ಬೆಂಗಳೂರು:ಸ್ಮಾರ್ಟ್​ಫೋನ್​ ಇದ್ದೂ ವಾಟ್ಸ್​ಆ್ಯಪ್​ ಇಲ್ಲದವರು ಇಲ್ಲವೇ ಇಲ್ಲ ಎಂದರೂ ಸರಿಯೇ ಎಂಬಷ್ಟರ ಮಟ್ಟಿಗೆ ವಾಟ್ಸ್​ಆ್ಯಪ್​ ಬಳಸುತ್ತಿರುವ ಗ್ರಾಹಕರು ಕೋಟಿಗಟ್ಟಲೆ ಸಂಖ್ಯೆಯಲ್ಲಿದ್ದಾರೆ. ತಕ್ಷಣಕ್ಕೆ ಏನೇ ಒಂದು ಮಾಹಿತಿ, ಫೋಟೋ-ವಿಡಿಯೋ ರವಾನೆ ಆಗಬೇಕೆಂದರೂ ಸಾಮಾನ್ಯವಾಗಿ ಮೊದಲು ಮೊರೆಹೋಗುವುದೇ ವಾಟ್ಸ್​ಆ್ಯಪ್​ಗೆ. ಹೀಗಿರುವಾಗ ಒಂದು ವೇಳೆ ವಾಟ್ಸ್​ಆ್ಯಪ್​ ಖಾತೆಯಲ್ಲಿ ಮುಂದುವರಿಯಲು ಆಗದಿದ್ದರೆ..?!
ಹೌದು.. ಮುಂದಿನ ವರ್ಷ ಇದ್ದಕ್ಕಿದ್ದಂತೆ ನಿಮ್ಮ ವಾಟ್ಸ್​ಆ್ಯಪ್​ ಅಕೌಂಟ್ ಡಿಸ್​​ಕನೆಕ್ಟೆಡ್​ ಆದರೂ ಆಗಬಹುದು. ಏಕೆಂದರೆ ಅಂಥದ್ದೊಂದು ಅಪ್​ಡೇಟ್​ಗೆ ವಾಟ್ಸ್​ಆ್ಯಪ್​ ಸಜ್ಜಾಗಿದೆ. ವಾಟ್ಸ್​ಆ್ಯಪ್​ನ ಮುಂದಿನ ಷರತ್ತುಗಳನ್ನು ಒಪ್ಪಿಕೊಳ್ಳದಿದ್ದರೆ ನಿಮ್ಮ ಖಾತೆಯನ್ನು ಬಳಸಲು ಸಾಧ್ಯವಿಲ್ಲ ಎಂಬ ಮಾಹಿತಿಯೊಂದು ಹೊರಬಿದ್ದಿದೆ. 2021ರ ಫೆ. 8ರಂದು ವಾಟ್ಸ್​ಆ್ಯಪ್​ ಹೊಸ ಷರತ್ತುಗಳನ್ನು ಪ್ರಕಟಿಸಲಿದ್ದು, ಬಳಕೆದಾರರು ಮುಂದುವರಿಯಲು ಅದಕ್ಕೆ ಒಪ್ಪಿಗೆ ಸೂಚಿಸುವುದು ಅನಿವಾರ್ಯ ಎನ್ನಲಾಗಿದೆ.
ವಾಟ್ಸ್​ಆ್ಯಪ್​ ತನ್ನ ಡೇಟಾಗಳನ್ನು ಹೇಗೆ ನಿಭಾಯಿಸಲಿದೆ ಎಂಬ ಬಗ್ಗೆ ಇದರಲ್ಲಿ ಮಾಹಿತಿಗಳು ಇರಲಿವೆ. ಫೇಸ್​ಬುಕ್​ ಮಾಲೀಕತ್ವದ ಈ ವಾಟ್ಸ್​ಆ್ಯಪ್​ ಮೂಲಕ ಹೇಗೆ​ ಚಾಟ್​ಗಳನ್ನು ಬಳಸಿಕೊಳ್ಳಲಾಗುತ್ತದೆ ಎಂಬ ಮಾಹಿತಿಯೂ ಇರಲಿದೆ. ಮುಂದಿನ ಅಪ್​ಡೇಟ್ಸ್​ ಮೂಲಕ ವಾಟ್ಸ್ಆ್ಯಪ್​ ಬಳಕೆದಾರರಿಗೆ ಜಾಹೀರಾತಿರದ ಕೆಲವು ಮಾಹಿತಿಗಳನ್ನು ನೀಡಲಾಗುತ್ತದೆ. ಇದನ್ನು ನೇರವಾಗಿ ಚಾಟ್​ ರೂಪದಲ್ಲಿ ಕಳುಹಿಸದಿದ್ದರೂ ಇನ್​ ಆ್ಯಪ್​ ಬ್ಯಾನರ್​ ಥರ ಕಳುಹಿಸಲಾಗುವುದು. ಇದನ್ನು ಕ್ಲಿಕ್​ ಮಾಡಿದರೆ ಹೊರಗಿನ ಸೈಟ್​ಗೆ ಕರೆದೊಯ್ಯಲಿದೆ ಎಂಬುದು ಕಂಪನಿ ಮೂಲಗಳಿಂದ ತಿಳಿದುಬಂದಿದೆ. ಈ ಕುರಿತ ಎಲ್ಲ ಮಾಹಿತಿಗಳು 2021ರ ಫೆ. 8ರ ಅಪ್​ಡೇಟ್ಸ್​ನಲ್ಲಿ ಬರುವ ಷರತ್ತಿನಲ್ಲಿ ಇರಲಿದ್ದು, ಅದಕ್ಕೆ ಒಪ್ಪಿಗೆ ಸೂಚಿಸಿದರೆ ಬಳಕೆದಾರರು ವಾಟ್ಸ್​ಆ್ಯಪ್​ನಲ್ಲಿ ಮುಂದುವರಿಯಲು ಸಾಧ್ಯ ಎನ್ನಲಾಗಿದೆ. (ಏಜೆನ್ಸೀಸ್​)
‘ಒಬ್ಬನ ತಲೆ ಕಡಿದೆ, ಇನ್ನೊಬ್ಬನ ಇರಿದೆ, ಮತ್ತೊಬ್ಬನ ಕತ್ತರಿಸಿದೆ…ಅವರ್ಯಾರೋ ನಂಗೊತ್ತಿಲ್ಲ… ಆಹಾ! ಅದೆಂಥ ನೆಮ್ಮದಿ..’

ತಂದೆಯವರು ನನಗೇನೂ ಆಸ್ತಿ ಕೊಟ್ಟಿಲ್ಲ- ಕೇಸ್​ ಹಾಕಬಹುದಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 19 =
Remember me
