ಮುಂಬೈ:ಯೆಸ್​ ಬ್ಯಾಂಕ್​ ಸಂಸ್ಥಾಪಕ ರಾಣಾ ಕಪೂರ್​​ರನ್ನು ಮಾರ್ಚ್​ 11ರವರೆಗೆ ಇ.ಡಿ. ವಶಕ್ಕೆ ನೀಡಿ ಮುಂಬೈ ಸೆಷನ್ಸ್​ ಕೋರ್ಟ್ ಆದೇಶ ನೀಡಿದೆ.
ರಾಣಾ ಕಪೂರ್ ವಿರುದ್ಧ ಇ.ಡಿ.ಅಧಿಕಾರಿಗಳು ಹಣಕಾಸು ಅಕ್ರಮ ವರ್ಗಾವಣೆ ತಡೆ ಕಾನೂನಿನ (ಪಿಎಂಎಲ್​ಎ) ಅನ್ವಯ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಅವರನ್ನು ಭಾನುವಾರ ಮುಂಜಾನೆ ಬಂಧಿಸಿ, ಕೋರ್ಟ್​ಗೆ ಹಾಜರುಪಡಿಸಲಾಗಿತ್ತು.
ರಾಣಾ ಕಪೂರ್​ ಹಾಗೂ ಅವರ ಹೆಣ್ಣುಮಕ್ಕಳ ಹೆಸರಿನಲ್ಲಿರುವ ಕಂಪನಿಯು ಹಗರಣಕ್ಕೆ ಒಳಗಾಗಿದ್ದ ದಿವಾನ್ ಹೌಸಿಂಗ್​ ಫೈನಾನ್ಸ್​ ಕಾರ್ಪೋರೇಶನ್​ (ಡಿಎಚ್​ಎಫ್​ಎಲ್​)ನಿಂದ ಸಾಲವೆಂದು ಪಡೆದು ತನ್ನ 40 ಕೋಟಿ ರೂಪಾಯಿ ಆಸ್ತಿಯನ್ನು 735 ಕೋಟಿ ರೂಪಾಯಿಗೆ ಹೆಚ್ಚಿಸಿಕೊಂಡ ಬಗ್ಗೆ ದಾಖಲೆಯನ್ನು ಇಡಿ ಅಧಿಕಾರಿಗಳು ನ್ಯಾಯಾಲಯದ ಎದುರು ಇಟ್ಟಿದ್ದರು. ಹೆಚ್ಚಿನ ವಿಚಾರಣೆ ಅಗತ್ಯ ಇರುವುದರಿಂದ ರಾಣಾ ಅವರನ್ನು ಮತ್ತೆ ಇಡಿ ವಶಕ್ಕೆ ನೀಡಿ ಕೋರ್ಟ್ ಆದೇಶಿಸಿದೆ.
ಶನಿವಾರ ಇ.ಡಿ.ಅಧಿಕಾರಿಗಳು ರಾಣಾ ಕಪೂರ್​ ಅವರ ಹೆಣ್ಣುಮಕ್ಕಳಾದ ರಾಧಾ ಮತ್ತು ರೋಷಿಣಿ ಅವರ ಹೇಳಿಕೆಗಳನ್ನೂ ದಾಖಲಿಸಿಕೊಂಡಿದ್ದಾರೆ. ಹಾಗೇ ರಾಧಾ ಕಪೂರ್ ಅವರ ಪತಿ ಆದಿತ್ಯ ಖನ್ನಾರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. (ಏಜೆನ್ಸೀಸ್)
ಇ.ಡಿ.ತನಿಖೆಗೆ ಸಹಕರಿಸದ ಯೆಸ್​ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್​ ಅರೆಸ್ಟ್​…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 5 =
Remember me
