ನವದೆಹಲಿ: ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದಾಗ ಮಾಸ್ಕ್​ ಧರಿಸಬೇಕು, ಇಲ್ಲದಿದ್ದರೆ ದಂಡವಿಧಿಸಲಾಗುವುದು ಎಂಬ ನಿಯಮ ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಸ್ಪಷ್ಟಪಡಿಸಿದೆ.
ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಈ ಸ್ಪಷ್ಟನೆ ನೀಡಿದ್ದಾರೆ. ನೀವು ಕಾರಿನಲ್ಲಿ ಒಬ್ಬರೇ ಇದ್ದು, ಗಾಡಿ ಓಡಿಸುತ್ತಿದ್ದೀರಿ ಎಂದಾದರೆ ಮಾಸ್ಕ್​ ಕಡ್ಡಾಯವಲ್ಲ. ಅದನ್ನು ಕೊವಿಡ್​-19 ನಿಯಮ ಉಲ್ಲಂಘನೆ ಎಂದು ಪರಿಗಣಿಸಿ ದಂಡವಿಧಿಸುವುದಿಲ್ಲ. ನಾವು ಅಂಥ ಯಾವುದೇ ಸೂಚನೆಯನ್ನೂ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೇ ಗುಂಪಿನಲ್ಲಿ ಇದ್ದಾಗ ಮಾಸ್ಕ್​ ಕಡ್ಡಾಯ ಎಂದು ಹೇಳಿದ್ದಾರೆ.ಇದನ್ನೂ ಓದಿ:ಕಾಂಗ್ರೆಸ್‌ ಸಲಹೆಗಾರನಾಗಿದ್ದೆ ಎಂದು ಒಪ್ಪಿಕೊಂಡ ಫೇಸ್‌ಬುಕ್‌ ಎಂಡಿ: ವಿಚಾರಣೆ ವೇಳೆ ಹೇಳಿದ್ದೇನು?
ಹಲವು ಪ್ರಮುಖ ನಗರಗಳಲ್ಲಿ, ಅದರಲ್ಲೂ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಟ್ರಾಫಿಕ್​ ಪೊಲೀಸರು ಕಾರಿನಲ್ಲಿ ಒಬ್ಬರೇ ಹೋಗುತ್ತಿದ್ದಾಗಲೂ ಅವರನ್ನು ನಿಲ್ಲಿಸಿ ಮಾಸ್ಕ್​ ಧರಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ ಚಲನ್​ ವಿಧಿಸುತ್ತಿದ್ದಾರೆ ಎಂಬ ವರದಿಗಳು ಇತ್ತೀಚೆಗೆ ಹೆಚ್ಚಾಗಿದ್ದವು. ಮಾಧ್ಯಮಗಳಲ್ಲಿ ಫೋಟೋಗಳೂ ಪ್ರಕಟವಾಗಿದ್ದವು. ಹೀಗಿರುವಾಗ ಆರೋಗ್ಯ ಇಲಾಖೆಯಿಂದ ಬಂದ ಸ್ಪಷ್ಟನೆ ಮಹತ್ವ ಎನಿಸಿದೆ. (ಏಜೆನ್ಸೀಸ್​)
ಕುಲದೇವತೆಗಾಗಿ ಪತ್ನಿಯ ಶಿರಚ್ಛೇದ ಮಾಡಿದ ಭೂಪ; ಪುತ್ರರಿಂದಲೇ ಬಯಲಾಯ್ತು ಸತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
