ಲಂಡನ್:ಅತ್ತೆ ಸೊಸೆ ಇರುವುದೇ ಜಗಳ ಆಡೋಕೆ ಎಂದು ಬಿಂಬಿಸುವ ಈ ಸಮಾಜದಲ್ಲಿ, ಹೆಂಗಸರು ತಮ್ಮ ಅತ್ತೆಯನ್ನು ಹೊಗಳಿದರೆ ಅದು ಎಲ್ಲರ ಹುಬ್ಬೇರಿಸುತ್ತದೆ. ಅಂಥದ್ರಲ್ಲಿ ಸೆಲೆಬ್ರಿಟಿ ಸಿನಿಮಾ ತಾರೆ ತಮ್ಮ ಅತ್ತೆಯನ್ನು ಹೊಗಳಿದರೆ ವೈರಲ್ ಆಗದೇ ಇರುತ್ತಾ?! ಹೌದು, ತಮ್ಮ ಅತ್ತೆಯನ್ನು ಹಾಡಿಹೊಗಳಿದ್ದಾರೆ, ಬಾಲಿವುಡ್ ನಟಿ ಸೋನಮ್​ ಕಪೂರ್ ಅಹೂಜಾ. ಜೊತೆಗೆ ಅತ್ತೆಯೊಂದಿಗೆ ಇರುವ ತಮ್ಮ ಚಿತ್ರವನ್ನು ಶೇರ್ ಮಾಡಿದ್ದಾರೆ. ಅದೀಗ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.
ಬಾಲಿವುಡ್ ನಟಿ ಸೋನಮ್ ಕಪೂರ್ ಅಹುಜಾ ಸಾಮಾಜಿಕ ಮಾಧ್ಯಮವನ್ನು ತಮ್ಮ ಫೋಟೋಶೂಟ್‌ಗಳು, ಸಿನಿಮಾ ಮತ್ತು ಪ್ರವಾಸಗಳ ಫೋಟೋ ಹಾಕೋಕೆ ಮಾತ್ರ ಬಳಸಲ್ಲ. ತಮ್ಮ ಕುಟುಂಬದ ಸದಸ್ಯರ ಚಿತ್ರಗಳು ಮತ್ತು ತಮ್ಮ ಪ್ರೀತಿಪಾತ್ರರ ಮೇಲೆ ಪ್ರೀತಿ ತೋರಿಸುವುದಕ್ಕೂ ಬಳಸುತ್ತಾರೆ. ಹೀಗೇ ಸೋನಮ್, ತಮ್ಮ ಅತ್ತೆ ಪ್ರಿಯಾ ಅಹುಜಾ ಅವರ ಹುಟ್ಟಿದಹಬ್ಬಕ್ಕೆ ಶುಭಾಶಯ ಕೋರಿ ಅವರನ್ನು ‘ಬೆಸ್ಟ್ ಮದರ್​ ಇನ್​ ಲಾ’ ಅಂತ ಕರೆದಿದ್ದಾರೆ. ತಮ್ಮ ಅತ್ತೆಯೊಂದಿಗೆ ಇರುವ ಹಲವಾರು ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.
ಇದನ್ನೂ ಓದಿ:ಪ್ರಿಯಾಂಕಾರ ಆತ್ಮಚರಿತ್ರೆಯಲ್ಲಿದೆ … ‘ಪ್ಲಾಸ್ಟಿಕ್ ಚೋಪ್ರಾ’ ಆದ ಗುಟ್ಟು !
ಪ್ರೇಮ್ ರತನ್ ಧನ್ ಪಾಯೋ, ನೀರಜಾ, ವೀರೆ ದಿ ವೆಡ್ಡಿಂಗ್ ಮುಂತಾದ ಹಿಟ್ ಚಿತ್ರಗಳಿಂದ ಅಭಿಮಾನಿಗಳನ್ನು ಮೆಚ್ಚಿಸಿರುವ ಸೋನಮ್ ಕಪೂರ್ ಸದ್ಯಕ್ಕೆ ಲಂಡನ್​ನಲ್ಲಿ ತಮ್ಮ ಪತಿ ಮತ್ತು ಅತ್ತೆ ಜೊತೆ ವಾಸಿಸುತ್ತಿದ್ದಾರೆ. ಅತ್ತೆ ಪ್ರಿಯಾ ಅಹುಜಾ ಜೊತೆ ನಿಂತಿರುವ ಚಿತ್ರದೊಂದಿಗೆ ಸೋನಮ್ ಹೀಗೆ ಬರೆದಿದ್ದಾರೆ -“ನಾನು ಒಳ್ಳೆಯ ತಾಯಿಯನ್ನು ಪಡೆಯುವುದರೊಂದಿಗೆ, ಒಳ್ಳೆಯ ಅತ್ತೆಯನ್ನೂ ಪಡೆದು ಇಮ್ಮಡಿ ಅದೃಷ್ಟ ಪಡೆದಿದ್ದೇನೆ. ನೀವು ನಿಸ್ವಾರ್ಥಿ, ತಾಳ್ಮೆ ಇರುವವರು, ಪ್ರೀತಿ ತೋರುತ್ತೀರಿ – ಮತ್ತು ಎಷ್ಟೋ ರೀತಿಯಲ್ಲಿ ಸ್ಪೆಷಲ್ ಆಗಿದ್ದೀರಿ. ನಿಮ್ಮ ಪ್ರೀತಿಯನ್ನು ಪಡೆದ ನಾವೇ ಧನ್ಯರು” ಎಂದು ಸೋನಮ್ ಬರೆದಿದ್ದಾರೆ. ಜೊತೆಗೆ “ನಾನು ಜಗತ್ತಿನ ಲಕ್ಕಿಯೆಸ್ಟ್​ ಡಾಟರ್​ ಇನ್ ಲಾ… ಲವ್​ ಯು ಮಾಮ್” ಎಂದು ಹೇಳಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

“ರಾಹುಲ್ ಭೈಯಾ… ನೀವಾಗ ರಜೆಯ ಮೇಲಿದ್ದಿರಿ… ಅದಕ್ಕೆ ನಿಮಗೆ ಗೊತ್ತಿಲ್ಲ”

‘ನನ್ನ ವಾಲೆಂಟೈನ್ – ಪ್ರತಿದಿನ, ಎಂದೆಂದಿಗೂ’ ಎಂದು ಸನ್​ಸೆಟ್​ ಫೋಟೋ ಹಾಕಿದ ಅನುಷ್ಕಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
