ಪ್ಯಾರಿಸ್​:ಪ್ಯಾರಾಲಿಂಪಿಕ್ಸ್​ ಪದಕದಾಟದಲ್ಲಿ ಈ ಬಾರಿ ಭಾರತಕ್ಕೆ ಪದಕಗಳು ಹೆಚ್ಚಿನ ಸಂಖ್ಯೆಯಲ್ಲಿ ಒಲಿದುಬರುತ್ತಿದ್ದು, ಭಾರತೀಯ ಕ್ರೀಡಾಪಟುಗಳು ನಾವ್ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಅದ್ಭುತ ಪ್ರದರ್ಶನದ ಮೂಲಕ ಸಾಬೀತುಪಡಿಸುತ್ತಿದ್ದಾರೆ. ಈಗ ಈ ಸಾಲಿಗೆ 27 ವರ್ಷದ ಯೋಗೇಶ್ ಕಥುನಿಯಾ ಸೇರ್ಪಡೆಯಾಗಿದ್ದು, ಡಿಸ್ಕಸ್​ ಥ್ರೋ ಫೈನಲ್ ಪಂದ್ಯದಲ್ಲಿ ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ.
ಇದನ್ನೂ ಓದಿ:ಆಲದಮರ ಪಾರ್ಕ್​ನಲ್ಲಿ ಅರಳಿದ ಮಣ್ಣಿನ ಗಣಪ
ಇಂದು ನಡೆದ ಡಿಸ್ಕಸ್​ ಎಸೆತದ ಫೈನಲ್ ಪಂದ್ಯದಲ್ಲಿ 42.22 ಮೀ. ದೂರ ಅತ್ಯುತ್ತಮ ಎಸೆತ ದಾಖಲಿಸಿದ ಯೋಗೇಶ್​, ಬೆಳ್ಳಿಗೆ ಕೊರಳೊಡ್ಡಿದ್ದರೆ, ಬ್ರೆಜಿಲ್‌ನ ಕ್ಲೌಡಿನಿ ಬಟಿಸ್ಟಾ ಡಾಸ್ ಸ್ಯಾಂಟೋಸ್ 86 ಮೀ ಎಸೆದು ಚಿನ್ನದ ಪದಕಕ್ಕೆ ಮುತ್ತಿಟ್ಟು, ಪ್ರಥಮ ಸ್ಥಾನ ಅಲಂಕರಿಸಿದ್ದಾರೆ. ಪ್ಯಾರಾಲಿಂಪಿಕ್ಸ್ ಓಟದಲ್ಲಿ ಭಾರತಕ್ಕೆ ಇದು 8ನೇ ಪದಕ ಎಂಬುದು ಗಮನಾರ್ಹ ಹಾಗೂ ಹೆಮ್ಮೆಯ ಸಂಗತಿ.
ಗ್ರೀಸ್​ನ ಕಾನ್‌ಸ್ಟಾಂಟಿನೋಸ್ ಟ್ಜೌನಿಸ್ 41.32 ಮೀ. ದೂರ ಎಸೆದು ಕಂಚಿನ ಪದಕ ಗೆದ್ದರೆ, ಸ್ಲೋವಾಕಿಯಾದ ಡುಸಾನ್ ಲಕ್ಜ್ಕೊ 41.20 ಮೀಟರ್ ಎಸೆದು ನಾಲ್ಕನೇ ಸ್ಥಾನ ಅಲಂಕರಿಸಿದರು. ಇನ್ನು ಸೆರ್ಬಿಯಾದ ನೆಬೊಜ್ಸಾ ಡ್ಯೂರಿಕ್ ಅವರು ಅಂತಿಮ ಸುತ್ತಿಗೆ ಅರ್ಹತೆ ಪಡೆದರೂ ಸಹ ಫೈನಲ್‌ನಲ್ಲಿ ಭಾಗವಹಿಸಲಿಲ್ಲ. ಈ ಸೀಸನ್​ನ ಅತ್ಯುತ್ತಮ ಥ್ರೋ ದಾಖಲಿಸಿದ ಯೋಗೇಶ್​, ಇದೀಗ ಬೆಳ್ಳಿಗೆ ಮುತ್ತಿಟ್ಟು ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.
14 ತಿಂಗಳು ಕಿಡ್ನ್ಯಾಪರ್​ ಜತೆಗಿತ್ತು 2 ವರ್ಷದ ಕೂಸು! ಅರೆಸ್ಟ್​ ಆದ್ರೂ ತಾಯಿ ಬಳಿ ಹೋಗದೆ ಆತನನ್ನೇ ತಬ್ಬಿಡಿದು ಕಣ್ಣೀರು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × one =
Remember me
