ನವದೆಹಲಿ:ಹಾಥರಸ್​ ಗ್ಯಾಂಗ್​ರೇಪ್​ ಪ್ರಕರಣವನ್ನು ನಿರ್ವಹಿಸುವಲ್ಲಿ ಉತ್ತರ ಪ್ರದೇಶ ಪೊಲೀಸರು ವಿಫಲವಾಗಿದ್ದಾರೆಂದು ರಾಜ್ಯದ ಹಿರಿಯ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ. ನಾಲ್ವರು ಆರೋಪಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಬಿಜೆಪಿ ನಾಯಕರು ಹೇಳಿಕೆ ನೀಡಿದ್ದಾರೆ.
ಸಿಬಿಐ ಚಾರ್ಜ್​ಶೀಟ್ ಪ್ರಕಾರ, 20 ವರ್ಷದ ದಲಿತ ಯುವತಿಯು ಸೆಪ್ಟೆಂಬರ್ 14 ರಂದು ಹಾಥರಸ್​ನಲ್ಲಿ ಮೇಲ್ಜಾತಿ ಸಮುದಾಯದವರು ಎನ್ನಲಾದ ನಾಲ್ವರು ಯುವಕರಿಂದ ಅತ್ಯಾಚಾರಕ್ಕೊಳಗಾಗಿದ್ದು, ಗಂಭೀರವಾಗಿ ಗಾಯಗೊಂಡು ದೆಹಲಿಯ ಆಸ್ಪತ್ರೆಯಲ್ಲಿ ಸಾವಿಗೀಡಾದಳು. ಸೆಪ್ಟೆಂಬರ್ 30ರ ರಾತ್ರಿ ಯುವತಿ ಅಸುನೀಗಿದಾಗ ಮನೆಯ ಬಳಿ ಆತುರದಿಂದ ಅಂತ್ಯಕ್ರಿಯೆ ಮಾಡಲಾಯಿತು. ಈ ಘಟನೆಯು ರಾಷ್ಟ್ರದಾದ್ಯಂತ ಆಕ್ರೋಶವನ್ನು ಉಂಟುಮಾಡಿತು ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:2ನೇ ಪತ್ನಿ ಜತೆ ಪ್ರಸ್ತಕ್ಕೆ ಮುಂದಾಗಿದ್ದವನಿಗೆ ಮೊದಲನೇ ಹೆಂಡತಿ ಕೊಟ್ಟಳು ಬಿಗ್​ ಶಾಕ್​..!
ಈ ಬಗ್ಗೆ ಮಾತನಾಡಿರುವ ಉತ್ತರ ಪ್ರದೇಶ ಕಾರ್ಮಿಕ ಸಚಿವ ಸುನೀಲ್​ ಭರಾಳ, ಯುಪಿ ಸರ್ಕಾರ ಯಾವಾಗಲೂ ಸಂತ್ರಸ್ತೆಯ ಕುಟುಂಬದ ಪರವಾಗಿ ನಿಲ್ಲುತ್ತದೆ. ಸಿಎಂ ಯೋಗಿ ಆದಿತ್ಯನಾಥ್​ ಅವರೇ ಈ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆ. ಅಲ್ಲದೆ, ಯುಪಿ ಪೊಲೀಸರು ಚೆನ್ನಾಗಿ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಯೋಗಿ ಅವರಿಗೆ ಇಲ್ಲ. ಎಲ್ಲ ಪೊಲೀಸ್​ ಅಧಿಕಾರಿಗಳು ಒಳ್ಳೆಯವರಲ್ಲ. ಆರಂಭದ ದಿನದಿಂದ ಯೋಗಿ ಅವರು ಸಂತ್ರಸ್ತೆಯ ಕುಟುಂಬದೊಂದಿಗೆ ಇದ್ದಾರೆಂದು ಹೇಳಿದರು.
ನಾಲ್ವರು ಆರೋಪಿಗಳ ವಿರುದ್ಧ ಕಳೆದ ವಾರ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸಿಬಿಐ ದಾಖಲಿಸಿದೆ. ಅಲ್ಲದೆ, ಎಸ್​ಸಿ/ಎಸ್​ಟಿ ದೌರ್ಜನ್ಯ ತಡೆಗಟ್ಟುವಿಕೆ ಕಾಯ್ದೆ ಅಡಿಯು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದೆ. ದೆಹಲಿಯಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಹಾಥರಸ್​ನ ಕೋರ್ಟ್​ ಮುಂದೆ ಚಾರ್ಜ್​ಶೀಟ್​ ಅನ್ನು ತನಿಖಾ ಸಂಸ್ಥೆ ಸಲ್ಲಿಸಿದೆ.
ಇದನ್ನೂ ಓದಿ:ಬೆತ್ತಲೆ ಫೋಟೋ ಕಳುಹಿಸುವಂತೆ ಬ್ಲ್ಯಾಕ್​ಮೇಲ್ : ಇನ್​ಸ್ಟಾಗ್ರಾಂ ಖಾತೆ ತೆರೆದು ಗಾಬರಿಗೊಳಗಾದ 13ರ ಬಾಲಕಿ!
ಸಾವಿಗೀಡಾದ ಬೆನ್ನಲ್ಲೇ ಕುಟುಂಬದ ಒಪ್ಪಿಗೆಯನ್ನು ಪಡೆಯದೇ ಸಂತ್ರಸ್ತೆಯ ಅಂತ್ಯಸಂಸ್ಕಾರವನ್ನು ರಾತ್ರೋರಾತ್ರಿ ಬಿಗಿ ಪೊಲೀಸ್​ ಬಂದೋಬಸ್ತ್​ನಲ್ಲಿ ಮಾಡಿ ಮುಗಿಸಿದ್ದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದಲ್ಲದೆ ಭಾರಿ ಆಕ್ರೋಶಕ್ಕೂ ಕಾರಣವಾಗಿದೆ. ಪ್ರಕರಣ ಕುರಿತು ಸಾಕಷ್ಟು ದೂರುಗಳನ್ನು ಸಹ ಸಲ್ಲಿಸಲಾಗಿದೆ.(ಏಜೆನ್ಸೀಸ್​)
ವಾಟ್ಸ್​ಆ್ಯಪ್​ ಸ್ಟೇಟಸ್​ನಿಂದ ಬಯಲಾಯ್ತು ಮುಚ್ಚಿಟ್ಟಿದ್ದ ರಹಸ್ಯ: ಮರುಗಳಿಗೆಯಲ್ಲೇ ಮಹಿಳೆ ನೇಣಿಗೆ ಶರಣು!

ಐದೇ ದಿನದಲ್ಲಿ ಎರಡು ಮದುವೆಯಾಗಿ ಟೆಕ್ಕಿ ಪರಾರಿ: ರಹಸ್ಯ ಮದ್ವೆ ಬಯಲಾದ ಕತೆಯೇ ರೋಚಕ!

ಚಿನ್ನಾಭರಣ ಪ್ರಿಯರಿಗೆ ಬಿಗ್​ ಶಾಕ್​! ಒಂದೇ ವಾರದಲ್ಲಿ ಶೇ. 2 ಏರಿದ ಗೋಲ್ಡ್​ ರೇಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + two =
Remember me
