, ಸೋಷಿಯಲ್ ಮೀಡಿಯಾ ಬಂದ ಮೇಲೆ ಕೆಟ್ಟದ್ದನ್ನು ಪ್ರಚೋದಿಸುತ್ತ, ಭಾರತೀಯತೆ ಮತ್ತು ಭಾರತೀಯರನ್ನು ಟೀಕಿಸುವುದು ಸಾಮಾನ್ಯವಾಗಿದೆ. ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದ ವ್ಯಕ್ತಿಗೆ ಮುಖಭಂಗವಾಗಿದೆ. ಆತನ ಕಾಮೆಂಟ್ ಮತ್ತು ಅದಕ್ಕೆ ಜನರ ಪ್ರತಿಕ್ರಿಯೆ ಈಗ ಟಾಕ್ ಆಫ್ ದಿ ಟೌನ್ ( ವೈರಲ್ ) ಆಗಿ ಮಾರ್ಪಟ್ಟಿದೆ.
ಇದನ್ನೂ ಓದಿ:ಭಾರತೀಯ ಷೇರು ಮಾರುಕಟ್ಟೆಯಿಂದ ರೂ. 28,242 ಕೋಟಿ ಹೂಡಿಕೆ ಹಿಂಪಡೆದ ವಿದೇಶಿ ಹೂಡಿಕೆದಾರರು
ಇತ್ತೀಚೆಗೆ, ವ್ಯಕ್ತಿಯೊಬ್ಬ ಚೀನಾದ ಶೆನ್‌ಜೆನ್‌ನಲ್ಲಿ ಸ್ಥಳೀಯರು ನೃತ್ಯ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾನೆ. ಅದಾದ ಬಳಿಕ ಭಾರತವನ್ನು ಟೀಕಿಸುವ ಮೂಲಕ ತನ್ನ ಮತಿಗೇಡಿತನವನ್ನು ಬಹಿರಂಗಪಡಿಸಿದ್ದಾನೆ. ಭಾರತೀಯನಾಗಿ, ಅಂತಹ ದೃಶ್ಯವನ್ನು ನೋಡಿದಾಗ ನನಗೆ ಸ್ವಲ್ಪ ವಿಚಿತ್ರ ಅನಿಸುತ್ತದೆ. ನಮ್ಮ ದೇಶದಲ್ಲಿ ಮಹಿಳೆಯರು ಇಂತಹ ಮೋಜಿನ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ. ಭಾರತೀಯ ಮಹಿಳೆಯರು ಸಾರ್ವಜನಿಕ ನೃತ್ಯಗಳಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾನೆ. ತನ್ನ ಎಕ್ಸ್ ಖಅತೆಯಲ್ಲಿ ಇದನ್ನು ಪೋಸ್ಟ್​ ಮಾದಡಿದ್ದಾನೆ.
ಈ ಪೋಸ್ಟ್ ನೋಡಿದ ಎಕ್ಸ್​ ಬಳಕೆದಾರರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಆತನನ್ನು ಟೀಕಿಸಿದ್ದಾರೆ. ಪ್ರತಿ ಭಾರತೀಯ ಹಬ್ಬದ ಸಂದರ್ಭದಲ್ಲಿ ಇಂತಹ ನೃತ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ. ನೀವು ಎಲ್ಲದಕ್ಕೂ ಭಾರತವನ್ನು ಟೀಕಿಸುವ ಅಭ್ಯಾಸವನ್ನು ಹೊಂದಿದ್ದೀರಿ ಎಂದು ವ್ಯಕ್ತಿಯೊಬ್ಬರುಪ್ರತಿಕ್ರಿಯಿಸಿದ್ದಾರೆ.
ಮತ್ತೊಬ್ಬ ಬಳಕೆದಾರ, ಗರ್ಬಾ ನೃತ್ಯದ ಬಗ್ಗೆ ನಿಮಗೆ ತಿಳಿದಿಲ್ಲವೇ? ಇಂತಹ ಅನೇಕ ಸಾಂಪ್ರದಾಯಿಕ ನೃತ್ಯಗಳನ್ನು ಅನೇಕ ಬುಡಕಟ್ಟು ಉತ್ಸವಗಳಲ್ಲಿ ಪ್ರದರ್ಶಿಸಲಾಗುತ್ತದೆ. ಈ ಸಂಪ್ರದಾಯಗಳು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿವೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ. ಆದರೆ ನಮ್ಮ ದೇಶದಲ್ಲಿ ಇಂತಹ ನೃತ್ಯಗಳು ಇಲ್ಲ ಎಂಬುದು ಸರಿಯಲ್ಲ ಎಂದು ಇನ್ನೊಬ್ಬ ವ್ಯಕ್ತಿ ಹೇಳಿದ್ದಾರೆ.
ನೀವು ಭಾರತೀಯರೆಂದು ಹೇಳಿಕೊಳ್ಳುತ್ತೀರಿ, ನಮ್ಮ ದೇಶದಲ್ಲಿ ಈ ರೀತಿಯ ಒಂದೇ ಒಂದು ನೃತ್ಯವನ್ನು ನೀವು ನೋಡಿಲ್ಲವೇ?” ಈ ವಿಡಿಯೋ ಸದ್ಯ ವಿವಿಧ ಕಾಮೆಂಟ್‌ಗಳ ನಡುವೆ ವೈರಲ್ ಆಗುತ್ತಿದೆ.
‘ನಮ್ಮನ್ನು ಬೀದಿಯಲ್ಲಿ ನಿಲ್ಲಿಸುವ ಯೋಚನೆ ಬಿಜೆಪಿಗಿದೆ’: ಕೇಜ್ರಿವಾಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + four =
Remember me
