ನವದೆಹಲಿ:ಇಂದು ವಿಶ್ವ ನಿದ್ರಾ ದಿನ. ವಿಶೇಷ ದಿನದಂದು ನಿದ್ರೆಯ ಮಂಪರಿನಲ್ಲಿರುವವರಿಗೆ ವೇಕ್​ಫಿಟ್​ ಸಂಸ್ಥೆ ಒಂದು ಸಿಹಿ ಸುದ್ದಿಯನ್ನು ನೀಡಿದೆ. ನೀವು ನಿದ್ದೆ ಮಾಡಿದರೆ 10 ಲಕ್ಷ ರೂಪಾಯಿಯನ್ನು ಬಹುಮಾನವಾಗಿ ನೀಡುವುದಾಗಿ ತಿಳಿಸಿದೆ.
ಪ್ರಸಿದ್ಧ ಹಾಸಿಗೆ ಮಾರಾಟ ಸಂಸ್ಥೆಯಾಗಿರುವ ವೇಕ್​ಫಿಟ್​ ಸಂಸ್ಥೆ ಒಂದು ಸ್ಪರ್ಧೆಯನ್ನು ಏರ್ಪಡಿಸಿದೆ. ಅದರಲ್ಲಿ ಭಾರತೀಯರು ಯಾರಾದರೂ ಭಾಗವಹಿಸಬಹುದು ಎಂದು ಸಂಸ್ಥೆ ಹೇಳಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ನೀವು ಮೊದಲು ವೇಕ್​ಫಿಟ್​ ವೆಬ್​ಸೈಟ್​ನಲ್ಕು ನೋಂದಣಿಯಾಗಬೇಕು. ನೀವು ನಿಮ್ಮ ನಗರದಲ್ಲಿ ಯಾವ ರೀತಿಯಲ್ಲಿ ಒಳ್ಳೆಯ ನಿದ್ರೆ ಮಾಡುವವರು ಎನ್ನುವುದನ್ನು ಸಮರ್ಥಿಸಿಕೊಳ್ಳುವಂತಹ ಸಾಲುಗಳನ್ನು ಅಲ್ಲಿ ಬರೆಯಬೇಕು. ಹಾಗೆ ಬರೆದ ಸಾಲುಗಳ ಆಧಾರದ ಮೇಲೆ ಒಂದಿಷ್ಟು ಜನರನ್ನು ಸ್ಪರ್ಧೆಗೆ ಆಯ್ಕೆ ಮಾಡಿಕೊಳ್ಳಲಾಗುವುದು.
ಆಯ್ಕೆಯಾದ ಸ್ಪರ್ಧಿಗಳಲ್ಲಿ ನಿಜವಾದ ಸ್ಪರ್ಧೆ ನಡೆಯಲಿದ್ದು, ಅದರಲ್ಲಿ ಗೆದ್ದವರಿಗೆ ಸಂಸ್ಥೆ 10 ಲಕ್ಷ ರೂಪಾಯಿಯನ್ನು ಬಹುಮಾನವಾಗಿ ನೀಡಲಿದೆ. ಸ್ಲೀಪ್​ ಸ್ಲೀಪ್​ ಸ್ಲೀಪ್​ ಟಿಲ್​ ಯು ಬಿಕಮ್​ ಸ್ಲೀಪ್​ ಚಾಂಪಿಯೆನ್​ ಎನ್ನುತ್ತಿರುವ ಸಂಸ್ಥೆಯ ಸ್ಪರ್ಧೆ ಸಾಕಷ್ಟು ಜನರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.(ಏಜೆನ್ಸೀಸ್​)
ಬೆಳಗ್ಗೆ ಹಾಸಿಗೆ ಬಿಟ್ಟು ಏಳೋದಕ್ಕಾಗಲ್ಲ ಏಕೆ ಗೊತ್ತಾ? ನಿದ್ರೆಯ ಬಗ್ಗೆ ನಿಮಗೆ ಗೊತ್ತೇ ಇರದ ವಿಷಯಗಳಿವು!

ವಿಜಯಪುರದಲ್ಲಿ 77 ಸಾವಿರ ರೂಪಾಯಿ ಮೌಲ್ಯದ ಕಂಟ್ರಿ ಪಿಸ್ತೂಲ್​, ಗುಂಡು ಜಪ್ತಿ; ಇಬ್ಬರ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
