ಲಖನೌ:‘ನಿಯಮ ಎಂದರೆ ಎಲ್ಲರಿಗೂ ಒಂದೇ. ಅದನ್ನು ಎಲ್ಲರೂ ಪರಿಪಾಲಿಸಲೇಬೇಕು’ ಎಂದು ಕೆಲವು ರಾಜಕಾರಣಿಗಳು ಬಾಯಲ್ಲಿ ಬೇಕಾದಷ್ಟು ಸಲ ಹೇಳುತ್ತಾರೆ. ಆದರೆ ಆ ನಿಯಮವನ್ನು ಪಾಲನೆ ಮಾಡುವ ವಿಷಯ ಬಂದಾಗ, ತಮಗೆ ಸಂಬಂಧವೇ ಇಲ್ಲ ಎಂದುಕೊಂಡು ನಡೆದುಕೊಳ್ಳುತ್ತಿರುವ ಉದಾಹರಣೆಗಳು ನಮ್ಮ ಮುಂದೆಯೇ ಇವೆ.ಆದರೆ ಅಪರೂಪ ಎಂಬಂತೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಲಾಕ್‌ಡೌನ್‌ ನಿಯಮ ಇರುವ ಕಾರಣ, ಅದನ್ನು ಉಲ್ಲಂಘಿಸಬಾರದು ಎನ್ನುವ ಕಾರಣಕ್ಕೆ ತಮ್ಮ ತಂದೆಯ ಅಂತಿಮ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿಲ್ಲ.ಯೋಗಿ ಆದಿತ್ಯನಾಥ ಅವರ ತಂದೆ ಆನಂದ್‌ ಸಿಂಗ್‌ ಬಿಶ್ತ್‌ (89) ಅವರು ಇಂದು ಬೆಳಗ್ಗೆ 10.40ರ ವೇಳೆಗೆ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆದರೆ ಲಾಕ್‌ಡೌನ್‌ ನಿಯಮದ ಹಿನ್ನೆಲೆಯಲ್ಲಿ ತಂದೆಯವರ ಅಂತಿಮ ವಿಧಿ ವಿಧಾನಕ್ಕೆ ಮುಖ್ಯಮಂತ್ರಿಗಳು ತೆರಳುತ್ತಿಲ್ಲ ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಕೆ. ಅವಸ್ಥಿ ತಿಳಿಸಿದ್ದಾರೆ.ಸಭೆ ಮುಗಿದ ಮೇಲೆ ಎದ್ದು ನಿಂತರು:ತಂದೆ ಮೃತಪಟ್ಟಿರುವ ಸುದ್ದಿ ಬಂದಾಗ, ಕರೊನಾ ವೈರಸ್‌ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಂತೆ ಯೋಗಿ ಆದಿತ್ಯನಾಥ ಅವರು ಸಭೆ ನಡೆಸುತ್ತಿದ್ದರು. ತಂದೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ ನಂತರವೂ ಅವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆ ಇನ್ನೂ ಅರ್ಧ ನಡೆಯುತ್ತಿದ್ದಾಗ ಅವರಿಗೆ ತಂದೆ ಮೃತಪಟ್ಟಿರುವ ಸುದ್ದಿ ತಲುಪಿತು.ಸುದ್ದಿ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿಗಳು ವಿಚಲಿತರಾದರೂ, ಸಭೆಗೆ ತಮ್ಮಿಂದ ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಸಂಪೂರ್ಣ ಸಭೆಯನ್ನು ಮುಗಿಸಿದ ಬಳಿಕವಷ್ಟೇ ಎದ್ದುನಿಂತು ತಂದೆಗೆ ಗೌರವ ಸೂಚಿಸಿರುವುದಾಗಿ ಅವನೀಶ್‌ ತಿಳಿಸಿದ್ದಾರೆ.ಅನೇಕ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆನಂದ್‌ ಸಿಂಗ್‌ ಅವರು ಮಾರ್ಚ್‌ 13ರಿಂದ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೂತ್ರಪಿಂಡ ಮತ್ತು ಪಿತ್ತಜನಕಾಂಗದ ಸೇರಿದಂತೆ ವಯೋಸಹಜ ಸಮಸ್ಯೆಯಿಂದ ಅವರು ಬಳಲುತ್ತಿದ್ದರು ಎನ್ನಲಾಗಿದೆ. ನಿನ್ನೆಯಿಂದ ಅವರ ಸ್ಥಿತಿ ತುಂಬಾ ಗಂಭೀರವಾಗಿತ್ತು, ಆರೋಗ್ಯ ಕ್ಷೀಣಿಸುತ್ತಿರುವುದಾಗಿ ವೈದ್ಯರು ತಿಳಿಸಿದ್ದರು. ಆನಂದ್‌ ಸಿಂಗ್‌ ಅವರು ಅರಣ್ಯ ಅಧಿಕಾರಿಯಾಗಿ ನಿವೃತ್ತರಾಗಿದ್ದರು.ಕರೊನಾ ಕುರಿತ ಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ‘ಆರ್ಥಿಕವಾಗಿ ಹಿಂದುಳಿದವರಿಗೆ ತಲಾ ಒಂದು ಸಾವಿರ ರೂಪಾಯಿ ಬಿಡುಗಡೆ ಮಾಡುವಂತೆ ಹೇಳಿದ್ದಾರೆ. ಇದರ ಜತೆಗೆ ಯಾವುದೇ ಕಲ್ಯಾಣಾಭಿವೃದ್ಧಿ ಯೋಜನೆ ಅಡಿ ಬರದ ಕುಟುಂಬಗಳು ಇದ್ದರೆ, ಅವರಿಗೂ ತಲಾ ಒಂದು ಸಾವಿರ ರೂಪಾಯಿ ನೀಡುವಂತೆ ನಿರ್ದೇಶಿಸಿದ್ದಾರೆ. ಇಲ್ಲಿಯವರೆಗೆ ಸರ್ಕಾರದಿಂದ ಕರೊನಾ ನಿರ್ವಹಣಾ ವೆಚ್ಚದ ರೂಪದಲ್ಲಿ ಸುಮಾರು 237 ಕೋಟಿ ರೂಪಾಯಿಗಳನ್ನು 23.70 ಲಕ್ಷ ಕಾರ್ಮಿಕರಿಗೆ ನೀಡಲಾಗಿದೆ.ಉತ್ತರ ಪ್ರದೇಶದಲ್ಲಿ ಕರೊನಾ ವೈರಸ್‌ ಪೀಡಿತರ ಸಂಖ್ಯೆ 1,084ಕ್ಕೆ ಏರಿದ್ದು, 17 ಮಂದಿ ಮೃತಪಟ್ಟಿದ್ದಾರೆ(ಏಜೆನ್ಸೀಸ್‌)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:seventeen − sixteen =
Remember me
