ಮುಂಬೈ:ಯೆಸ್‌ ಬ್ಯಾಂಕ್‌ ಹಗರಣದಲ್ಲಿ ಸಿಲುಕಿರುವ ದಿವಾನ್‌ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌ (ಡಿಹೆಚ್ಎಲ್ಎಫ್) ಪ್ರವರ್ತಕರಾದ ಕಪಿಲ್ ವಾಧವನ್‌ ಮತ್ತು ಧೀರಜ್ ವಾಧವನ್‌ ಅವರಿಗೆ ಲಾಕ್‌ಡೌನ್‌ ಸಮಯದಲ್ಲಿ ಅನಧಿಕೃತವಾಗಿ ಪ್ರಯಾಣ ಮಾಡಲು ಅನುಮತಿ ನೀಡಿದ ಹಿರಿಯ ಐಪಿಎಸ್‌ ಅಧಿಕಾರಿ ಅಮಿತ್‌ ಗುಪ್ತಾ ಸಿಕ್ಕಿಬಿದ್ದಿದ್ದಾರೆ. ಈ ತಪ್ಪಿಗೆ ಅವರಿಗೆ ಕಡ್ಡಾಯ ರಜೆಯ ಮೇಲೆ ತೆರಳುವ ಶಿಕ್ಷೆ ನೀಡಿ ಗೃಹ ಇಲಾಖೆಯು ಆದೇಶಿಸಿದೆ..
ವಾಧವನ್‌ ಆರೋಪಿಗಳು ತಮ್ಮ 21 ಮಂದಿ ಕುಟುಂಬ ಸದಸ್ಯರ ಜತೆಗೂಡಿ ಲಾಕ್ ಡೌನ್ ನಡುವೆಯೇ ಖಂಡಾಲಾದಿಂದ ಮಹಾಬಲೇಶ್ವರಕ್ಕೆ ಕಳೆದ ಬುಧವಾರ ಸಂಜೆ ತಮ್ಮ ಕಾರಿನಲ್ಲಿ ಪ್ರಯಾಣಿಸಿದ್ದರು. ಇವರು ಪೊಲೀಸ್‌ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. ಮಾತ್ರವಲ್ಲದೇ ತುರ್ತು ಕೆಲಸಗಳೂ ಇರಲಿಲ್ಲ. ಇದರ ಹೊರತಾಗಿಯೂ ಪೊಲೀಸ್‌ ಇಲಾಖೆಯ ಅನುಮತಿ ಇಲ್ಲದೇ ಗುಪ್ತಾ ಅವರು 23 ಮಂದಿಗೂ ಪಾಸ್‌ ನೀಡಿದ್ದಾರೆ. ಐದು ವಾಹನಗಳಲ್ಲಿ ಕುಟುಂಬ ಪರಾರಿಯಾಗಿದೆ.
ಲಾಕ್‌ಡೌನ್‌ ಮಧ್ಯೆ ಪ್ರಯಾಣದ ನಿಷೇಧದ ಹೊರತಾಗಿಯೂ ಪ್ರಯಾಣ ಮಾಡಿರುವ ಕಾರಣ, ಇವರ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ಉಲ್ಲಂಘನೆ ಆರೋಪದ ಮೇಲೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಮಹಾಬಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಗರಣದಿಂದ ತಪ್ಪಿಸಿಕೊಳ್ಳುವ ಸಂಬಂಧ ಈ ರೀತಿ ಪರಾರಿಯಾಗಲು ಅವರು ಯತ್ನಿಸಿದ್ದರು ಎನ್ನಲಾಗುತ್ತಿದೆ. ಎಲ್ಲಾ 23 ಮಂದಿಯನ್ನು ಸದ್ಯ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು ತನಿಖೆ ನಡೆಯುತ್ತಿದೆ.(ಏಜೆನ್ಸೀಸ್‌)
ನಾನು ಮನೆಯಲ್ಲೇ ಇರುವೆ ಎಂಬ ಸ್ಲೇಟ್​ ಹಿಡಿಸಿ, ಸಾಮಾಜಿಕ ಜಾಲತಾಣಕ್ಕೆ ಹಾಕಿಸಿ ವಿನೂತನ ಶಿಕ್ಷೆ, ಪೊಲೀಸರ ಪ್ರಯೋಗ

PHOTOS| ಆರೋಗ್ಯಯುತ ಕೋಶಗಳಿಗೆ ದಾಳಿ ಮಾಡುವ ಕರೊನಾ ವೈರಸ್​ ಸರಣಿ ಚಿತ್ರಗಳು ಸೆರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − 1 =
Remember me
