ತಮಿಳುನಾಡು:ಬೆಲೆಬಾಳುವ ಬಂಗಾರವನ್ನು ಆಭರಣವಾಗಿ ಬಳಸುತ್ತಾರೆ, ಅಗತ್ಯಕ್ಕಿಂತ ಹೆಚ್ಚು ತೊಟ್ಟವರು ನಾಲ್ಕು ಜನ ನೋಡಲಿ ಎಂದು ಶೋಕಿಗಾಗಿಯೂ ಧರಿಸಿರಬಹುದು. ಆದರೆ ಇವರು ಕೆ.ಜಿ.ಗಟ್ಟಲೆ ಚಿನ್ನವನ್ನು ಯಾರೂ ನೋಡದ ಜಾಗದಲ್ಲಿ ಇರಿಸಿಕೊಂಡಿದ್ದರು. ಒಂದು ವೇಳೆ ಈ ಚಿನ್ನವನ್ನು ಹಾಗೇ ಯಾರದ್ದಾದರೂ ಕೈಗಿಟ್ಟು ಎಲ್ಲಿಂದ ಸಿಕ್ಕಿತು ಎಂದರೆ ಮುಟ್ಟಲಿಕ್ಕೂ ಅಸಹ್ಯ ಅನಿಸಬಹುದು!
ಹೌದು.. ಇದು ಚಿನ್ನ ಕಳ್ಳಸಾಗಣೆಯ ವಿಷಯ. ಇದರಲ್ಲಿ ಇಬ್ಬರು ಪ್ರತ್ಯೇಕವಾಗಿ ತೊಡಗಿಸಿಕೊಂಡಿದ್ದು, ಇಬ್ಬರೂ ಕೊನೆಗೂ ಸಿಕ್ಕಿಬಿದ್ದಿದ್ದಾರೆ. ಚೆನ್ನೈನ ಕಸ್ಟಮ್ಸ್​ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 1.97 ಕೋಟಿ ರೂಪಾಯಿ ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿದೆ. ದುಬೈ/ಶಾರ್ಜಾ ವಿಮಾನದಿಂದ ಬಂದಿದ್ದ ಇವರು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದರು. ಆ ಪೈಕಿ ಒಬ್ಬಳು ಮಹಿಳೆ 600 ಗ್ರಾಮ್​ ಚಿನ್ನವನ್ನು ಚಾಕಲೇಟ್​ ಪ್ಯಾಕೆಟ್ ಒಳಗಿರಿಸಿ ಕಳ್ಳಸಾಗಣೆ ಮಾಡುತ್ತಿದ್ದಳು. ಮತ್ತೊಬ್ಬ ಪ್ರಯಾಣಿಕ 3.18 ಕೆ.ಜಿ. ತೂಕದ ಚಿನ್ನವನ್ನು ಗುದದ್ವಾರದಲ್ಲಿ ಇಟ್ಟುಕೊಂಡು ಕಳ್ಳಸಾಗಣೆ ಮಾಡುತ್ತಿದ್ದ. ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿರುವ ಕಸ್ಟಮ್ಸ್ ಅಧಿಕಾರಿಗಳು ಆ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. (ಏಜೆನ್ಸೀಸ್​)
https://twitter.com/ANI/status/1347168801939288064?s=20
ಟ್ಯೂಷನ್​ ಕ್ಲಾಸ್​ಗೆ ಹೊರಟಿದ್ದ ಬಾಲಕಿಯ ಮೇಲೆ ಗ್ಯಾಂಗ್​ ರೇಪ್​! ಕಿಟಕಿಯಿಂದ ಹಾರಿ ಜೀವ ಉಳಿಸಿಕೊಂಡ ಬಾಲಕಿ

ಡ್ಯೂಟಿ ಮುಗಿಸಿ ರಾತ್ರಿ ಬಂದವ ಮಗಳ ಬಾಯಿಗೆ ಬಟ್ಟೆ ತುರುಕುತ್ತಿದ್ದ.. ಕೈಕಾಲು ಕಟ್ಟಿ ಹೊಡೆಯುತ್ತಿದ್ದ…

ರಾಧಿಕಾಗೆ ಮಾತ್ರವಲ್ಲ, ಬೇರೆ 8 ನಟಿಯರಿಗೂ ಲಕ್ಷಾಂತರ ಹಣ ಕೊಟ್ಟಿದ್ದ ಯುವರಾಜ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 11 =
Remember me
