ನವದೆಹಲಿ:ಲಡಾಖ್​ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚೀನಾದ ನೇರ ಹೂಡಿಕೆಯನ್ನು ನಿರ್ಬಂಧಿಸಿರುವ ಕೇಂದ್ರ ಸರ್ಕಾರ ಇದೀಗ ಚೀನಾದೊಂದಿಗೆ ನೇರ ಸಂಪರ್ಕ ಇರುವ ಕಂಪನಿಗಳನ್ನು ಗುರುತಿಸಲು ಆರಂಭಿಸಿದೆ. ಅದರಂತೆ ಚೀನಾ ಪೀಪಲ್ಸ್​ ಲಿಬರೇಷನ್​ ಆರ್ಮಿಯ (ಪಿಎಲ್​ಎ) ನೇರ ಸಂಪರ್ಕ ಹೊಂದಿರುವ ಕಬ್ಬಿಣದ ಅದಿರು ಕಂಪನಿಯೊಂದು ಹೊಸಪೇಟೆಯ ಬಳಿಯ ಕೊಪ್ಪಳ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ.
ಭಾರತ ಮತ್ತು ಚೀನಾ ನಡುವಿನ ಅತಿದೊಡ್ಡ ಜಂಟಿ ಯೋಜನೆ ಎನಿಸಿಕೊಂಡಿರುವ ಈ ಯೋಜನೆಯು ಅಂದಾಜು 250 ಕೋಟಿ ರೂ. ಹೂಡಿಕೆಯೊಂದಿಗೆ ಕೊಪ್ಪಳದಲ್ಲಿ ಕಾರ್ಯಾರಂಭಿಸಿದೆ. ಇದಕ್ಕೆ ಕ್ಸಿಂಡಿಯಾ ಸ್ಟೀಲ್ಸ್​ ಎಂಬ ಹೆಸರಿನಲ್ಲಿ ಈ ಕಂಪನಿಯನ್ನು ನಡೆಸಲಾಗುತ್ತಿದೆ. 0.8 ಮೆಟ್ರಿಕ್​ ಟನ್​ ಪರ್​ ಆ್ಯನಂ (ಎಂಟಿಪಿಎ) ಸಾಮರ್ಥ್ಯದ ಕಬ್ಬಿಣದ ಅದಿರನ್ನು ಉಂಡೆಗಳ ರೂಪಕ್ಕೆ ತಂದು ಅದನ್ನು ಚೀನಾಕ್ಕೆ ರಫ್ತು ಮಾಡುವುದು ಈ ಕಂಪನಿಯ ಮುಖ್ಯ ಕಾರ್ಯವಾಗಿದೆ.ಕೆಲವೇ ತಿಂಗಳ ಹಿಂದೆ ಕಾರ್ಯಾರಂಭಿಸಿರುವ ಈ ಕಂಪನಿಗೆ ಕ್ಸಿನ್​ಕ್ಸಿಂಗ್​ ಕ್ಯಾಥೆ ಇಂಟರ್​ನ್ಯಾಷನಲ್​ ಗ್ರೂಪ್​ ಕಂಪನಿ ಲಿಮಿಟೆಡ್​ (ಚೀನಾ) ಪ್ರಮುಖ ಹೂಡಿಕೆದಾರ ಕಂಪನಿಯಾಗಿದೆ. ಪೀಪಲ್ಸ್​ ಲಿಬರೇಷನ್​ ಆರ್ಮಿಯ ಜನರಲ್​ ಲಾಜಿಸ್ಟಿಕ್ಸ್​ ಡಿಪಾರ್ಟ್​ಮೆಂಟ್​ನ ಉತ್ಪಾದನಾ ವಿಭಾಗ ಮತ್ತು ಅದಕ್ಕೆ ಸಂಬಂಧಿತ ಉದ್ಯಮ ಮತ್ತು ಸಂಸ್ಥೆಗಳನ್ನು ಮರುಸಂಘಟಿಸಿ ಈ ಕಂಪನಿಯನ್ನು ಆರಂಭಿಸಲಾಗಿದೆ.
ಕ್ಸಿನ್​ಕ್ಸಿಂಗ್​ ಕ್ಯಾಥೆ ಇಂಟರ್​ನ್ಯಾಷನಲ್​ ಗ್ರೂಪ್​:ಈ ಸಂಸ್ಥೆಯು ಛತ್ತೀಸ್​ಗಢದಲ್ಲಿ ಅಂದಾಜು 1 ಸಾವಿರ ಕೋಟಿ ರೂ. ಹೂಡಿಕೆಯೊಂದಿಗೆ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಉದ್ದೇಶಿಸಿದೆ. ರಾಜ್ಯದಲ್ಲಿ ಲಭ್ಯ ಇರುವ ಕಬ್ಬಿಣದ ಅದಿರಿನ ಪ್ರಮಾಣವನ್ನು ಆಧರಿಸಿ ಈ ಘಟಕವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅದಿರು ನಿಕ್ಷೇಪವನ್ನು ಅಂದಾಜಿಸುವ ಸಲುವಾಗಿ ತಜ್ಞರ ನಿಯೋಗವೊಂದು ಚೀನಾದಿಂದ ಛತ್ತೀಸ್​ಗಢಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.ಈ ಘಟಕದಲ್ಲಿ ವಾರ್ಷಿಕ 3 ಸಾವಿರ ಕೋಟಿ ರೂ. ವಹಿವಾಟು ನಡೆಸುವ ಅಂದಾಜಿದೆ. ಈ ಘಟಕ ಸ್ಥಾಪನೆಗಾಗಿ ಚೀನಾ ಈಗಾಗಲೆ 30 ಸಾವಿರ ಟನ್​ ಡಕ್ಟೈಲ್​ ಐರನ್​ ಪೈಪ್​ಗಳನ್ನು ಭಾರತಕ್ಕೆ ರವಾನಿಸಿದೆ.
