ನವದೆಹಲಿ:ಜಾಗತಿಕವಾಗಿ ಬಾಧಿಸುತ್ತಿರುವ ಕೋವಿಡ್​-19 ಸಾಂಕ್ರಾಮಿಕಕ್ಕೆ ರೋಗನಿರೋಧಕ ಚುಚ್ಚುಮದ್ದು ಕಂಡು ಹಿಡಿಯಲು ವಿಶ್ವದ ವಿವಿಧ ಸಂಸ್ಥೆಗಳ ರೀತಿಯಲ್ಲೇ ಅಮೆರಿಕದ ಗಿಲ್​ಲೀಡ್​ ಸೈನ್ಸಸ್​ ಇಂಕ್​ ಸಂಸ್ಥೆ ಕೂಡ ಪ್ರಯತ್ನ ಮಾಡುತ್ತಿದೆ. ಅದೀಗ ರೆಂಡೆಸಿವಿರ್​ ಎಂಬ ಔಷಧ ಆಧಾರಿತ ಚುಚ್ಚುಮದ್ದನ್ನು ಸಿದ್ಧಪಡಿಸಿದ್ದು, ಅದರ ಕ್ಲಿನಿಕಲ್​ ಪರೀಕ್ಷೆ ಅಂತಿಮ ಘಟ್ಟದಲ್ಲಿದೆ.
ಇದೇ ವೇಳೆ ಆ ಒಂದು ಚಚ್ಚುಮದ್ದಿನ ಬೆಲೆಯ ಕುರಿತು ಮಾಹಿತಿ ಬಹಿರಂಗವಾಗಿದ್ದು, ಒಂದು ಚುಚ್ಚುಮದ್ದಿಗೆ 3,84,200 ರೂ. ದರ ನಿಗದಿಯಾಗಿದೆ.
ಇದನ್ನೂ ಓದಿ:24 ಗಂಟೆಯಲ್ಲಿ 16 ಸಾವಿರಕ್ಕೂ ಹೆಚ್ಚು ಕರೊನಾ ಪ್ರಕರಣಗಳು; ಇದು ಇಲ್ಲಿವರೆಗಿನ ದಾಖಲೆಯ ಸಂಖ್ಯೆ
ಜಾಗತಿಕವಾಗಿ 10 ದಶಲಕ್ಷಕ್ಕೂ ಹೆಚ್ಚು ಕೋವಿಡ್​-19 ಸೋಂಕಿತರು ಇದ್ದಾರೆ. ಅಲ್ಲದೆ, ಸೋಂಕು ತುಂಬಾ ವೇಗವಾಗಿ ಪ್ರಸಾರವಾಗುತ್ತಿರುವ ಹಿನ್ನೆಲೆಯಲ್ಲಿ ಈ ಪಿಡುಗನ್ನು ನಿಯಂತ್ರಿಸಲು ಶೀಘ್ರವಾಗಿ ರೋಗನಿರೋಧಕ ಚುಚ್ಚುಮದ್ದನ್ನು ಕಂಡುಹಿಡಿಯುವ ಅವಶ್ಯಕತೆ ಇದೆ.
ಇನ್ಹೇಲರ್​ ಸಂಶೋಧನೆ:ರೆಂಡೆಸಿವಿರ್​ ಚುಚ್ಚುಮದ್ದಿನ ಜತೆಗೆ ಗಿಲ್​ಲೀಡ್​ ಸೈನ್ಸಸ್​ ಇಂಕ್​ ರೆಂಡೆಸಿವಿರ್​ನ ಇನ್ಹೇಲರ್​ ಅನ್ನೂ ಸಿದ್ಧಪಡಿಸಲು ತಯಾರಿ ನಡೆಸಿದೆ. ಇದರ ಕ್ಲಿನಿಕಲ್​ ಪರೀಕ್ಷೆಯನ್ನು ಕೂಡ ಶೀಘ್ರದಲ್ಲೇ ಆರಂಭಿಸುವುದಾಗಿ ಕಂಪನಿ ಹೇಳಿಕೊಂಡಿದೆ.
ಥರ್ಮಲ್​ ಸ್ಕ್ರೀನಿಂಗ್​ ವೇಳೆ ಕುಸಿದುಬಿದ್ದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
