ದೆಹಲಿ:ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಪ್ರಸಿದ್ಧ ಶವೊಮಿ ಕಂಪನಿಯು ಗುರುವಾರದಂದು ಶವೊಮಿ ಸಿವಿ-3 ಸ್ಮಾರ್ಟ್​ಪೋನ್​ನ್ನು ಬಿಡುಗಡೆ ಮಾಡಿದೆ. ಕಳೆದ ಸೆಪ್ಟೆಂಬರ್​ನಲ್ಲಿ ಈ ಕಂಪನಿಯು ಶವೊಮಿ ಸಿವಿ-2ನ್ನು ಬಿಡುಗಡೆ ಮಾಡಿ, ಮಾರುಕಟ್ಟೆಯಲ್ಲಿ ಯಶಸ್ವಿಗೊಂಡಿತ್ತು. ಇದರ ಬೆನ್ನಲ್ಲೇ ಕಂಪನಿಯು ಶವೊಮಿ ಸಿವಿ-3ನ್ನು ಬಿಡುಗಡೆಗೊಳಿಸಿದೆ.
ಚೀನಾದ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ಸಿವಿ-3 ಸ್ಮಾರ್ಟ್​ಫೋನ್​ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಗಮನಾರ್ಹವಾದ ಡ್ಯುಯಲ್ ಫ್ರಂಟ್ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿರುವ ಈ ಪೋನ್​ ಹಿಂಬದಿಯಲ್ಲಿ ಮೂರು ಕ್ಯಾಮರಾವನ್ನು ಹೊಂದಿದೆ.
ಇದನ್ನೂ ಓದಿ:ಕರೆಂಟ್ ಬಿಲ್ ಕಟ್ಟಿ ಸಿದ್ದರಾಮಯ್ಯ, ಡಿಕೆಶಿಗೆ ಅವಮಾನಿಸಬೇಡಿ: ಆರ್.ಅಶೋಕ್
ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8200 SoCನಿಂದ ಬೆಂಬಲಿತವಾಗಿರುವ ಈ ಫೋನ್​ 67W ಫಾಸ್ಟ್ ಚಾರ್ಜಿಂಗ್ ಜತೆಗೆ ಟೈಪ್-ಸಿ ಪೋರ್ಟ್‌ನ್ನು ಹೊಂದಿದೆ. ದೀರ್ಘಕಾಲ ಬಾಳಿಕೆ ಬರುವ 4,500mAh ಬ್ಯಾಟರಿ ಹೊಂದಿದ್ದು, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ.
ಈ ಫೋನ್​ ಮೂರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದ್ದು, 12GB + 256GBಯ ಫೋನ್​ ಬೆಲೆ 29,300 ರೂಪಾಯಿ, 12GB + 512GBಯ ಬೆಲೆ 31,600 ರೂಪಾಯಿ ಹಾಗೂ 16GB + 1TBಯ ಬೆಲೆಯು 35,200 ಇರಬಹುದೆಂದು ಅಂದಾಜಿಸಲಾಗಿದೆ. ಅಲ್ಲದೇ, ಈ ಫೋನ್​ ಅಡ್ವೆಂಚರ್ ಗೋಲ್ಡ್, ಕೊಕೊನಟ್ ಗ್ರೇ, ಮಿಂಟ್ ಗ್ರೀನ್ ಮತ್ತು ರೋಸ್ ಪರ್ಪಲ್ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
