ಇಂದೋರ್​:ಯಾವುದೇ ಒಂದು ದೊಡ್ಡ ತೀರ್ಮಾನ ಕೈಗೊಳ್ಳುವಾಗ ನಟಿ ದೀಪಿಕಾ ಪಡುಕೋಣೆ ಸಾಮಾಜಿಕ ಮತ್ತು ರಾಜಕೀಯ ಪರಿಚಯ ಮಾಡಿಕೊಳ್ಳಲಿ ಎಂದು ಯೋಗ ಗುರು ಬಾಬಾ ರಾಮ್​ದೇವ ಸಲಹೆ ನೀಡಿದ್ದಾರೆ.
ಅಲ್ಲದೆ, ಅವರಿಗೆ ದೂರ ದೃಷ್ಟಿ ನೀಡಬಲ್ಲಂತಹ ನನ್ನಂತಹ ಒಬ್ಬ ಸಲಹೆಗಾರನನ್ನು ನೇಮಿಸಿಕೊಳ್ಳಬೇಕಿದೆ ಎಂದು ವ್ಯಂಗ್ಯವಾಡಿದ ಅವರು, ದೀಪಿಕಾ ಒಬ್ಬ ಒಳ್ಳೆಯ, ದಕ್ಷತೆ ಇರುವ ನಟಿ. ಆದರೆ ಅವರು ದೇಶದ ಬಗ್ಗೆ ಇನ್ನೂ ತಿಳಿಯಬೇಕಿದೆ. ಇಂತಹ ಬೌದ್ಧಿಕ ಶಕ್ತಿ ಬಂದ ಮೇಲೆ ಅವರು ಬೇಕಾದರೆ ದೊಡ್ಡ ದೊಡ್ಡ ತೀರ್ಮಾನ ಕೈಗೊಳ್ಳಬಹುದು ಎಂದು ಸಲಹೆ ನೀಡಿದರು.
ಸಿಎಎ ಎಂದರೆ ಏನು ಎಂದು ತಿಳಿಯದವರು ಪ್ರಧಾನಿ ಮೋದಿ ವಿರುದ್ಧ ಅಸಂಬದ್ಧವಾಗಿ ಮಾತನಾಡುತ್ತಾರೆ. ಆದರೆ ಪ್ರಧಾನಿ ಮತ್ತು ಗೃಹ ಸಚಿವ ಇಬ್ಬರೂ ಕಾಯ್ದೆ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಕಾಯ್ದೆ ಯಾರ ನಾಗರಿಕತ್ವವನ್ನು ಕಿತ್ತುಕೊಳ್ಳುವುದಿಲ್ಲ ಎಂದರೂ ಕೆಲವರು ಸುಮ್ಮನೆ ಈ ಬಗ್ಗೆ ಅವ್ಯವಸ್ಥೆ ಮಾಡುತ್ತಿದ್ದಾರೆ ಎಂದರು.
ಯಾವ ದೇಶವೂ ಡಂಪಿಂಗ್​ ಯಾರ್ಡ್​ ಆಗಲು ಇಷ್ಟ ಪಡುವುದಿಲ್ಲ. ಭಾರತದಲ್ಲಿ ಅಕ್ರಮ ನಾಗರಿಕನ ವಾಸಕ್ಕೆ ಅವಕಾಶವಿಲ್ಲ. ಈಗಾಗಲೇ ದೇಶದಲ್ಲಿ ಅಂತಹ ಎರಡು ಕೋಟಿ ಜನರಿದ್ದಾರೆ ಎಂದರು
ಮೊಮ್ಮಕ್ಕಳು ಅಜ್ಜಿಯಂತೆ ಹೊರಹೊಮ್ಮಿದರೆ, ಅದೊಂದು ಕುಲಕ್ಕೆ ವೈಭವ. ಹೀಗಾದರೆ ಉತ್ತಮ. ನಾನು ಅದನ್ನು ಸ್ವಾಗತಿಸುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಬಗ್ಗೆ ಚಾಟಿ ಬೀಸಿದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
