ಪೆಗಾಸಸ್ ಸ್ಪೈವೇರ್​ ಎಂಬ ಇಸ್ರೇಲ್ ಮೂಲದ ತಂತ್ರಜ್ಞಾನದ ಮೂಲಕ ರಾಜಕಾರಣಿಗಳ ಫೋನ್​ಗಳ ಮೇಲೆ ಕಣ್ಗಾವಲಿಟ್ಟ ಪ್ರಕರಣ ಸಂಸತ್ತಿನ ಒಳ-ಹೊರಗೆ ಗದ್ದಲ ಎಬ್ಬಿಸಿದ್ದಲ್ಲದೆ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಸುಪ್ರೀಂಕೋರ್ಟ್ ಕೇಳಿದ್ದ ಕೆಲ ಪ್ರಮುಖ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಉತ್ತರ ನೀಡಲಾಗಲಿಲ್ಲ. ‘ರಾಷ್ಟ್ರೀಯ ಭದ್ರತೆ’ ಹೆಸರಲ್ಲಿ ವ್ಯಕ್ತಿಯ ಖಾಸಗಿ ಹಕ್ಕನ್ನು ದಮನಗೊಳಿಸುವ ನಡೆಯನ್ನು ಒಪ್ಪಲಸಾಧ್ಯ ಎಂದ ಸುಪ್ರೀಂಕೋರ್ಟ್ ಇಡೀ ಪ್ರಕರಣದ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿತು. ಪೆಗಾಸಸ್
ಸ್ಪೈವೇರ್​ಅ​ನ್ನು ಮಂತ್ರಿಗಳು, ವಿರೋಧ ಪಕ್ಷದ ನಾಯಕರು, ರಾಜಕೀಯ ವಿಶ್ಲೇಷಕರು, ಪತ್ರಕರ್ತರು, ಕಾರ್ಯಕರ್ತರು, ಅಲ್ಪಸಂಖ್ಯಾತ ನಾಯಕರು, ಸುಪ್ರೀಂಕೋರ್ಟ್ ನ್ಯಾಯಾಧೀಶರು, ಧಾರ್ವಿುಕ ಮುಖಂಡರು, ಚುನಾವಣಾ ಆಯುಕ್ತರು ಮತ್ತು ಕೇಂದ್ರೀಯ ತನಿಖಾ ದಳದ ಮುಖ್ಯಸ್ಥರ ಫೋನ್​ನಿಂದ ಮಾಹಿತಿ ಸಂಗ್ರಹಿಸಲು ಬಳಸಲಾಗಿತ್ತು ಎಂದು ಆರೋಪಿಸಲಾಗಿದೆ.
ಸೆಂಟ್ರಲ್ ವಿಸ್ಟಾಗೆ ಅನುಮೋದನೆ:ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸೆಂಟ್ರಲ್ ವಿಸ್ಟಾ ಮರು ಅಭಿವೃದ್ಧಿ ಯೋಜನೆಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು 2:1 ಅನುಪಾತದಲ್ಲಿ ಬಹುಮತದ ತೀರ್ಪು ನೀಡಿದರು. ದೆಹಲಿಯ ಹೃದಯಭಾಗದ ಮರು ಅಭಿವೃದ್ಧಿ ಯೋಜನೆಗೆ ಭೂ ಬಳಕೆಗೆ ಆಕ್ಷೇಪಿಸಿದ್ದ ಅರ್ಜಿದಾರರು ಪರಿಸರ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದರು. ಆದರೆ, ಕೇಂದ್ರ ಸರ್ಕಾರ ತನ್ನ ನ್ಯಾಯಯುತ ಅಧಿಕಾರ ಬಳಸಿಕೊಂಡು ಅಭಿವೃದ್ಧಿ ಯೋಜನೆ ಕೈಗೆತ್ತಿಕೊಂಡಿದೆ ಎಂದ ನ್ಯಾಯಪೀಠ, ಯೋಜನೆ ಕಾಮಗಾರಿ ಮುಂದುವರಿಸಲು ಹಸಿರು ನಿಶಾನೆ ತೋರಿತು.
