ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಪ್ರತಿಭಟನೆಗೆ ಕಾರಣವಾಗಿದ್ದ 3 ಕೃಷಿ ಕಾನೂನುಗಳನ್ನು ಹಿಂಪಡೆಯುವ ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಡಿ.1 ರಂದು ಅಂಕಿತ ಹಾಕಿದರು. ಇದರೊಂದಿಗೆ ಈ ಕೃಷಿ ಕಾನೂನುಗಳು ಅಲ್ಪಾವಧಿಯಲ್ಲೇ ಮೊಟಕುಗೊಂಡಿವೆ. ಈ ಕಾನೂನುಗಳ ವಿರುದ್ಧ ದೆಹಲಿಯ ಗಡಿಭಾಗದಲ್ಲಿ ರೈತರು ಒಂದೂವರೆ ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದರು. ಕಾನೂನು ಹಿಂಪಡೆಯುವ ಮಸೂದೆಯನ್ನು ನ.29ರಂದು ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಬಹುಬೇಗನೆ ಇದು ಉಭಯ ಸದನಗಳಲ್ಲಿ ಅಂಗೀಕಾರವಾಯಿತು. ಈ ಕಾನೂನುಗಳನ್ನು ರಾಷ್ಟ್ರಹಿತಕ್ಕಾಗಿ ಹಿಂಪಡೆಯುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ನ.19ರಂದು ಘೋಷಿಸಿದ್ದರು.
ವಿವಾದಿತ ಕೃಷಿ ಕಾನೂನುಗಳು:(1) ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ನೆರವು)ಕಾಯ್ದೆ-2020 (2) ರೈತರ (ಸಬಲೀಕರಣಮತ್ತು ಸಂರಕ್ಷಣೆ)ಬೆಲೆ ಖಾತರಿ ಮತ್ತು ಕೃಷಿ ಜಮೀನು ಸೇವೆಗಳ ಒಪ್ಪಂದ ಕಾಯ್ದೆ-2020(3) ಅಗತ್ಯವಸ್ತುಗಳ ಕಾಯ್ದೆ(1955ಕ್ಕೆ ತಂದಿರುವ ತಿದ್ದುಪಡಿ)2020
ರಾಷ್ಟ್ರೀಯ ಕೃಷಿಕರ ದತ್ತಾಂಶ:ದೇಶದ ಕೃಷಿಕರಿಗೆ ಎಲ್ಲ ಸೌಲಭ್ಯಗಳೂ ಒಂದೇ ವೇದಿಕೆಯಲ್ಲಿ ದೊರಕುವಂತೆ ಮಾಡಲು ರಾಷ್ಟ್ರೀಯ ಕೃಷಿಕರ ದತ್ತಾಂಶ ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಜು.27ರಂದು ಲೋಕಸಭೆಯಲ್ಲಿ ಘೋಷಿಸಿತು.
ತೆಂಗು ಅಭಿವೃದ್ಧಿ ಮಂಡಳಿ ಮಸೂದೆ ಅಂಗೀಕಾರ:ತೆಂಗು ಅಭಿವೃದ್ಧಿ ಮಂಡಳಿಯ ಸದಸ್ಯರ ಸಂಖ್ಯೆ 4ರಿಂದ 6ಕ್ಕೆ ಏರಿಸುವ ಮತ್ತು ಚೇರ್ಮನ್ ಅನ್ನು ನಾನ್-ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಬದಲಾಯಿಸುವ ಉದ್ದೇಶದ ತೆಂಗು ಅಭಿವೃದ್ಧಿ ಮಂಡಳಿ (ತಿದ್ದುಪಡಿ) ಮಸೂದೆ 2021 ಅನ್ನು ಸಂಸತ್ ಅಂಗೀಕರಿಸಿದೆ. ಗುಜರಾತ್ ಮತ್ತು ಆಂಧ್ರಪ್ರದೇಶಕ್ಕೆ ಸದಸ್ಯತ್ವ ಲಭ್ಯವಾಗಲಿದೆ.
ಸರಯೂ ಯೋಜನೆ:ಸರಯೂ ಕಾಲುವೆ ರಾಷ್ಟ್ರೀಯ ಯೋಜನೆಗೆ ಉತ್ತರ ಪ್ರದೇಶದ ಬಲರಾಮಪುರ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಡಿ.11ರಂದು ಚಾಲನೆ ನೀಡಿದರು. 9,802 ಕೋಟಿ ರೂಪಾಯಿ ಯೋಜನೆ ಇದಾಗಿದ್ದು, 6,600 ಕಿ.ಮೀ. ಉದ್ದದ ಕಾಲುವೆಗಳು 25-30 ಲಕ್ಷ ರೈತರಿಗೆ ನೀರಾವರಿ ಅನುಕೂಲ ಒದಗಿಸಲಿದೆ.