ಇದನ್ನೂ ಓದಿ:ಭಾರತದ ಮೇಲೆ ಭಾರಿ ಭರವಸೆ; ಕೋವಿಡ್​ ಸಂಕಷ್ಟದಲ್ಲೂ ಹರಿದು ಬಂತು 1.5 ಲಕ್ಷ ಕೋಟಿ ರೂ. ಹೂಡಿಕೆ
ಚೈನಾ ಎಲೆಕ್ಟ್ರಾನಿಕ್ಸ್​ ಟೆಕ್ನಾಲಜಿ ಗ್ರೂಪ್​ ಕಾರ್ಪೋರೇಷನ್​ (ಸಿಇಟಿಸಿ): ಸಿಇಟಿಸಿ ಕಂಪನಿಯು ಆಂಧ್ರಪ್ರದೇಶದ ಶ್ರೀ ನಗರದಲ್ಲಿ 200 ಮೆಗಾ ವಾಟ್​ ಸಾಮರ್ಥ್ಯದ ವಿದ್ಯುತ್​ ಉತ್ಪಾದನಾ ಘಟಕ ಆರಂಭಿಸಲು 320 ಕೋಟಿ ರೂ. ಹೂಡಿಕೆ ಮಾಡಿದೆ. ಸಿಇಟಿಸಿಯು ಚೀನಾದ ಮಿಲಿಟರಿ ಎಲೆಕ್ಟ್ರಾನಿಕ್ಸ್​ ಉತ್ಪಾದನಾ ಸಂಸ್ಥೆಯಾಗಿದ್ದು, ಹಿಕ್​ವಿಷನ್​ ಎಂಬ ಸಿಸಿ ಕ್ಯಾಮರಾಗಳನ್ನೂ ಉತ್ಪಾದಿಸುತ್ತದೆ. ಸಿಇಟಿಸಿಯ ಸಂಶೋಧನಾ ಸಂಸ್ಥೆಗಳು ಮತ್ತು ಉಪಸಂಸ್ಥೆಗಳನ್ನು ಅಮೆರಿಕ ಸರ್ಕಾರ ರಾಷ್ಟ್ರೀಯ ಭದ್ರತಾ ಹಿತದೃಷ್ಟಿಯಿಂದ ರಫ್ತು ನಿರ್ಬಂಧಿತ ಪಟ್ಟಿಗೆ ಸೇರ್ಪಡೆಗೊಳಿಸಿದೆ.
ಈ ಸಂಸ್ಥೆಯು 3 ಅಕ್ರಮ ರಫ್ತು ಪ್ರಕರಣಗಳಲ್ಲಿ ಅಮೆರಿಕದ ನ್ಯಾಯಾಂಗ ಇಲಾಖೆಯಿಂದ ಶಿಕ್ಷೆಗೆ ಗುರಿಯಾಗಿದೆ. ಮಿಲಿಟರಿ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಸಿಇಟಿಸಿಯ ಹಲವು ಸಿಬ್ಬಂದಿ ಶಿಕ್ಷೆಗೆ ಗುರಿಯಾಗಿದ್ದಾರೆ.
ಹುವಾಯ್:ಪೀಪಲ್ಸ್​ ಲಿಬರೇಷನ್​ ಆರ್ಮಿಯ ಇಂಜಿನಿಯರಿಂಗ್​ ಕೋರ್​ನ ಮಾಜಿ ಉಪನಿರ್ದೇಶಕ ರೆನ್​ ಝೆಂಗ್​ಫೈ ನೇತೃತ್ವದ ಹುವಾಯ್​ ಕಂಪನಿ 1987ರಲ್ಲಿ ಶೆನ್ಜೆನ್​ನಲ್ಲಿ ಸ್ಥಾಪಿಸಲ್ಪಟ್ಟಿದೆ. ಭಾರತದ ಸ್ಮಾರ್ಟ್​ಫೋನ್​ ಮತ್ತು ಮೊಬೈಲ್​ ಸಂಪರ್ಕ ಕ್ಷೇತ್ರದಲ್ಲಿ ಈ ಬ್ರ್ಯಾಂಡ್​ನೇಮ್​ ಭಾರಿ ಜನಪ್ರಿಯತೆ ಗಳಿಸಿದ್ದು 2018-19ನೇ ಸಾಲಿನಲ್ಲಿ ಒಟ್ಟು 12,800 ಕೋಟಿ ರೂ. ಆದಾಯ ಗಳಿಸಿಕೊಂಡಿದೆ.
ತುತ್ತತುದಿಗೇರಿತು ನೆಟ್ಟಿಗರ ಸಂಭ್ರಮ : ಅಷ್ಟಕ್ಕೂ ಉದ್ಯಮಿ ರತನ್ ಟಾಟಾ ಮಾಡಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