ಪರಿಹಾರ ಪ್ರಮಾಣ:ಗೃಹಿಣಿ ತನ್ನ ಕುಟುಂಬ ಮತ್ತು ರಾಷ್ಟ್ರದ ಆರ್ಥಿಕತೆಗೆ ಕೊಡುಗೆ ನೀಡುತ್ತಾಳೆ ಎಂಬ ಲಿಂಗ ಸಮಾನತೆ ಮೇಲೆ ಬೆಳಕು ಚೆಲ್ಲುವ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ಫೆಬ್ರವರಿಯಲ್ಲಿ ನೀಡಿತು. ಮೋಟಾರು ಅಪಘಾತ ಪ್ರಕರಣದಲ್ಲಿ ವಿಮೆ ನೀಡುವ ವಿಚಾರ ಇತ್ಯರ್ಥಪಡಿಸುವ ವೇಳೆ, ‘ಗೃಹಿಣಿಯರು ಕೆಲಸ ಮಾಡುವುದಿಲ್ಲ ಅಥವಾ ಕುಟುಂಬದ ಆರ್ಥಿಕ ಮೌಲ್ಯ ವೃದ್ಧಿಗೆ ಕಾರಣರಲ್ಲ ಎಂಬ ತಪು್ಪಕಲ್ಪನೆಯು ಹಲವು ವರ್ಷಗಳಿಂದ ಮುಂದುವರಿದುಕೊಂಡು ಬಂದಿದೆ. ನಾವದನ್ನು ಮೀರಿ ಮುನ್ನಡೆಯಬೇಕಿದೆ’ ಎಂದ ನ್ಯಾಯಪೀಠ, ಮೃತ ದಂಪತಿಯ ವಾರಸುದಾರರಿಗೆ ಹೆಚ್ಚಿನ ಪರಿಹಾರ ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಒಪ್ಪಿಕೊಂಡಿತು.
ಸುಪ್ರೀಂಕೋರ್ಟ್ ಕೆಂಗಣ್ಣು:ಲೈಂಗಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ನೀಡುವ ವೇಳೆ ಸಂತ್ರಸ್ತೆ ಆರೋಪಿಗೆ ರಾಖಿ ಕಟ್ಟಬೇಕು ಎಂದು ಮಧ್ಯಪ್ರದೇಶ ಹೈಕೋರ್ಟ್ ನೀಡಿದ್ದ ಆದೇಶ ಸುಪ್ರೀಂಕೋರ್ಟ್ ಕೆಂಗಣ್ಣಿಗೆ ಗುರಿಯಾಗಿತ್ತು. ಇದರಿಂದಾಗಿ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಜಾಮೀನು ನೀಡುವಾಗ ನ್ಯಾಯಾಲಯಗಳು ಅನು ಸರಿಸಬೇಕಾದ ಮಾರ್ಗಸೂಚಿಗಳನ್ನು ರೂಪಿಸಿತು.
ಹೆದ್ದಾರಿ ಪ್ರತಿಭಟನೆಗೆ ಗರಂ:ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸಿದ ಪರಿಣಾಮ ಆ ರಸ್ತೆಗಳಲ್ಲಿ ಓಡಾಡುತ್ತಿದ್ದ ಪ್ರಯಾಣಿಕರು ಒಂದು ವರ್ಷಕ್ಕಿಂತಲೂ ಹೆಚ್ಚು ದಿನಗಳ ಕಾಲ ಪರದಾಡುವಂತಾಗಿತ್ತು. ರೈತರ ಸಮಸ್ಯೆ ನಮಗೆ ಅರ್ಥವಾಗುತ್ತದೆ ಎಂದು ಸುಪ್ರೀಂಕೋರ್ಟ್ ಒಪ್ಪಿಕೊಂಡರೂ, ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿ ಸಾರ್ವಜನಿಕರಿಗೆ ಅನಾನುಕೂಲ ಮಾಡಿದ್ದಕ್ಕೆ ವ್ಯಾಪಕ ಅಸಮಾಧಾನ ಹೊರಹಾಕಿತು.