ಕೆನ್-ಬೆಟ್ವಾ ನದಿಗಳ ಜೋಡಣೆ:ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ನಡುವಿನ ಪ್ರದೇಶದ ನೀರಾವರಿ ಕೊರತೆ ನೀಗಿಸಲು ಕೆನ್-ಬೆಟ್ವಾ ನದಿಗಳ ಜೋಡಣೆಯ 44,605 ಕೋಟಿ ರೂಪಾಯಿ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಡಿ.6ರಂದು ಒಪ್ಪಿಗೆ ನೀಡಿದೆ.
ಅಸ್ಸಾಂ ಟೀ ಪುಡಿ ಕಿಲೋಗೆ 1 ಲಕ್ಷ ರೂ.:ಅಸ್ಸಾಂನ ಮನೋಹರಿ ಗೋಲ್ಡ್ ಟೀ ಒಂದು ಕಿಲೋ 1 ಲಕ್ಷ ರೂಪಾಯಿಗೆ ಹರಾಜು ಆಗಿ ಹೊಸ ದಾಖಲೆ ಬರೆಯಿತು. ಸೌರವ್ ಟೀ ಟ್ರೇಡರ್ಸ್ ಇಷ್ಟು ದರ ನೀಡಿ ಮನೋಹರಿ ಗೋಲ್ಡ್ ಟೀ ಖರೀದಿಸಿತು.
ದೇಶದ ಮೊದಲ ಪಾಮೆಟಮ್:ಉತ್ತರಾಖಂಡ ಅರಣ್ಯ ಇಲಾಖೆ ದೇಶದ ಮೊದಲ ಪಾಮೆಟಮ್ (ತಾಳೆಮರಗಳ ಉದ್ಯಾನ) ಅನ್ನು ನೈನಿತಾಲ್ ಜಿಲ್ಲೆಯ ಹಲ್​ದ್ವಾನಿ ಪ್ರದೇಶದಲ್ಲಿ ಸೆ.26ರಂದು ಲೋಕಾರ್ಪಣೆಗೊಳಿಸಿತು. ಮೂರು ಎಕರೆ ಪ್ರದೇಶದಲ್ಲಿ 110 ಮಾದರಿಯ ತಾಳೆಮರಗಳಿವೆ.
90 ನಿಮಿಷದಲ್ಲಿ ಒಮಿಕ್ರಾನ್ ಪತ್ತೆ:ಐಐಟಿ ದೆಹಲಿಯ ಕುಸುಮಾ ಸ್ಕೂಲ್ ಆಫ್ ಬಯಲಾಜಿಕಲ್ ಸೈನ್ಸಸ್​ನ ಸಂಶೋಧಕರ ತಂಡ ಆರ್​ಟಿ-ಪಿಸಿಆರ್ ಆಧಾರಿತ ಪರೀಕ್ಷೆಯನ್ನು ಅಭಿವೃದ್ಧಿಪಡಿಸಿದ್ದು, ಇದರಲ್ಲಿ ಒಮಿಕ್ರಾನ್ ಸೋಂಕನ್ನು 90 ನಿಮಿಷದಲ್ಲಿ ಪತ್ತೆ ಹಚ್ಚಬಹುದು.
ಕಾರ್ನಿಯಲ್ ಕಸಿಗೆ ಹೈಡ್ರೋಜೆಲ್:ಹೈದರಾಬಾದ್​ನ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾರ್ನಿಯಲ್ ಕಸಿ ಪ್ರಕ್ರಿಯೆಗೆ ಬದಲಾಗಿ ಬಳಸುವ ಹೈಡ್ರೋಜೆಲ್ ಅನ್ನು ಅಭಿವೃದ್ಧಿಪಡಿಸಿ ವೈದ್ಯಕೀಯ ಜಗತ್ತಿನ ಗಮನಸೆಳೆಯಿತು.
ಕೊವೊವಾಕ್ಸ್​ಗೆ ಅನುಮತಿ:ಭಾರತದ ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿದ ಕೊವೊವಾಕ್ಸ್ ಲಸಿಕೆಯನ್ನು ಮಕ್ಕಳಿಗೆ ತುರ್ತು ಸಂದರ್ಭದಲ್ಲಿ ಬಳಸಲು ವಿಶ್ವ ಆರೋಗ್ಯ ಸಂಸ್ಥೆ ಡಿ.17ರಂದು ಅನುಮತಿ ನೀಡಿತು.
