ಶಿಮ್ಲಾ:ಹಿಮಾಚಲ ಪ್ರದೇಶಕ್ಕೆ ಚುನಾವಣಾ ಪ್ರಚಾರಕ್ಕಾಗಿ ಹೋದ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಕಾಂಗ್ರೆಸ್​ನ ಲೇವಡಿ ಮಾಡಿದ್ದಾರೆ.
‘ದೇಶದಲ್ಲಿ ಆಪತ್ತು ಎದುರಾದಾಗ ರಾಹುಲ್​ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇಟಲಿಗೆ ಓಡಿ ಹೋಗುತ್ತಾರೆ. ಅದೇ ಮೋದಿ ಆಡಳಿತದಲ್ಲಿ ಜಗತ್ತಿಗೆ ಆಪತ್ತು ಬಂದಾಗ ಎಲ್ಲರೂ ಭಾರತದ ಕಡೆಗೆ ತಿರುಗಿ ನೋಡುತ್ತಾರೆ’ ಎಂದು ಹೇಳಿದರು.
‘ಕಾಂಗ್ರೆಸ್ ನಾಯಕರ ಹಿತಾಸಕ್ತಿಗಳು ಅವರ ಸ್ವಂತ ಕುಟುಂಬಗಳಿಗೆ ಸೀಮಿತವಾಗಿವೆ. ಆದರೆ ಪ್ರಧಾನಿ ಮೋದಿ ಸರ್ಕಾರದಲ್ಲಿ, ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರೂ ಭಾರತದ 135 ಕೋಟಿ ಜನರನ್ನು ತನ್ನ ಕುಟುಂಬವೆಂದು ಪರಿಗಣಿಸಿ ಕೆಲಸ ಮಾಡುತ್ತಾರೆ. ಜನರ ಭದ್ರತೆ, ಸಂತೋಷ ಮತ್ತು ಸಮೃದ್ಧಿಗಾಗಿ ಕೆಲಸ ಮಾಡುವ ಜವಾಬ್ದಾರಿ ಬಿಜೆಪಿ ಕಾರ್ಯಕರ್ತರ ಮೇಲಿದೆ. ಕಷ್ಟದ ಸಮಯದಲ್ಲಿ ಜೊತೆಗಾರನಾಗಿರುವವನು ನಿಜವಾದ ಹಿತೈಷಿ’ ಎಂದು ಯೋಗಿ ಕಾಂಗ್ರೆಸ್​ಅನ್ನು ಟೀಕಿಸಿದರು.(ಏಜೆನ್ಸೀಸ್​)
Sign in to your account
Please enter an answer in digits:14 − 12 =
Remember me