ಮಕ್ಕಳ ರಕ್ಷಣೆ:ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ಆರೋಪಿ ಮತ್ತು ಸಂತ್ರಸ್ತರ ನಡುವೆ ಚರ್ಮದಿಂದ ಚರ್ಮದ ಸ್ಪರ್ಶವಾಗಿಲ್ಲದಿದ್ದರೆ ಅದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯಡಿ ಪರಿಗಣಿಸುವ ಅಪರಾಧ ಅಲ್ಲ ಎಂಬ ಬಾಂಬೆ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ನವೆಂಬರ್ ತಿಂಗಳಲ್ಲಿ ತಳ್ಳಿಹಾಕಿತು. ಈ ಕಾನೂನಿನ ಮುಖ್ಯ ಉದ್ದೇಶ ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ತಡೆಯುವುದು. ಇಲ್ಲಿ ಚರ್ಮದಿಂದ ಚರ್ಮಕ್ಕೆ ಸಂಪರ್ಕ ಆಗಿದೆಯೇ ಇಲ್ಲವೇ ಎಂಬುದು ಮುಖ್ಯವಲ್ಲ. ಚರ್ಮದಿಂದ ಚರ್ಮದ ಸಂಪರ್ಕವನ್ನು ನೋಡಿ ಅಪರಾಧ ಗುರುತಿಸುವುದು ‘ಕಾನೂನಿನ ಸಂಕೀರ್ಣ ವ್ಯಾಖ್ಯಾನ’ ಎಂದ ನ್ಯಾಯಾಲಯ, ಅಸ್ಪಷ್ಟತೆಯನ್ನು ಸೃಷ್ಟಿಸಬಾರದು ಎಂದು ಅಸಮಾಧಾನ ಹೊರಹಾಕಿತು.
ಕರೊನಾ ಸಂದರ್ಭದಲ್ಲಿ ಹೈಬ್ರಿಡ್ ವ್ಯವಸ್ಥೆ:ಕೋವಿಡ್ ಸಂದರ್ಭದಲ್ಲೂ ಲಭ್ಯ ತಂತ್ರಜ್ಞಾನ ಸದುಪಯೋಗ ಪಡಿಸಿಕೊಂಡು, ಕಲಾಪಗಳಿಗೆ ಯಾವುದೇ ತೊಂದರೆಯಾಗದ ರೀತಿ ಹೈಕೋರ್ಟ್ ಕಾರ್ಯನಿರ್ವಹಿಸಿತು. ವಿಚಾರಣೆಗೆ ಹೈಬ್ರಿಡ್ ವ್ಯವಸ್ಥೆ ಅಳವಡಿಸಿಕೊಳ್ಳುವ ಮೂಲಕ ದೇಶಕ್ಕೆ ಮಾದರಿ ಎನಿಸಿಕೊಂಡಿತು. ರಾಜ್ಯ ಹೈಕೋರ್ಟ್​ನ ಈ ಪ್ರಯತ್ನಕ್ಕೆ ಸುಪ್ರೀಂಕೋರ್ಟ್ ಸಹ ಮೆಚ್ಚುಗೆ ವ್ಯಕ್ತಪಡಿಸಿತು.
ಪೀಠಾಧಿಪತಿ ವಿವಾದ:ಉಡುಪಿಯ ಶ್ರೀ ಶೀರೂರು ಮಠದ ಪೀಠಾಧಿಪತಿ ಸ್ಥಾನಕ್ಕೆ ಬಾಲ ಸಂನ್ಯಾಸಿಯನ್ನು ನೇಮಕ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅಪ್ರಾಪ್ತರು ಸಂನ್ಯಾಸ ಸ್ವೀಕರಿಸಲು ಅಥವಾ ಮಠಾಧಿಪತಿಯಾಗಲು ಕಾನೂನಿನಲ್ಲಿ ಯಾವುದೇ ನಿರ್ಬಂಧವಿಲ್ಲ. ಕಳೆದ 800 ವರ್ಷಗಳಿಂದ ನಡೆದುಕೊಂಡು ಬಂದಿರುವ ಶೀರೂರು ಮಠದ ಬಹುಮುಖ್ಯ ಧಾರ್ವಿುಕ ಆಚರಣೆಯಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವ ಅಗತ್ಯತೆ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತ್ತು.