ಮೆಟಾವರ್ಸ್ ಎಂಬ ಹೊಸ ಲೋಕ:ಫೇಸ್​ಬುಕ್ ಕಂಪನಿ ತನ್ನ ಹೆಸರನ್ನು ಮೆಟಾ ಎಂದು ಬದಲಾಯಿಸಿಕೊಂಡು ಮೆಟಾವರ್ಸ್​ನ ಅದ್ಭುತ ಲೋಕವನ್ನು ಬಳಕೆದಾರರಿಗೆ ಪರಿಚಯಿಸಿದೆ. ಇದರ ಬೆನ್ನಿಗೆ, ಮೈಕ್ರೋಸಾಫ್ಟ್ ಕೂಡ ಮೆಷ್ ಎಂಬ ತನ್ನ ವರ್ಚುವಲ್ ಲೋಕವನ್ನು ಟೀಮ್್ಸ ಬಳಕೆದಾರರಿಗೆ ಪರಿಚಯಿಸಿದೆ. ವಿವಿಧ ಕಂಪನಿಗಳು ಈ ವರ್ಚುವಲ್ ಲೋಕಕ್ಕೆ ಪೂರಕವಾಗಿ ಕೆಲಸ ಮಾಡುತ್ತಿವೆ.
ಡಿಆರ್​ಡಿಒ 2-ಡಿಜಿ ಔಷಧ:ಕರೊನಾ ಸೋಂಕಿತರಲ್ಲಿ ಹೆಚ್ಚಿನ ಮಂದಿ ಆಮ್ಲಜನಕ ಸ್ವೀಕೃತಿ ಕೊರತೆ ಅನುಭವಿಸುತ್ತ ಕೃತಕ ಆಮ್ಲಜನಕಕ್ಕೆ ಪರದಾಡುವ ವೇಳೆ ಬೆಂಗಳೂರಿನ ಡಿಆರ್​ಡಿಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಕರೊನಾ ಸೋಂಕಿತರಿಗೆ ವೈದ್ಯಕೀಯ ಆಮ್ಲಜನಕದ ಮೇಲಿನ ಅವಲಂಬನೆ ಕಡಿಮೆ ಮಾಡುವ 2-ಡಿಜಿ ಔಷಧ ಅಭಿವೃದ್ಧಿಪಡಿಸಿ ನೆರವಾಯಿತು.
ಡಿಆರ್​ಡಿಒ ಡಿಪ್​ಕೋವ್ಯಾನ್ ಟೆಸ್ಟ್ ಕಿಟ್:ಆಂಟಿಬಾಡಿ ಟೆಸ್ಟ್ ಕಿಟ್ ಡಿಪ್​ಕೋವ್ಯಾನ್ ಅನ್ನು ಡಿಆರ್​ಡಿಒ ಮಾರುಕಟ್ಟೆಗೆ ಪರಿಚಯಿಸಿತು. ಈ ಕಿಟ್ ಬಳಸಿಕೊಂಡು 75 ನಿಮಿಷದಲ್ಲಿ ರಿಸಲ್ಟ್ ಕಂಡುಕೊಳ್ಳಬಹುದು. ಡಿಫೆನ್ಸ್ ಇನ್​ಸ್ಟಿಟ್ಯೂಟ್ ಆಫ್ ಫಿಸಿಯಾಲಜಿ ಆಂಡ್ ಅಲೈಡ್ ಸೈನ್ಸಸ್ ಪಾಲುದಾರಿಕೆ ಮತ್ತು ದೆಹಲಿಯ ವ್ಯಾನ್​ಗಾರ್ಡ್ ಡಯಾಗ್ನಾಸ್ಟಿಕ್ಸ್ ಪ್ರೖೆವೇಟ್ ಲಿಮೆಟೆಡ್ ಸಹಕಾರದೊಂದಿಗೆ ಇದನ್ನು ಡಿಆರ್​ಡಿಒ ಅಭಿವೃದ್ಧಿಪಡಿಸಿತು.
ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್:ದೇಶದ ಎಲ್ಲ ಪೌರರಿಗೆ ವಿಶಿಷ್ಟ ಆರೋಗ್ಯ ಗುರುತಿನ ಚೀಟಿ, ಹೆಲ್ತ್​ಕೇರ್ ಫೆಸಿಲಿಟೀಸ್ ಆಂಡ್ ಪ್ರೊಫೆಷನಲ್ಸ್ ರಿಜಿಸ್ಟ್ರಿ, ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಸ್ಯಾಂಡ್​ಬಾಕ್ಸ್ ಸೇವೆಗಳನ್ನು ಒಳಗೊಂಡ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಸೆ.27ರಂದು ಚಾಲನೆ ನೀಡಿದರು.
ಬರಹ:ಉಮೇಶ್ ಕುಮಾರ್ ಶಿಮ್ಲಡ್ಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 13 =
Remember me
