ನವದೆಹಲಿ:ಪ್ರಧಾನಿ ಮೋದಿ 3.0 ಸರ್ಕಾರದ ಬಜೆಟ್ ಅಧಿವೇಶನ 2024 ಜುಲೈ 22 ರಿಂದ ಆಗಸ್ಟ್ 12ರವರೆ ನಡೆಯಲಿದೆ. 1 ಫೆಬ್ರವರಿ 2024 ರಂದು ಮಧ್ಯಂತರ ಬಜೆಟ್ ಮಂಡಿಸಲಾಗಿತ್ತು. ಈಗ ಸರ್ಕಾರ ರಚನೆಯಾದ ನಂತರ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗಲಿದೆ. ಈ ಬಾರಿಯ ಕೇಂದ್ರ ಬಜೆಟ್​ ಅನ್ನು ಮಂಡಿಸುವುದರ ಮೂಲಕ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಹೊಸ ದಾಖಲೆ ಸೃಷ್ಟಿಸಲಿದ್ದಾರೆ. ಸತತ ಏಳು ಬಾರಿ ಕೇಂದ್ರ ಬಜೆಟ್ ಮಂಡಿಸಿದ ದೇಶದ ಮೊದಲ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಇದನ್ನು ಓದಿ:ತಂಬಾಕು ಉದ್ಯಮದಲ್ಲಿ ಎಫ್​ಡಿಐ ಸಡಿಲಗೊಳಿಸುವುದಿಲ್ಲ; ಪಿಯೂಷ್ ಗೋಯಲ್
ವಾಸ್ತವವಾಗಿ, ಭಾರತೀಯ ಬಜೆಟ್‌ನ ಕೆಲ ವಿಶೇಷ ಲಕ್ಷಣಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಅದರಲ್ಲೊಂದು ಸಂಪ್ರದಾಯ ಭಾರತದಲ್ಲಿ ಸಂಜೆ 5 ಗಂಟೆಗೆ ಬಜೆಟ್​ ಮಂಡನೆಯಾಗುತಿದದ್ದು. ಇದು ಕೆಲವೇ ಜನರಿಗೆ ಮಾತ್ರ ಗೊತ್ತಿರುತ್ತೆ, ಸಂಜೆ 5ಕ್ಕೆ ಬಜೆಟ್​​ ಮಂಡನೆ ಮಾಡುವುದಕ್ಕೂ ಒಂದು ವಿಶೇಷತೆ ಇತ್ತು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ 2000ರವರೆಗೂ ಕೇಂದ್ರ ಬಜೆಟ್​ ಅನ್ನು ಸಂಸತ್ತಿನಲ್ಲಿ ಸಂಜೆ 5 ಗಂಟೆಗೆ ಮಂಡಿಸಲಾಗುತಿತ್ತು. ಆದರೆ ಮೊದಲ ಬಾರಿಗೆ ಅಟಲ್​ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು 2001ರಲ್ಲಿ ಬ್ರಿಟಿಷರ ಕಾಲದ ಸಂಪ್ರದಾಯವನ್ನು ಕೊನೆಗೊಳಿಸಿತು. ಅಂದಿನ ವಿತ್ತ ಸಚಿವರಾಗಿದ್ದ ಯಶವಂತ್ ಸಿನ್ಹಾ ಅವರು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು
ಸಂಜೆ 5 ಗಂಟೆಗೆ ಬಜೆಟ್​ ಮಂಡನೆ ಮಾಡುವುದರ ಹಿಂದೆಯೂ ಒಂದು ಲಾಜಿಕ್​ ಇತ್ತು. ಬ್ರಿಟಿಷರ ಕಾಲದಿಂದಲೂ ಬಜೆಟ್​ ಮಂಡನೆ ವ್ಯವಸ್ಥೆ ನಡೆದು ಬಂದಿತ್ತು. ಬ್ರಿಟಿಷರ ಹಿಡಿತದಲ್ಲಿದ್ದಾಗ ಭಾರತದ ಆಡಳಿತ ವ್ಯವಸ್ಥೆಯು ಬ್ರಿಟನ್ ಆಡಳಿತದಲ್ಲಿತ್ತು. ಬ್ರಿಟನ್​​ನಲ್ಲಿ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸುತ್ತಿದ್ದರು. ಅದರಲ್ಲಿ ಭಾರತದ ಬಜೆಟ್​ ಕೂಡ ಸೇರಿರುತಿತ್ತು. ಬಜೆಟ್​​ ಅನ್ನು ಶಿಫಾರಸು ಮಾಡಲು ಭಾರತದ ಸಂಸತ್ತಿನಲ್ಲಿ ಬಜೆಟ್​​​ ಅನ್ನು ಅಂಗೀಕರಿಸುವುದು ಅಗತ್ಯವಾಗಿತ್ತು. ಆದ್ದರಿಂದ ಬ್ರಿಟನ್‌ನಲ್ಲಿ ಬೆಳಗ್ಗೆ ಬಜೆಟ್ ಮಂಡಿಸಿದ ನಂತರ ಅದನ್ನು ಭಾರತದಲ್ಲಿ ಮಂಡಿಸಿ ಸಂಜೆ 5 ಗಂಟೆಗೆ ಅಂಗೀಕರಿಸಲಾಗುತಿತ್ತು. ಭಾರತದಲ್ಲಿ ಬಜೆಟ್ ಮಂಡನೆ ವೇಳೆ ಬ್ರಿಟನ್​​ನಲ್ಲಿ ಸುಮಾರು ಬೆಳಗ್ಗೆ 11.30 ಸಮಯ ಆಗಿರುತಿತ್ತು.
ಭಾರತ ಸ್ವತಂತ್ರವಾಗುವ ಮುನ್ನವೇ ಬ್ರಿಟಿಷ್ ಸರ್ಕಾರದಲ್ಲಿಯೂ ಬಜೆಟ್ ಮಂಡಿಸಲಾಗಿತ್ತು. ಭಾರತದಲ್ಲಿ ಮೊದಲ ಬಜೆಟ್ ಅನ್ನು 18 ಫೆಬ್ರವರಿ 1869ರಂದು ಜೇಮ್ಸ್ ವಿಲ್ಸನ್ ಮಂಡಿಸಿದರು. ಭಾರತದ ಸ್ವಾತಂತ್ರ್ಯದ ಘೋಷಣೆಯ ನಂತರ 2 ಫೆಬ್ರವರಿ 1946ರಂದು ಲಿಯಾಖತ್ ಅಲಿ ಖಾನ್ ಅವರು ಬಜೆಟ್ ಮಂಡಿಸಿದರು. ನಂತರ ಅವರು ಪಾಕಿಸ್ತಾನದ ಮೊದಲ ಪ್ರಧಾನಿಯಾದರು. ಸ್ವತಂತ್ರ ಭಾರತದಲ್ಲಿ 1947ರ ನವೆಂಬರ್​​ನಲ್ಲಿ ದೇಶದ ಮೊದಲ ಹಣಕಾಸು ಸಚಿವ ಷಣ್ಮುಖ ಶೆಟ್ಟಿ ಮೊದಲ ಬಜೆಟ್ ಮಂಡಿಸಿದರು. (ಏಜೆನ್ಸೀಸ್​​​)
ಆಸ್ಟ್ರೀಯಾ ಚಾನ್ಸೆಲರ್ ಕಾರ್ಲ್ ನೆಹ್ಮರ್​ ಜತೆ ‘ನಮೋ’ ಮಹತ್ವದ ಚರ್ಚೆ; ಬಳಿಕ ಪ್ರಧಾನಿ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 1 =
Remember me