ಕಾವೇರಿ ಕೂಗಿಗೆ ಹಸಿರು ನಿಶಾನೆ:ಬಂಜರು ಭೂಮಿಯಲ್ಲಿ ಮರಗಳನ್ನು ಬೆಳೆಸುವುದು ಅಪರಾಧವಲ್ಲ ಎಂದ ನ್ಯಾಯಾಲಯ, ಕಾವೇರಿ ನದಿ ಪಾತ್ರದಲ್ಲಿ ಸಸಿಗಳನ್ನು ನೆಡಲು ‘ಈಶ ಔಟ್​ರೀಚ್’ ಹಮ್ಮಿ ಕೊಂಡಿದ್ದ ‘ಕಾವೇರಿ ಕೂಗು’ ಯೋಜನೆಗೆ ಹಸಿರು ನಿಶಾನೆ ತೋರಿತು. ಯೋಜನೆಯ ಹೆಸರಿನಲ್ಲಿ ಸಾರ್ವಜನಿಕರಿಂದ ಕೋಟ್ಯಂತರ ರೂ. ಹಣ ಸಂಗ್ರಹಿಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಪಿಐಎಲ್​ನ್ನು ವಜಾಗೊಳಿಸಿತು.
ದತ್ತಪೀಠ ಪ್ರಕರಣ:ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿ ದತ್ತಾತ್ರೇಯ ಪೀಠ ದೇವಸ್ಥಾನದಲ್ಲಿ ಪೂಜೆ ನೆರವೇರಿಸಲು ಸೈಯದ್ ಗೌಸ್ ಮೊಹಿದ್ದೀನ್ ಖಾದ್ರಿ ಅವರನ್ನು ಮುಜಾವರ್ ಆಗಿ ನೇಮಕ ಮಾಡಿ 2018ರ ಮಾರ್ಚ್ 19ರಂದು ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್, ಬಹುದಿನಗಳ ವಿವಾದಕ್ಕೆ ತೆರೆ ಎಳೆಯಿತು. ಜತೆಗೆ, ಪ್ರಕರಣವನ್ನು ಹೊಸದಾಗಿ ಪರಿಗಣಿಸಿ, ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತು.
ತೃತೀಯ ಲಿಂಗಿಗಳಿಗೆ ಮೀಸಲಾತಿ:ಸರ್ಕಾರಿ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಶೇ.1 ಸಮತಲ ಮೀಸಲು ಕಲ್ಪಿಸುವ ಸಲುವಾಗಿ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮ-1977ಕ್ಕೆ ತಿದ್ದುಪಡಿ ತಂದು ಸರ್ಕಾರ ಅಧಿಸೂಚನೆ ಹೊರಡಿಸಿತು. ಹೈಕೋರ್ಟ್ ನಿರ್ದೇಶನದ ಬಳಿಕ ಸರ್ಕಾರ ಈ ಕ್ರಮ ಕೈಗೊಂಡಿತು.
ಕಲಾಪ ನೇರಪ್ರಸಾರ:ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಸದಾ ಮುಂದಿರುವ ಕರ್ನಾಟಕ ಹೈಕೋರ್ಟ್, ರಾಜ್ಯ ನ್ಯಾಯಾಂಗ ಇತಿಹಾಸದಲ್ಲೇ ಮೊದಲ ಬಾರಿಗೆ ಕೋರ್ಟ್ ಕಲಾಪವನ್ನು ಯೂಟ್ಯೂಬ್ ಚಾನಲ್​ನಲ್ಲಿ ನೇರಪ್ರಸಾರ ಮಾಡಿತು. ಮೇ 31ರಂದು ಪಿಐಎಲ್ ಒಂದರ ವಿಚಾರಣೆ ಪ್ರಾಯೋಗಿಕವಾಗಿ ನೇರಪ್ರಸಾರ ಮಾಡಲಾಯಿತು.
ಕೋವಿಡ್ ಪ್ರಕರಣಗಳ ಮೇಲ್ವಿಚಾರಣೆ:ಕರೊನಾ 2ನೇ ಅಲೆ ಸಂದರ್ಭದಲ್ಲಿ ಉಂಟಾಗಿದ್ದ ಆಮ್ಲಜನಕ ಕೊರತೆ, ಔಷಧ ಕೊರತೆ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿದ ಪೀಠ, ಕೇಂದ್ರ, ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿತು.
ಬರಹ:ರಾಘವ ಶರ್ಮ ನಿಡ್ಲೆ, ಜಗನ್ ರಮೇಶ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + seventeen =
Remember me
